ಅಮವಾಸ್ಯೆ ಅಥವಾ ಪೌರ್ಣಿಮೆಯಂದು ಗ್ರಹಣಗಳು ಸಂಭವಿಸುತ್ತಲೇ ಇರುತ್ತವೆ. ಗ್ರಹಗಳ ಚಲನೆಯಿಂದಾಗಿ ಈ ಗ್ರಹಣಗಳು ಉಂಟಾಗುತ್ತವೆ. ಸೂರ್ಯ ಚಂದ್ರ ಹಾಗೂ ಭೂಮಿಯು ಒಂದೇ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಅಥವಾ ಚಂದ್ರಗ್ರಹಣಗಳು ಸಂಭವಿಸುತ್ತವೆ. ಅಮವಾಸ್ಯೆಯ ದಿನ ಸೂರ್ಯಗ್ರಹಣವು ಹಾಗೂ ಹುಣ್ಣುಮೆಯ ದಿನ ಚಂದ್ರಗ್ರಹಣವು ಉಂಟಾಗುತ್ತದೆ. ಈ ಗ್ರಹಣಗಳಿಂದಾಗಿ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅಂತೇಯೆ ನಮ್ಮ ಜೀವನದ ಮೇಲೆಯು ಸಹ ಪರಿಣಾಮ ಬೀರುತ್ತದೆ.
ಇದೇ ಏಪ್ರಿಲ್ ತಿಂಗಳಿನ 20ನೇಯ ತಾರಿಕಿನಿಂದು ಸಂಭವಿಸಲಿರುವ ಸೂರ್ಯ ಗ್ರಹಣವು ಅತ್ಯಂತ ಶಕ್ತಿಶಾಲಿ ಗ್ರಹಣವಾಗಿದ್ದು, ಅನೇಕ ರಾಶಿಯವರ ಮೇಲೆ ಪರಿಣಾಮವನ್ನು ಬೀರಲಿದೆ. ಈ ಭಯಂಕರ ಅಮವಾಸ್ಯೆಯು ಶೋಭಾಕೃತ ಸಂವತ್ಸರದ ಮೊದಲ ಅಮವಾಸ್ಯೆಯಾಗಿದ್ದು, ಆ ದಿನ ಸಂಭವಿಸಲಿರುವಂತಹ ಸೂರ್ಯ ಗ್ರಹಣ 499 ವರ್ಷಗಳ ನಂತರ ಅಪರೂಪದ ಮಹಾ ಸಂಯೋಗದಿಂದ ಉಂಟಾಗುವಂತದ್ದಾಗಿದೆ. ಈ ದಿನದಿಂದ ನಿಮ್ಮ ಗ್ರಹಗತಿಗಳು ಬದಲಾಗಲಿದ್ದು, ಬದಲಾಗುವ 4 ರಾಶಿಗಳಲ್ಲಿ ಕೋಟ್ಯಾಧಿಪತಿಯಾಗುವ ಯೋಗವು ಕೂಡಿ ಬಂದಿರುತ್ತದೆ.
ಇದು ವರ್ಷದ ಮೊದಲ ಖಗ್ರಾಸ ಸೂರ್ಯ ಗ್ರಹಣವಾಗಿದ್ದು, ಮೇಷ ರಾಶಿ ಹಾಗೂ ಅಶ್ವಿನಿ ನಕ್ಷತ್ರದ ಮೇಲೆ ಗ್ರಹಣವು ಹಿಡಿಯಲಿದೆ. ಇದು ಸುಮಾರು ಐದು ಗಂಟೆ ಇಪ್ಪತೈದು ನಿಮಿಷಗಳ ಅವಧಿಯಲ್ಲಿ ಇರಲಿದ್ದು, ಆ ಸಮಯದಲ್ಲಿ ವಿಸ್ಮಯಕಾರಿ ಘಟನೆಗಳನ್ನು ನಾವು ನೋಡಬಹುದಾಗಿದೆ. ಗ್ರಹಣವೆಂಬುದು ಖಗೋಳದಲ್ಲಿ ನಡೆಯುವಂತಹ ಸಾಮಾನ್ಯ ಘಟನೆಯಾದರೂ ಸಹ ಅದರಿಂದ ಉತ್ಪನ್ನವಾಗಿ ಹೊರ ಬರುವ ವಿಕಿರಣಗಳು ಮನುಷ್ಯನ ಬದುಕನ್ನು ತಲೆಕೆಳಗು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಈ ದಿನ ಎಚ್ಚರಿಕೆಯಿಂದ ಇರಬೇಕಾದದ್ದು ನಮ್ಮ ಕರ್ತವ್ಯ.
ಗುರುವಾರ ಏಪ್ರಿಲ್ 20, 2023ರಂದು ಸಂಭವಿಸಲಿರುವ ಮಹಾ ಸೂರ್ಯಗ್ರಹಣದಿಂದಾಗಿ ಈ ನಾಲ್ಕು ರಾಶಿಯವರು ಅತ್ಯಧಿಕ ಧನ ಸಂಪತ್ತನ್ನು ಪಡೆಯಲಿದ್ದಾರೆ. ಸೂರ್ಯಗ್ರಹಣದ ನಂತರ ಶುಭ ಗ್ರಹವಾದ ಗುರುಗ್ರಹವು ರಾಶಿ ಪರಿವರ್ತನೆಯನ್ನು ಮಾಡಿ ಗ್ರಹಣದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಗ್ರಹಣದ ಸಮಯದಲ್ಲಿ ಸೂರ್ಯನು ಉಚ್ಚ ರಾಶಿಯಾದ ಮೇಷ ರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಕೆಲವೊಂದು ವ್ಯತಿರಿಕ್ತ ಪರಿಣಾಮವನ್ನು ಇವರು ಅನುಭವಿಸ ಬೇಕಾಗಬಹುದು.
ಗ್ರಹಣದ ಸಮಯ ಮುಂಜಾನೆ 7 ಗಂಟೆ 5 ನಿಮಿಷಕ್ಕೆ ಆರಂಭವಾಗಲಿದೆ. ಖಗ್ರಾಸ ಸಮಯ 8 ಗಂಟೆ 7ನಿಮಿಷಕ್ಕೆ ಇರುತ್ತದೆ. ಹಾಗೂ ಗ್ರಹಣದ ಮಧ್ಯಕಾಲವು 9,47 ನಿಮಿಷಗಳಲ್ಲಿ ಆಗಲಿದೆ. ಮಧ್ಯಾನ್ಹ12ಗಂಟೆ 29ನಿಮಿಷಕ್ಕೆ ಗ್ರಹಣ ಸಮಾಪ್ತಿಯಾಗಲಿದೆ. ಒಟ್ಟಾರೆಯಾಗಿ ಈ ಸೂರ್ಯ ಗ್ರಹಣವು 5ಗಂಟೆ 26. ನಿಮಿಷಗಳ ಕಾಲ ಇರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಮುಗಿದ ನಂತರ ಭೂಮಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ.
ಗ್ರಹಣವು ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವಂತದ್ದಾಗಿದೆ. ಹಾಗಾಗಿ ಈ ಸಮಯದಲ್ಲಿ ಈ ನಾಲ್ಕು ರಾಶಿಯವರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ರಾಶಿಯವರು ಗ್ರಹಣ ಕಳೆಯುತ್ತಿದ್ದ ಹಾಗೆ ತಮ್ಮ ಹೊಸ ಹೊಸ ಉದ್ಯೋಗಗಳನ್ನು ಕಂಡು ಕೊಳ್ಳುತ್ತಾರೆ. ಇವರು ಕೈ ಹಾಕಿದ ಎಲ್ಲ ಉದ್ಯಮಗಳಲ್ಲಿಯು ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಇವರು ಇಷ್ಟು ದಿನ ಅನುಭವಿಸಿದ ಕಷ್ಟಗಳು ದೂರವಾಗಲಿದ್ದು ನೆಮ್ಮದಿಯ ಜೀವನವನ್ನು ಅನುಭವಿಸುವ ಯೋಗವು ಇವರಿಗೆ ಬಂದಿರುತ್ತದೆ.
ಅಮವಾಸ್ಯೆಯಂದು ನಡೆಯುವ ಈ ಗ್ರಹಣದ ಸಕಾರಾತ್ಮಕ ಪರಿಣಾಮಗಳು ಈ ನಾಲ್ಕು ರಾಶಿಗಳ ಮೇಲೆ ಇರಲಿದ್ದು, ಇವರಿಗೆ ನೌಕರಿಯಲ್ಲಿ ಉನ್ನತ ಸ್ಥಾನ ಸಿಗಲಿದೆ. ಈ ರಾಶಿಗಳ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್’ನಂತಹ ಸೌಲಭ್ಯ ದೊರೆಯಲಿದ್ದು ಉನ್ನತ ವ್ಯಾಸಾಂಗಕ್ಕೆ ಒಳ್ಳೆಯ ಅಡಿಪಾಯ ದೊರೆಯಲಿದೆ. ವಿವಾಹ ಯೋಗವು ಈ ರಾಶಿಯವರನ್ನು ಅರಸಿ ಬರಲಿದ್ದು, ಶೀಘ್ರವಾಗಿ ಸಂಗಾತಿಗಳ ಜೊತೆ ಬದುಕು ನಡೆಸಲಿದ್ದಿರಿ. ಹಾಗಿದ್ದರೆ ಆ ನಾಲ್ಕು ರಾಶಿಗಳು ಯಾವವೆಂದರೆ, ವೃಷಭ, ಧನಸ್ಸು, ಮಕರ ಹಾಗೂ ಮೀನ ರಾಶಿಯಾಗಿದೆ.
ಮೇಷ ರಾಶಿಯಲ್ಲಿ ಗ್ರಹಣವು ನಡೆಯುವುದರಿಂದ ಈ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಗ್ರಹಣ ಕಾಲದಲ್ಲಿ ಶಿವನ ಆರಾಧನೆಯನ್ನು ಮಾಡುವುದರಿಂದ ಒಳಿತಾಗುತ್ತದೆ.