ನಮ್ಮ ಪುರಾಣ ಗ್ರಂಥವಾಗಿರುವ ಗರುಡ ಪುರಾಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಭಗವಾನ್ ಶ್ರೀ ವಿಷ್ಣುವೇ ತನ್ನ ವಾಹನ ಆಗಿರುವ ಗರುಡನಿಗೆ ಕೆಲವೊಂದು ವಿಚಾರಗಳನ್ನು ಹೇಳಿರುವುದೇ ಗರುಡ ಪುರಾಣದಲ್ಲಿ ಅಡಕವಾಗಿರುವುದು. ಇದರಲ್ಲಿ ಕೆಲವೊಂದು ರೀತಿಯ ಬೋಧನೆಗಳನ್ನು ಮಾಡಬಾರದು ಅದರಿಂದ ದೇಹದ ಆರೋಗ್ಯ ಕ್ಷಣಿಸುತ್ತದೆ ಹಾಗೂ ವಯಸ್ಸಿಗೂ ಮುನ್ನವೇ ವೃದ್ಧರಂತೆ ಕಾಣಿಸುತ್ತಾರೆ ಹಾಗೂ ಇದು ನಿಮ್ಮನ್ನು ಅಧೋಗತಿಗೆ ತಳ್ಳುತ್ತದೆ ಎಂಬುದಾಗಿ ಕೂಡ ಉಲ್ಲೇಖಿತವಾಗಿದೆ. ಅಷ್ಟಕ್ಕೂ ಆ ಮೂರು ರೀತಿಯ ಭೋಜನಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೊದಲನೇದಾಗಿ ಶ್ರೀಕೃಷ್ಣ ಬೋಧಿಸಿರುವ ಪ್ರಕಾರ ಒಂದು ವೇಳೆ ಯಾವುದೇ ಊಟದ ಮೇಲೆ ಯಾರಾದರೂ ಹಾದು ಹೋಗಿರುತ್ತಾರೆ ಅಥವಾ ಪಾದಸ್ಪರ್ಶ ಆಗಿದ್ದರೆ ಆ ಊಟವನ್ನು ಯಾವತ್ತೂ ಕೂಡ ಸೇವಿಸಬಾರದು ಎಂಬುದಾಗಿ ಬೋಧಿಸಿದ್ದಾರೆ. ಆ ಆಹಾರವನ್ನು ಪಶು ಪಕ್ಷಿಗಳಿಗೆ ನೀಡಬೇಕು ಎಂಬುದಾಗಿ ಹೇಳುತ್ತಾರೆ. ಒಂದು ವೇಳೆ ನೀವು ಆ ದಾಟಿ ಹೋದ ಆಹಾರವನ್ನು ಸೇವಿಸಿದರೆ ನಿಮ್ಮ ಆಯಸ್ಸು ಕಡಿಮೆ ಆಗಬಹುದು ಹಾಗೂ ನಿಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ಪ್ರಾರಂಭ ಆಗಬಹುದು.
ಎರಡನೇದಾಗಿ ಯಾವುದೇ ಆಹಾರದಲ್ಲಿ ಒಂದು ವೇಳೆ ಅದರಲ್ಲಿ ಕೂದಲು ಅಥವಾ ಕೇಶ ಸಿಕ್ಕಿದರೆ ಅದನ್ನು ಯಾವತ್ತೂ ಕೂಡ ಸೇವಿಸಬಾರದು. ಯಾವುದೇ ನೈವೇದ್ಯದಲ್ಲಿ ಕೂದಲು ಸಿಕ್ಕಿದರೂ ಕೂಡ ಅದನ್ನು ಈಶ್ವರನಿಗೆ ಅರ್ಪಿಸಬಾರದು. ಇದು ತ್ಯಾಜ್ಯಕ್ಕೆ ಸಮಾನವಾಗಿದ್ದು ಪ್ರೇತಗಳು ತಿನ್ನುವ ಆಹಾರ ಎಂಬುದಾಗಿ ಅರ್ಥೈಸಲಾಗುತ್ತದೆ.
ಕೊನೆಯದಾಗಿ ಬೇರೆಯವರಿಗೆ ನೀಡಿರುವ ಊಟವನ್ನು ಯಾವತ್ತೂ ಕೂಡ ನೀವು ಸೇವಿಸಬಾರದು. ಶ್ರೀ ಕೃಷ್ಣ ಪರಮಾತ್ಮ ಹೇಳುವ ಪ್ರಕಾರ ಒಂದು ವೇಳೆ ಯಾರಿಗಾದರೂ ಆ ಊಟ ಸಿಗುತ್ತದೆ ಎಂದರೆ ಅದು ಅವರು ಸಂಪಾದಿಸಿದ್ದು ಹಾಗೋದು ಅವರಿಗಾಗಿ ಮಾತ್ರ ಸೀಮಿತವಾದುದು ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ ಬೇರೆಯವರ ಆಹಾರವನ್ನು ತಿನ್ನುವುದು ಅಥವಾ ಬೇರೆಯವರ ಆಹಾರವನ್ನು ಕಿತ್ತು ತಿನ್ನುವುದು ತಾಯಿ ಅನ್ನಪೂರ್ಣೇಶ್ವರಿ ಗೆ ಕೋಪ ಮಾಡಿದಂತಾಗುತ್ತದೆ ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿತವಾಗಿದೆ.