ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು ತೊಂಭತ್ತು ಕಿಲೋ ಮೀಟರ್ ದೂರದಲ್ಲಿದೆ ಮತ್ತು ಶೃಂಗೇರಿ ಶಾರದಾ ಮಾತೆ ತುಂಗಾ ನದಿಯ ದಡದಲ್ಲಿ 8 ನೇ ಶತಮಾನದಲ್ಲಿ ನೆಲೆಸಿದ್ದಾಳೆ ಮತ್ತು ಶೃಂಗೇರಿಗೆ ಪುರಾತನ ಕಾಲದಲ್ಲಿ ಶೃಂಗಗಿರಿ ಎಂದು ಕರೆಯಲಾಗುತಿತ್ತು ಮತ್ತು ಇಲ್ಲಿನ ಗಿರಿಗಳು ಗೋವಿನ ಕೊಂಬಿನ ಆಕರದಲ್ಲಿ ಇರುವುದರಿಂದ ಇದಕ್ಕೆ ಶೃಂಗೇರಿ ಎಂದು ಹೆಸರು ಬಂದಿತ್ತು ಎಂದು ಹೇಳುತ್ತಾರೆ. ಮತ್ತೊಂದು ಕಾರಣ ಹೇಳುವುದಾದರೆ ಇಲ್ಲಿ ಋಷಿ ಮುನಿಗಳು ತಪಸ್ಸನ್ನು ಮಾಡುತ್ತಿದ್ದರು ಮತ್ತು ಊರಿನಲ್ಲಿ ಮಳೆ ಬರದೇ ಬರಗಾಲ ಬಂದಾಗ ಮುನಿಗಳು ತಪಸ್ಸು ಮಾಡಿ ಇಲ್ಲಿಗೆ ಮಳೆ ತಂದರು ಎಂದು ಹೇಳಲಾಗುವುದು ಮತ್ತು ಆ ಕಾರಣಕ್ಕಾಗಿಯೇ ಈ ಒಂದು ಊರನ್ನು ಶೃಂಗೇರಿ ಎಂದು ಕರೆದರು ಅಂತ ಕೂಡ ಹೇಳಲಾಗುತ್ತದೆ.
ಇನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇಶವನ್ನ ಸುತ್ತಿದ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನ ಸ್ಥಾಪನೆ ಮಾಡುತ್ತಾರೆ ಮತ್ತು ಆ ಪೀಠಗಳಲ್ಲಿ ಶೃಂಗೇರಿ ಕೂಡ ಒಂದು. ದೇಶ ಪರ್ಯಾಟನೆಯಲ್ಲಿ ಮುಳುಗಿದ್ದ ಶಂಕರಾಚಾರ್ಯರು ತುಂಗಾ ತೀರದ ಶೃಂಗೇರಿಗೆ ಬಂದಾಗ ಅವರಿಗೆ ಶಾಕ್ ಕೊಡುವಂತಹ ವಿಷಯ ಅವರ ಎದುರು ನೆಡೆಯುತ್ತದೆ. ಕಾಳಿಂಗ ಸರ್ಪ ಬಿಸಿಲಿನಿಂದ ಬೇಸತ್ತಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯನ್ನು ಎತ್ತಿ ನೆರಳಿನ್ನ ಕೊಡುತ್ತಿತ್ತು. ಇದನ್ನ ಕಂಡ ಶಂಕರಾಚಾರ್ಯರು ಪರಸ್ಪರ ಶತ್ರುಗಳಾದ ಹಾವು ಮತ್ತು ಕಪ್ಪೆಗಳೇ ಸ್ನೇಹದಿಂದ ವರ್ತಿಸುತ್ತಿದೆ ಮತ್ತು ಇದಕ್ಕಿಂತ ಪುಣ್ಯ ಕ್ಷೇತ್ರ ಇನ್ನೊಂದು ಇಲ್ಲ ಅನ್ನುವ ನಿರ್ಧಾರಕ್ಕೆ ಬಂದು ಈ ಜಾಗದಲ್ಲಿ ಶಾರದಾ ಪೀಠವನ್ನು ಸ್ಥಾಪನೆ ಮಾಡುತ್ತಾರೆ.
ಶಂಕರಾಚಾರ್ಯರು ಇಲ್ಲಿ ಪೀಠವನ್ನು ಸ್ಥಾಪನೆ ಮಾಡಿದರು ಆದರೆ ವಿಜಯನಗರ ಸಾಮ್ರಾಜ್ಯದ ಅರಸುಗಳಾದ ಹಕ್ಕಾ ಬುಕ್ಕರು ಇಲ್ಲಿ ದೇಗುಲವನ್ನು ನಿರ್ಮಾಣ ಮಾಡಿದರು ಎನ್ನಲಾಗುತ್ತಿದೆ, ಆದರೆ ಈ ದೇಗುಲವು ಹೊಯ್ಸಳರ ಕಾಲದಲ್ಲೇ ನಿರ್ಮಾಣ ಆಗಿದೆ ಎಂದು ವಾಸ್ತುಶಿಲ್ಪ ಹೇಳುತ್ತಿದೆ. ಇನ್ನು ಈಗ ಶೃಂಗೇರಿಯಲ್ಲಿ ಹೊಸ ದೇವಸ್ಥಾನ ಸ್ಥಾಪನೆ ಆಗಿದ್ದರು ಹಳೆ ದೇಗುಲ ಇನ್ನು ಇದೇ ಮತ್ತು ಇಲ್ಲಿ ಹಲವಾರು ದೇವರುಗಳ ಸಾನಿಧ್ಯ ಇದೆ, ಇನ್ನು ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿ ದಡದಲ್ಲಿ ರಾಶಿ ರಾಶಿ ಸುಂದರವಾದ ಕಪ್ಪು ಮೀನುಗಳು ಇವೆ ಮತ್ತು ಈ ಮೀನುಗಳನ್ನು ದೇವರ ಮೀನು ಎಂದು ಕರೆಯುತ್ತಾರೆ.
ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದು ಗಂಧದ ಶಾರದಾ ದೇವಿಯ ವಿಗ್ರಹವನ್ನ, ಆಗ ತಾಯಿ ಶಾರದಾ ದೇವಿ ನಿಂತಿದ್ದರು. 14 ನೇ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಜಗನ್ಮಾತೆಯಾದ ಶಾರದೆಗೆ ಹಂಸವಾಹನ, ವೃಷಭವಾಹನ, ಮಯೂರ ವಾಹನ, ಗರುಡ ವಾಹನ, ಇಂದ್ರಾಣಿ, ವೀಣಾಶಾರದಾ ವಾಹಿನಿ, ರಾಜ ರಾಜೇಶ್ವರಿ, ಸಿಂಹ ವಾಹಿನಿ, ಗಜ ಲಕ್ಷ್ಮಿ, ಹೀಗೆ ದಿನಕ್ಕೊಂದು ಅಲಂಕಾರ ಅಲ್ಲಿ ಮಾಡಲಾಗುತ್ತದೆ. ಮೈಸೂರು ಮಹಾರಾಜರು, ಜಮಖಂಡಿ ರಾಜರು ಮೊದಲಾದವರು ತಾಯಿಗೆ ನೀಡಿದ ಆಭರಣಗಳನ್ನು ದೇವಿಗೆ ನವರಾತ್ರಿ ವೇಳೆಗೆ ಹಾಕಲಾಗುತ್ತದೆ.
ಗಂಡ ಭೆರುಂಡ ಪದಕ, ಕಂಠಿ ಹಾರ, ಪದಕ ಮಾಲೆ ಮೊದಲಾದ ಅತ್ಯಮುಲ್ಯ ಆಭರಣಗಳನ್ನು ನೋಡುವ ಸುವರ್ಣಾವಕಾಶ ಜನರಿಗೆ ದೊರೆಯುತ್ತದೆ. ಶಾರದಾ ಮಾತೆ ಶಿಲ್ಪ ಸುಂದರವಾಗಿದ್ದು ನಾಲ್ಕು ಭುಜ ಹೊಂದಿದೆ. ಮೇಲಿನ ಕೈಯಲ್ಲಿ ಅಕ್ಷರ ಮಾಲೆ ಹಾಗೂ ಮುಕ್ತ ಫಲಖ ಇದ್ದರೆ ಕೆಳಗಿನ ಕೈಯಲ್ಲಿ ಅಭಯ ಹಸ್ತವಿದ್ದು ಅದರಲ್ಲಿ ಪದ್ಮವಿದ್ದುರ ಪುಸ್ತಕವಿದೆ. ಇಲ್ಲಿನ ಮುಖ್ಯ ದೇವಾಲಯವು ತಾಯಿ ಶಾರದಾಂಬೆಗೆ ಮೀಸಲಾಗಿದೆ, ಈಕೆ ಸರಸ್ವತಿಯ ಪ್ರತಿರೂಪವಾಗಿದ್ದು ತಾಯಿಯನ್ನು ಉಭಯ ಭಾರತಿ ಎನ್ನುತ್ತಾರೆ.