ಶಿವನಿಗೆ ಪ್ರಿಯವಾದ 16 ಸೋಮವಾರದ ವಾರ್ತಾ ಮಾಡೋದು ಹೇಗೆ? ಇದರಿಂದ ಏನ್ ಲಾಭವಿದೆ ಗೊತ್ತೆ

0

ಸೋಮವಾರ ಎಂದರೆ ಶಿವನಿಗೆ ಪ್ರಿಯ, ಆ ದಿನ ಶಿವನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಶಿವನಿಗೆ ಪ್ರಿಯವಾದ 16 ಸೋಮವಾರದ ಪೂಜಾ ವೃತವನ್ನು ಆಚರಿಸಿದರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಹಾಗಾದರೆ 16 ಸೋಮವಾರದ ಪೂಜೆಯನ್ನು ಹೇಗೆ ಆಚರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಈಶ್ವರನಿಗೆ 16 ಸೋಮವಾರ ವೃತ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಪ್ರತಿವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯವರೆಗೆ ಈ ನಾಲ್ಕು ತಿಂಗಳುಗಳಲ್ಲಿ ಬರುವ ಹದಿನಾರು ಸೋಮವಾರದಂದು ಈ ವೃತವನ್ನು ಆಚರಿಸಬಹುದು. ಈ ವೃತವನ್ನು ಆಚರಿಸುವುದರಿಂದ ಕಷ್ಟಗಳು ದೂರವಾಗಿ ಸಕಲ ಸಂಪತ್ತು, ನೆಮ್ಮದಿ ಆರೋಗ್ಯ ನಿಮ್ಮದಾಗುತ್ತದೆ.

ಈ ವೃತವನ್ನು ಪುರುಷರು ಸ್ತ್ರೀಯರು ಇಬ್ಬರು ಆಚರಿಸಬಹುದು. ವೃತ ಮಾಡುವವರು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ನಂತರ ಬರುವ ಸೋಮವಾರದಂದು ಅರುಣೋದಯಕ್ಕೆ ಎದ್ದು ಸ್ನಾನ ನಿತ್ಯ ಕರ್ಮಗಳನ್ನು ಪೂರೈಸಿ ಸಂಧ್ಯಾವಂದನೆ ಮಾಡಿದ ನಂತರ ಪ್ರಾರಂಭಿಸಬೇಕು ಅಂದು ಊಟಮಾಡದೇ ಹಾಲು ಹಣ್ಣನ್ನು ಸೇವಿಸಬೇಕು ಇದು ಅಲ್ಲದೆ ಪೂರ್ಣಪ್ರಮಾಣದಲ್ಲಿ ಉಪವಾಸವನ್ನು ಕೂಡ ಮಾಡಬಹುದು.

ಸೂರ್ಯಾಸ್ತ ಸಮಯಕ್ಕೆ ಸ್ನಾನಮಾಡಿ ಮಡಿಯಲ್ಲಿ ಹುತ್ತದ ಮಣ್ಣಿನಿಂದ ಈಶ್ವರ ಲಿಂಗವನ್ನು ತಯಾರಿಸಬೇಕು ನಂತರ ಮಡಿಯಲ್ಲಿ ಪೂಜಾ ಸಾಮಗ್ರಿಗಳೊಂದಿಗೆ ಕುಳಿತು ಪಂಚಾಮೃತ ಅಭಿಷೇಕ ಮೊದಲಾದ ಪೂಜೆಗಳಿಂದ ಲಿಂಗವನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಬ್ರಾಹ್ಮಣೋತ್ತಮರಿಗೆ ವಾಯನ ದಾನವನ್ನು ದಕ್ಷಿಣೆಯೊಂದಿಗೆ ಕೊಡಬೇಕು. ಶಿವಲಿಂಗದ ನೈವೇದ್ಯಕ್ಕೆ ಅರ್ಧ ಸೇರು ಗೋದಿಹಿಟ್ಟನ್ನು ಹುರಿದು ಅದಕ್ಕೆ ಸಕ್ಕರೆ ಅಥವಾ ಬೆಲ್ಲ ತುಪ್ಪ ಏಲಕ್ಕಿ, ಬಾಜಿಕಾಯಿಯನ್ನು ಸೇರಿಸಿ ಗುಳ್ಳೆ ಪಪ್ಪಡಿಯನ್ನು ಮಾಡಬೇಕು ಅದರಲ್ಲಿ ಮೂರು ಭಾಗ ಮಾಡಿಕೊಂಡು ಮೂರು ಉಂಡೆಯನ್ನು ಕಟ್ಟಬೇಕು. ಮೂರು ಉಂಡೆಯನ್ನು ಶಿವಲಿಂಗಕ್ಕೆ ನೈವೇದ್ಯ ಇಡಬೇಕು ಪೂಜೆ ಮುಗಿದ ನಂತರ 3 ಉಂಡೆಗಳಲ್ಲಿ ಒಂದನ್ನು ಹಸುವಿಗೆ ಕೊಡಬೇಕು, ಒಂದು ಉಂಡೆಯನ್ನು ಪ್ರಸಾದದ ರೂಪದಲ್ಲಿ ಪೂಜೆಗೆ ಬಂದ ಅತಿಥಿಗಳಿಗೆ ಕೊಡಬೇಕು, ಉಳಿದ ಒಂದು ಉಂಡೆಯನ್ನು ಪ್ರಸಾದದ ರೂಪದಲ್ಲಿ ವೃತ ಮಾಡುವವರು ಸೇವಿಸಬೇಕು.

ನಂತರ ಪೂಜಿಸಿದ ಲಿಂಗವನ್ನು ನದಿಯಲ್ಲಾಗಲಿ ಕೆರೆಯಲ್ಲಾಗಲಿ ಅಥವಾ ಬಾವಿಯಲ್ಲಾಗಲಿ ವಿಸರ್ಜಿಸಬೇಕು. ಹೀಗೆ 16 ಸೋಮವಾರಗಳ ಕಾಲ ವೃತವನ್ನು ಆಚರಿಸಿ 17 ನೇ ಸೋಮವಾರದಂದು ಹಿಂದಿನ ಸೋಮವಾರದಂದು ಲಿಂಗವನ್ನು ಪೂಜಿಸಿದಂತೆ ಪೂಜಿಸಬೇಕು ನೈವೇದ್ಯಕ್ಕಾಗಿ 5 ಸೇರು ಗೋಧಿಯ ಹಿಟ್ಟನ್ನು ಹುರಿದು ಅದಕ್ಕೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ, ತುಪ್ಪ, ಏಲಕ್ಕಿ, ಬಾಜಿಕಾಯಿಯನ್ನು ಸೇರಿಸಿ ಗುಳ್ಳ ಪಪ್ಪಡಿಯನ್ನು ಮಾಡಬೇಕು ಹಿಂದಿನ ಸೋಮವಾರ ಮಾಡಿದಂತೆ ಉಂಡೆ ಮಾಡಿ ಒಂದನ್ನು ಹಸುವಿಗೆ, ಒಂದನ್ನು ಬಂದವರಿಗೆ ಪ್ರಸಾದವಾಗಿ ಕೊಟ್ಟು, ಉಳಿದ ಒಂದನ್ನು ತಾನು ಸ್ವೀಕರಿಸಿ ಆ ದಿನ ವೃತವನ್ನು ಮಾಡಿದ ಅಡುಗೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಕು

ನಂತರ ಬ್ರಾಹ್ಮಣರಿಗೆ ಸಂತರ್ಪಣೆ ಮಾಡಿ ದಕ್ಷಿಣೆಯನ್ನು ಕೊಡಬೇಕು ಆಗ ಈ ವೃತ ಸಮಾಪ್ತಿಯಾಗುತ್ತದೆ. ಈ ವೃತ ಮಾಡುವವರು ದೂರಾಲೋಚನೆ, ದುರ್ವ್ಯಸನಗಳಿಂದ ದೂರ ಇರಬೇಕು ಪವಿತ್ರವಾದ ಶಿವಾಪಂಚಾಕ್ಷರ ಮಂತ್ರವನ್ನು ಜಪಿಸುತ್ತಿರಬೇಕು. ಈ ವೃತವನ್ನು ಆಚರಿಸುವುದರಿಂದ ವಿದ್ಯಾರ್ಥಿಗಳು ವಿದ್ಯೆಯನ್ನು, ಧನಾರ್ಥಿಗಳು ಧನವನ್ನು, ಪುತ್ರಾರ್ಥಿಗಳು ಪುತ್ರನನ್ನು ಪಡೆದು ಎಲ್ಲಾ ಪಾಪಗಳಿಂದ ಮುಕ್ತರಾಗಿ ಶಿವ ಸಾನಿಧ್ಯವನ್ನು ಸೇರುವವರು. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!