ನಿಂಬೆ ಹಣ್ಣನ್ನು ನಾವು ಅಡುಗೆಗೆ ಬಿಟ್ಟು ಇನ್ನೂ ಹಲವಾರು ಕಾರಣಗಳಿಗೆ ಬಳಸುತ್ತೇವೆ. ಕೆಲವೊಂದು ಸಲ ನಾವು ಗಾಡಿಗಳಲ್ಲಿ, ಮನೆಯ ಎದುರು, ಹೋಟೆಲ್ಗಳಲ್ಲಿ ಹೀಗೆ ಅನೇಕ ಕಡೆ ನಿಂಬೆ ಹಣ್ಣನ್ನು ಕಟ್ಟಿರುವುದನ್ನು ನೋಡಿರುತ್ತೇವೆ. ಹಾಗಾದ್ರೆ ಯಾಕಾಗಿ ಹೋಟೆಲು ಮನೆಗಳಲ್ಲಿ ನಿಂಬೆ ಹಣ್ಣನ್ನು ಕಟ್ಟಿರುತ್ತಾರೆ ಅಥವಾ ಕಟ್ಟಬೇಕು ಎಂಬುದರ ಕುರಿತು ತಿಳಿಯೋಣ ಬನ್ನಿ..
ನೀವು ಹೋಟೆಲ್ ಗಳಲ್ಲಿ ನೋಡಿರಬಹುದು ನಿಂಬೆ ಹಣ್ಣನ್ನು ಒಂದು ಲೋಟದಲ್ಲಿ ನೀರು ಹಾಕಿ ಇಟ್ಟಿರುತ್ತಾರೆ. ಹಣಗಳನ್ನು ಇಡುವ ಸ್ಥಳದಲ್ಲಿ ಈ ರೀತಿಯಾಗಿ ಇಟ್ಟಿರುತ್ತಾರೆ. ಹಾಗೆಯೇ ಹೊಸ ವಾಹನಗಳಿಗೆ ಸಹ ನಿಂಬೆ ಹಣ್ಣನ್ನು ಕಟ್ಟಿರುತ್ತಾರೆ ಹಾಗೆ ಹೆಚ್ಚಾಗಿ ಎಲ್ಲಾ ಅಂಗಡಿಗಳಲ್ಲಿ ಕಟ್ಟಿರುತ್ತಾರೆ.
ಲಿಂಬೆಹಣ್ಣಿನಿಂದ ಬಹಳ ಪ್ರಯೋಜನಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಾಪಾರ ಮಾಡುತ್ತಾ ಇದ್ದರೆ ವ್ಯಾಪಾರದ ಸ್ಥಳದಲ್ಲಿ ಒಂದು ನಿಂಬೆ ಹಣ್ಣನ್ನು ಇಡಬೇಕು. ಹೀಗೆ ಇಡುವುದರಿಂದ ವ್ಯಾಪಾರದಲ್ಲಿ ಬರೀ ನಷ್ಟ, ಅಥವಾ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದು ಇದ್ದರೆ ನಿವಾರಣೆ ಆಗುತ್ತದೆ ನೀವು ಮನೆಯಲ್ಲಿ ಕೂಡ ಒಂದು ಲೋಟದಲ್ಲಿ ನೀರು ಹಾಕಿ ಅದರಲ್ಲಿ ನಿಂಬೆ ಹಣ್ಣು ಇಡಬೇಕು ಆದರೆ ಇದನ್ನು ದೇವರಿಗೆ ಪೂಜೆ ಮಾಡಿ ಇಡಬೇಕು
ಒಂದು ಶುದ್ಧವಾದ ಲೋಟದಲ್ಲಿ ನೀರನ್ನು ತೆಗೆದುಕೊಂಡು, ಒಂದು ನಿಂಬೆ ಹಣ್ಣಿಗೆ ಅರಿಶಿಣ ಕುಂಕುಮ ಹಚ್ಚಿ ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು ನಂತರ ಮನಸಲ್ಲಿ ಯಾವುದೇ ಕೆಟ್ಟ ದೃಷ್ಟಿ ತಾಗದೆ ಇರಲಿ ಅಂತ ದೇವರ ಬಳಿ ಬೇಡಿಕೊಂಡು ಆ ನಿಂಬೆ ಹಣ್ಣನ್ನು ನೀರಿನ ಲೋಟದಲ್ಲಿ ಇಡಬೇಕು. ಇದರಿಂದ ಮನುಷ್ಯನ ಕೆಟ್ಟ ದ್ರಷ್ಟಿ ತಾಗುವುದಿಲ್ಲ. ಯಾವುದೇ ತೊಂದರೆಗಳು ಬಂದರೂ ದೂರ ಕೂಡ ಹೋಗುತ್ತದೆ. ಒಮ್ಮೆ ಮನೆಯಲ್ಲಿ ಹೀಗೆ ಮಾಡಿ ನೋಡಿ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ಪರಿಹಾರ ಆಗುತ್ತೆ.