ತಾಲೂಕಿನ ಪ್ರಸಿದ್ಧ ಭಕ್ತಿ ನಗರ ಬಿದನೆಗೆರೆ ಶ್ರೀ ಕ್ಷೇತ್ರದ ಬಸವೇಶ್ವರ ಮಠದಲ್ಲಿ ವಿಶ್ವದಲ್ಲೇ ಪ್ರಥಮ ಎನ್ನಲಾದ 161 ಎತ್ತರದ ಪಂಚಮುಖಿ ಆಂಜಿನೇಯ ಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಿದ್ಧವಾಗಿದೆ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ ಧನಂಜಯ ಗುರೂಜಿ ನೇತೃತ್ವದಲ್ಲಿ ಭಕ್ತಾದಿಗಳ ಸಹಾಯ ಸಹಕಾರದಿಂದ ಫೆಬ್ರುವರಿ 28 ರಂದು ಲೋಕಾರ್ಪಣೆ ಮಾಡಲಾಗುತ್ತದೆ.
ಆಂಜನೇಯಸ್ವಾಮಿ ವಿಗ್ರಹ ಕಾಮಗಾರಿಯು ಕೆಲಸ ಮುಗಿದಿದೆ, ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಮುಖ ಗಣ್ಯರು ಅಧಿಕಾರಿಗಳು ಆಗಮಿಸಲಿದ್ದಾರೆ. ವಿಗ್ರಹ ನಿರ್ಮಾಣ ಕಾಮಗಾರಿಯನ್ನು ತಮಿಳುನಾಡಿನ ಮಾರಿ ಮುತ್ತುರವರಿಗೆ ಕಾಮಗಾರಿ ವಹಿಸಲಾಗಿತ್ತು, ಸತತ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಇಲ್ಲಿಗೆ ಅವರ ಕಾಮಗಾರಿ ಕೆಲಸ ಮುಕ್ತಾಯವಾಗಿದೆ ಅವರ ಶ್ರಮ ಮೆಚ್ಚಲೇಬೇಕು ಎನ್ನುತ್ತಾರೆ. ವಿಗ್ರಹ ಲೋಕಾರ್ಪಣೆ ಮಾಡುವ ಮುನ್ನವೇ ರಾಜ್ಯದ ವಿವಿಧ ಭಾಗಗಳಿಂದ ಬಸ್, ಕಾರು, ಟೆಂಪೋ, ಟ್ರಾವಲ್ಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಾವಿರಾರು ಭಕ್ತರು ನಿತ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಂಚಮುಖಿ ಆಂಜನೇಯ ಸ್ವಾಮಿಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
ಕಳೆದ 20 ವರ್ಷದ ಹಿಂದೆ ಡಾ ಧನಂಜಯ ಗುರೂಜಿ ಸಣ್ಣ ಗುಡಿಸಲಲ್ಲಿ ಸತ್ಯಶನೇಶ್ವರ ಸ್ವಾಮಿ ಪ್ರತಿಷ್ಠಾಪಿಸಿದ್ದರು. ಬಳಿಕ ಉದ್ಭವ ಬಸವಣ್ಣ, ಶನಿಶಾಗ್ನಾಪುರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರು.ಈ ದೇವರನ್ನು ಪೂಜೆ ಪುನಸ್ಕಾರ ನೆರವೇರಿಸುತ್ತಾ ಆರಾಧಿಸಿಕೊಂಡು ಬರುತ್ತಿದ್ದಾರೆ. ಪಂಚಮುಖಿ ಹನುಮಂತನ ಚಿತ್ರವಿರುವ ಮನೆಯಲ್ಲಿ ಎಂದಿಗೂ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಪಂಚಮುಖಿ ಹನುಮನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ, ಲಕ್ಷ್ಮಿ ದೇವಿಯ ಅನುಗ್ರಹವು ಮನೆಯಲ್ಲಿ ಉಳಿಯುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕಲಾಗುತ್ತದೆ. ಮನೆಯಲ್ಲಿ ಋಣಾತ್ಮಕ ಶಕ್ತಿಯ ಪರಿಣಾಮವಿದೆ ಎಂದು ನೀವು ಭಾವಿ ಸಿದರೆ, ಪಂಚಮುಖಿ ಹನುಮನ ಚಿತ್ರವನ್ನು ಹಾಕಬೇಕು. ಇದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ತೆಗೆದು ಹಾಕಲಾಗುತ್ತದೆ.