ದ್ವಾರ ಬಾಗಿಲು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮನೆಯ ಮುಖ್ಯ ಬಾಗಿಲು ಈಶಾನ್ಯ ಅಥವಾ ಪೂರ್ವದಲ್ಲಿದರೆ ಶುಭ ಆಗುತ್ತದೆ ದ್ವಾರ ಬಾಗಿಲು ಕೇವಲ ಕುಟುಂಬದ ಪ್ರವೇಶಕ್ಕೆ ಮಾತ್ರವಲ್ಲ ದುಷ್ಟ ಶಕ್ತಿಯು ಪ್ರವೇಶ ಮಾಡುವುದು ಇಲ್ಲ ಮನೆ ಮತ್ತು ಮನೆಯವರ ಏಳು ಬೀಳುಗಳು ಮನೆಯ ಹೆಬ್ಬಾಗಿಲು ನಿರ್ಧರಿಸುತ್ತದೆ.
ಪೂರ್ವಕ್ಕೆ ಮನೆ ಮುಖ ಮಾಡಿದ್ದರೆ ವಾಸ್ತು ಪ್ರಕಾರ ಈಶಾನ್ಯ ಭಾಗದಲ್ಲಿ ಮುಖ್ಯ ದ್ವಾರ ಇರಬೇಕು ಇದರಿಂದ ಸಂಪತ್ತು ಆರೋಗ್ಯ ಮತ್ತು ನೆಮ್ಮದಿ ವೃದ್ಧಿಯಾಗುತ್ತದೆ ಪೂರ್ವ ದಿಕ್ಕಿಗೆ ಅಭಿಮುಖವಾಗಿ ಮನೆ ಕಟ್ಟಿದರೆ ತುಂಬಾ ಉತ್ತಮ ಸೂರ್ಯನ ಕಿರಣ ಮನೆಯ ಪ್ರಧಾನ ಬಾಗಿಲಿನ ಮೇಲೆ ಬೀಳಬೇಕು ಮನೆಯ ಪೂರ್ವದ ಜಾಗ ಖಾಲಿ ಇದ್ದರೆ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನಾವು ಈ ಲೇಖನದ ಮೂಲಕ ಹೆಬ್ಬಾಗಿಲಿನ ಬಗ್ಗೆ ತಿಳಿದುಕೊಳ್ಳೊಣ.
ಮನೆಗೆ ಹೆಬ್ಬಾಗಿಲು ಲಕ್ಷಣವಾಗಿದೆ ಮನೆಯ ಗಾಂಭೀರ್ಯತೆ ಯನ್ನು ಹೆಬ್ಬಾಗಿಲು ಪ್ರದರ್ಶಿಸುತ್ತದೆ ಯಾವುದೇ ಶುಭ ಪಕ್ಷದಲ್ಲಿ ರಾಜಯೋಗ ಇರುವುದು ಮುಹೂರ್ತದಲ್ಲಿ ಹೆಬ್ಬಾಗಿಲನ್ನು ಸ್ಥಾಪಿಸಬೇಕು ಹೆಬ್ಬಾಗಿಲು ಸ್ಥಾಪನೆಗೆ ಉತ್ತರ ಪೂರ್ವ ಹಾಗೂ ದಕ್ಷಿಣ ದಿಕ್ಕುಗಳು ಸರ್ವೆ ಸಾಮಾನ್ಯವಾಗಿದೆ ಆದರೆ ಗ್ರಹದ ಮೂಖ ಉಪ ದಿಕ್ಕಿನಲ್ಲಿ ಇರಬಾರದು ಮನೆ ಕಟ್ಟುವ ಯಜಮಾನ ಯಾವ ರಾಶಿಯವರು ಎಂದು ತಿಳಿದುಕೊಂಡು ಮನೆಯ ಬಾಗಿಲನ್ನು ಮಾಡಬೇಕು. ಹಾಗೆಯೇ ಮೇಷ ಸಿಂಹ ಧನಸ್ಸುರಾಶಿಯವರಿಗೆ ಉತ್ತರ ದಿಕ್ಕು ಶ್ರೇಷ್ಠವಾಗಿದೆ ವೃಷಭ ತುಲಾ ರಾಶಿಯವರಿಗೆ ಪಶ್ಚಿಮ ದಿಕ್ಕು ಹಾಗೂ ಮಕರ ಕನ್ಯಾ ಮಿಥುನ ರಾಶಿಯವರಿಗೆ ದಕ್ಷಿಣ ದಿಕ್ಕು ಹಾಗೂ ಕಟಕ ವೃಶ್ಚಿಕ ಮೀನ ರಾಶಿಯವರಿಗೆ ಪೂರ್ವದಿಕ್ಕಿಗೆ ಹೆಬ್ಬಾಗಿಲು ಸ್ಥಾಪನೆ ತುಂಬಾ ಒಳ್ಳೆಯದು ಹಾಗೆಯೇ ಹೆಬ್ಬಾಗಿಲು ನಕ್ಷೆ ವಿಶೇಷ ಅಲಂ.ಕಾರ ಹಾಗೂ ಸುಳಿವಿಗಳಿಂದ ದೊಡ್ಡದಾಗಿ ಇರುತ್ತದೆ.
ಸೋಮವಾರ ಬುಧವಾರ ಶುಕ್ರವಾರದ ಶುಭ ವೇಳೆಯಲ್ಲಿ ಹೆಬ್ಬಾಗಿಲಿನ ಹೋಸ್ಥಿಲಿನಲ್ಲಿ ಪಂಚ ಲೋಹ ಹಾಗೂ ಪಂಚ ರತ್ನ ಹಾಗೂ ಅಕ್ಷತೆಗಳನ್ನು ಹಾಕಿ ಹಾಲು ನೀರನ್ನು ಸಿಂಪಡಿಸಿ ಹೆಬ್ಬಾಗಿಲನ್ನು ಇಟ್ಟು ಪೂಜಿಸಬೇಕು ಹೆಬ್ಬಾಗಿಲಿಗೆ ನೇರವಾಗಿ ಮೂರು ಬಾಗಿಲನ್ನು ಇಡಬಾರದು ಮೂರು ದಿಕ್ಕಿನಲ್ಲಿ ಮೂರು ಹೊರಬಾಗಿಲನ್ನು ಇಡಬಾರದು ಹೆಬ್ಬಾಗಿಲಿನ ಎದುರಿಗೆ ನೀರು ನೀರು ತುಂಬಿರುವ ತೊಟ್ಟಿ ಬಾವಿ ತಿಪ್ಪೆ ಇದ್ದರೆ ದರಿದ್ರವಾಗಿದೆ.l ಹಾಗೆಯೇ ರೋಗ ಬಾಧೆಗಳು ಬರುತ್ತದೆ
ಮುಂದಿನ ಬಾಗಿಲು ಎಲ್ಲ ಬಾಗಿಲಿಗಿಂತ ದೊಡ್ಡದಾಗಿ ಇಡಬೇಕು ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಯಾಗಿದ್ದರೆ ಮುಖ್ಯ ದ್ವಾರ ಯಾವಾಗಲೂ ಉತ್ತರದ ಗೋಡೆ ಈಶಾನ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಪೂರ್ವದಿಂದ ಸೂರ್ಯನ ಬಿಸಿಲು ಹರಿಯುತ್ತಾ ಪಶ್ಚಿಮದ ಕಡೆಗೆಸಾಗುವುದು. ಇದಲ್ಲದೆ ಸ್ವಲ್ಪ ಮಧ್ಯ ಭಾಗದಲ್ಲೂ ಬಾಗಿಲು ಮತ್ತು ಈಶಾನ್ಯ ಭಾಗದಲ್ಲಿ ಕಿಟಕಿ ಅಳವಡಿಸಬಹುದು.