ನಮ್ಮ ಸುತ್ತ ಅನೇಕ ಜೀವ ವೈವಿಧ್ಯಗಳಿದ್ದು ಅವುಗಳು ತಮ್ಮದೇ ಆದಂತಹ ಕೆಲವು ಗುಣಗಳನ್ನು ಹೊಂದಿರುತ್ತವೆ. ಅವುಗಳ ಬಗ್ಗೆ ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ ಆ ಕುರಿತಾಗಿ ನಾವಿಂದು ಪ್ರಾಣಿ ಪ್ರಭೇದದ ಕೆಲವು ವಿಷಯಗಳ ಕುರಿತು ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಮೊದಲನೇದಾಗಿ ಯಾವ ಪ್ರಾಣಿ ತನ್ನ ಕಣ್ಣುಗಳು ಮುಚ್ಚಿಕೊಂಡಿದ್ದರೂ ಸಹ ನೋಡಬಲ್ಲದು ಎಂದರೆ ಅದು ಒಂಟೆ. ಒಂಟೆ ತನ್ನ ಮುಚ್ಚಿದ ಕಣ್ಣುಗಳಿಂದ ಸಹ ಸುತ್ತಲಿನ ಪರಿಸ್ಥಿತಿಯನ್ನು ನೋಡಬಲ್ಲದು. ಎರಡನೆಯದಾಗಿ ವಿಶ್ವದ ಅತಿ ದೊಡ್ಡ ಪ್ರಾಣಿ ಯಾವುದು ಎಂದರೆ ನೀಲಿ ತಿಮಿಂಗಿಲ ಇವು ಸಾಗರದ ಸಸ್ತನಿಗಳು.
ಮೂರನೆಯದಾಗಿ ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳ ರಕ್ತ ಕೆಂಪು ಬಣ್ಣದಲ್ಲಿರುತ್ತದೆ ಆದರೆ ಅಕ್ಟೋಪಸ್ ನ ರಕ್ತವು ನೀಲಿ ಬಣ್ಣದಲ್ಲಿ ಇರುತ್ತದೆ. ನಾಲ್ಕನೆಯದಾಗಿ ಸಾಮಾನ್ಯವಾಗಿ ಎಲ್ಲ ಜೀವಜಂತುಗಳಿಗೆ ಕಣ್ಣುಗಳಿರುತ್ತವೆ ಕಣ್ಣು ಗಳಿಲ್ಲದೆ ಜೀವನವನ್ನು ನಡೆಸುವುದು ಕಷ್ಟ ಆದರೆ ಎರೆಹುಳುಗಳಿಗೆ ಕಣ್ಣುಗಳು ಇರುವುದಿಲ್ಲ. ಇದು ಮಣ್ಣಿನಲ್ಲಿ ವಾಸಿಸುವ ಒಂದು ಹುಳು ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಇದನ್ನ ರೈತನ ಮಿತ್ರ ಎಂದು ಕರೆಯಲಾಗುತ್ತದೆ. ಐದನೇಯದಾಗಿ ಕೀಟಗಳಲ್ಲಿ ಅನೇಕ ಜಾತಿಯ ಕೀಟಗಳಿವೆ ಅದರಲ್ಲಿ ಒಂದು ಜಾತಿಯ ಕೀಟ ತನ್ನ ತಲೆ ಇಲ್ಲದೆ ಒಂದು ವಾರ ಬದುಕಬಲ್ಲದು ಅಂತಹ ಕೀಟ ಯಾವುದು ಎಂದರೆ ಜಿರಳೆ. ಜಿರಳೆ ತನ್ನ ತಲೆ ಇಲ್ಲದೆ ಒಂದು ವಾರ ಬದುಕಬಲ್ಲದು.
ಆರನೆಯದಾಗಿ ಸಾಮಾನ್ಯವಾಗಿ ಎಲ್ಲಾ ಜೀವಿಗಳಿಗೂ ನಿದ್ರೆ ಅವಶ್ಯಕವಾಗಿರುತ್ತದೆ ಆದರೆ ನಿದ್ರೆ ಇಲ್ಲದೆ ಜೀವಿಸುವ ಜೀವಿ ಯಾವುದು ಎಂದರೆ ಅದು ಇರುವೆ. ಇರುವೆ ಎಂದಿಗೂ ನಿದ್ರಿಸುವುದಿಲ್ಲ. ಏಳನೆಯದಾಗಿ ಕರಡಿ ಗಾಯಗೊಂಡ ನಂತರ ಮಾನವನಂತೆಯೇ ಅಳುತ್ತದೆ. ಎಂಟನೆಯದಾಗಿ ಒಂಟೆ ಒಂದು ವಾರಗಳ ಕಾಲ ನೀರಿಲ್ಲದೆ ಜೀವಿಸಬಹುದಾದ ಪ್ರಾಣಿಯಾಗಿದೆ ಒಂಟೆಗಳು ಶುಷ್ಕ ಮತ್ತು ಮರುಭೂಮಿ ಪ್ರದೇಶದಲ್ಲಿ ಬದುಕಲು ಹೊಂದಿಕೊಳ್ಳುತ್ತವೆ ಮತ್ತು ನೀರಿಲ್ಲದೆ ಬಹಳ ದಿನಗಳವರೆಗೆ ಬದುಕಬಲ್ಲದು. ಮರುಭೂಮಿಯ ನಿವಾಸಿಗಳು ಒಂಟೆಯನ್ನು ಸಾಕು ಪ್ರಾಣಿಯನ್ನಾಗಿ ಸಾಕಿಕೊಳ್ಳುತ್ತಾರೆ ಇದರಿಂದ ಅವರಿಗೆ ತುಂಬಾ ಉಪಯೋಗವಿದೆ
ಒಂಬತ್ತನೆಯದಾಗಿ ಬಹಳ ವಿಶೇಷವೆನಿಸುವ ವಿಷಯವೇನೆಂದರೆ ಸೊಳ್ಳೆಗಳಿಗೆ ನಲವತ್ತೆಳು ಹಲ್ಲುಗಳಿರುತ್ತವೆ. ಹತ್ತನೆಯದಾಗಿ ಸಾಮಾನ್ಯವಾಗಿ ಹೆಣ್ಣು ಜೀವಿಗಳು ಮರಿಗಳಿಗೆ ಜನ್ಮವನ್ನು ನೀಡುತ್ತವೆ ಆದರೆ ಸಮುದ್ರ ಕುದುರೆ ಗಂಡು ಜೀವಿಯಾಗಿದ್ದರೂ ಮರಿಗಳಿಗೆ ಜನ್ಮ ನೀಡುತ್ತದೆ ಇದು ಒಂದು ಜಾತಿಯ ಮೀನು ಮುಖ ಕುದುರೆಯಂತೆ ದೇಹ ಕಂಬಳಿಹುಳುವಿನಂತೆ ಮತ್ತು ಇದರ ಬಾಲ ಹಲ್ಲಿಯ ರೀತಿಯಲ್ಲಿ ಭಾಸವಾಗುತ್ತದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಜೀವವೈವಿಧ್ಯದ ಕುರಿತಾದ ಮಾಹಿತಿಗಳು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.