WhatsApp Group Join Now
Telegram Group Join Now

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಹಿರಿಯರು ಹೇಳುವ ಪ್ರಕಾರ ನಮ್ಮ ಕಣ್ಣುಗಳು ಅದುರಿದರೆ ಅದರಿಂದ ನಮಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಈ ಕಣ್ಣು ಮಿಟುಕುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ

ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು ಅದುರೋಕೆ ಶುರುವಾಗುತ್ತೆ. ಮತ್ತೆ ಕೆಲವೊಮ್ಮೆ ತುಟಿ ಅದುರುತ್ತೆ. ಇನ್ನು ಕೆಲವೊಮ್ಮೆ ಸುಮ್ಮನೆ ಕುಳಿತಾಗ ಬೆರಳು ನಿಮ್ಮ ಪ್ರಯತ್ನವೇ ಇಲ್ಲದೆ ಎದ್ದೆದ್ದು ಹಾರಿದಂತೆ ಭಾಸವಾಗಬಹುದು. ಈ ಎಲ್ಲ ದೈಹಿಕ ಬದಲಾವಣೆಯನ್ನೂ ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರವೇ ಆಡು ಮಾತಿನಲ್ಲಿ ಹರಿದು ಆಗಾಗ ಜನರು ಕಣ್ಣು ಅದುರಿದಾಗ ಅದು ಅದೃಷ್ಟವೆಂದೋ ದುರದೃಷ್ಟವೆಂದೋ ಹೇಳುವುದನ್ನು ನೀವೂ ಕೇಳಿರಬಹುದು.

ಮಹಿಳೆಯರು ತಮ್ಮ ಎಡಗಣ್ಣಿನ ರೆಪ್ಪೆಗಳು ಹಾರುತ್ತಿರುವ ಸಂವೇದನೆ ಅಥವಾ ಸಂಜ್ಞೆಯನ್ನು ಅನುಭವಿಸುತ್ತಿದ್ದರೆ ಅದು ನಿಮಗೆ ಶುಭ ಶಕುನ ಎಂದು ಹೇಳಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ ಮಹಿಳೆಯರ ಎಡಗಣ್ಣು ಹಾರಿದರೆ ಅವರ ಜೀವನದಲ್ಲಿ ಆರ್ಥಿಕ ಸ್ಥಿತಿ, ಉದ್ಯೋಗ, ಶಿಕ್ಷಣ, ಕಲೆ, ಸಂಬಂಧ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಒಳ್ಳೆಯ ಸುದ್ದಿ ಅಥವಾ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎನ್ನಲಾಗುವುದು.

ಮಹಿಳೆಯರ ಎಡಗಣ್ಣು ಅದುರುತ್ತಿದ್ದರೆ ಅದು ಶುಭ ಅಂತಾ ಅರ್ಥ. ನೀವು ಯಾವುದೋ ಶುಭ ಸುದ್ದಿ ಕೇಳಲಿದ್ದೀರಿ. ನಿಮಗೇನೋ ಶುಭವಾಗಲಿದೆ ಎಂಬ ಸೂಚನೆಯನ್ನ ಇದು ನೀಡುತ್ತದೆ. ಆದ್ರೆ ಮಹಿಳೆಯರಿಗೆ ಬಲಗಣ್ಣು ಅದರುವುದು ಉತ್ತಮವಲ್ಲ. ಮಹಿಳೆಯರ ಬಲಗಣ್ಣು ಅದುರಿದರೆ ಅವರು ನಷ್ಟವನ್ನನುಭವಿಸಬಹುದು. ಕೆಟ್ಟ ಸುದ್ದಿ ಕೇಳಬಹುದು. ಅಥವಾ ಸಾವಿನ ಸುದ್ದಿಯೂ ಕೇಳುವ ಸಂಭವವಿರುತ್ತದೆ.

ಇನ್ನು ಪುರುಷರಿಗೆ ಬಲಗಣ್ಣು ಅದರಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಹೀಗಾದರೆ ಒಳ್ಳೆಯ ಸುದ್ದಿ ಕೇಳಬಹುದು. ಅಥವಾ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವ ಸೂಚನೆಯೂ ಸಿಕ್ಕಂತೆ ಅಂತಾ ಹೇಳಲಾಗುತ್ತದೆ. ಆದ್ರೆ ಪುರುಷರಿಗೆ ಎಡಗಣ್ಣು ಅದರಿದರೆ ಒಳ್ಳೆಯದಲ್ಲ ಅನ್ನೋ ನಂಬಿಕೆ ಇದೆ. ಪುರುಷರಿಗೆ ಎಡಗಣ್ಣು ಅದರಿದರೆ ಕೆಟ್ಟ ಸುದ್ದಿ ಕೇಳಬಹುದು ಕೆಲಸದಲ್ಲಿ ತೊಂದರೆ ಅನುಭವಿಸಬಹುದು ಸಂಬಂಧದಲ್ಲಿ ಏನಾದರೂ ಸಂಭವಿಸಬಹುದು ಅಂತಾ ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಮೂಢ ನಂಬಿಕೆಗಳಿವೆ. ಅವುಗಳಲ್ಲಿ ಕಣ್ಣು ಕುಣಿಯುವುದು ಅಥವಾ ಕಣ್ಣು ಹಾರುವ ಸಂಗತಿಯೂ ಒಂದು. ಇದು ಮನುಷ್ಯನು ತನ್ನ ದೇಹದಿಂದಲೇ ಭವಿಷ್ಯದ ಸಂಗತಿಯನ್ನು ತಿಳಿದುಕೊಳ್ಳುವ ಒಂದು ಪರಿ ಎಂದು ಹೇಳುತ್ತದೆ. ಈ ಪ್ರಕ್ರಿಯೆಯಿಂದ ಮನುಷ್ಯನು ಸುಲಭವಾಗಿ ಭವಿಷ್ಯವನ್ನು ಅಂದಾಜಿಸಿ, ಕ್ರಮವನ್ನು ಕೈಗೊಳ್ಳಲು ಸಹಾಯ ಮಾಡುವ ಒಂದು ಪರಿ. ಇದೊಂದು ಮನುಷ್ಯನಿಗೆ ಸಿಕ್ಕ ವರ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: