ಮನೆಯಲ್ಲಿ ತಾತ ಮುತ್ತಾತರ ಕಾಲದಿಂದಲೂ ಪೂಜೆಗೆ ಬಳಸುತ್ತಿದ್ದ ದೇವರ ಫೋಟೋಗಳು ಹಳೆಯದಾಗಿ ಕಾಣುತ್ತಿದ್ದರೆ ಅದನ್ನು ಬದಲಾಯಿಸುವ ಯೋಚನೆ ಬಂದರೂ, ಹಳೆಯ ಪೋಟೋವನ್ನು ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಹಳೆಯ ಫೋಟೋ ಮಾತ್ರವಲ್ಲ, ಕೆಳಗೆ ಬಿದ್ದು ಕನ್ನಡಿ ಒಡೆದ ದೇವರ ಫೋಟೋ ಫ್ರೇಮ್ ಅಥವಾ ಗೆದ್ದಲು ಹಿಡಿದ ಫೋಟೋ, ನೀರು ಬಿದ್ದು ಹಾಳಾದ ಫೋಟೋಗಳನ್ನು ಎಲ್ಲಿ ಇಡುವುದು ಎನ್ನುವ ಗೊಂದಲ ಹಲವರಿಗಿರುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಕೆಲವರು ದೇವರ ಫೋಟೋವನ್ನು ಸಿಕ್ಕಸಿಕ್ಕಲ್ಲಿ ಬಿಸಾಡಿದರೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಹೆದರಿಸುವವರಿರುವಾಗ ಏನು ಮಾಡುವುದಪ್ಪಾ ಎನ್ನುವ ದೊಡ್ಡ ಸಂದೇಹ ಕಾಡುತ್ತದೆ. ಕೆಲವರು ದೇವರ ಫೋಟೋಗಳನ್ನು ದೇವಸ್ಥಾನದಲ್ಲಿರುವ ಅಶ್ವತ್ಥ ವೃಕ್ಷದ ಕೆಳಗೆ ಇಡುತ್ತಾರೆ. ಯಾವುದೇ ಮರವಿರಲಿ ಅದರ ಕೆಳಗೆ ಊನವಾದ ದೇವರ ಫೋಟೋ ಭಿನ್ನವಾದ ದೇವರ ಫೋಟೋ ಇಟ್ಟುಬಿಡುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ.
ವರ್ಷಗಳ ಕಾಲ ಪೂಜಿಸಿದಂತಹ ದೇವರ ಫೋಟೋವನ್ನು ಸೂಕ್ತವಾದ ರೀತಿಯಲ್ಲಿ ಗೌರವದಿಂದ ಹರಿಯುವ ನೀರಿನಲ್ಲಿ ಬಿಡಬೇಕು. ಕಸ ಕಡ್ಡಿ ತುಂಬಿಕೊಂಡಿರುವ ನೀರು ಅಥವಾ ಪ್ರವಾಹದ ನೀರಿನಲ್ಲಿ ಬಿಡದೇ ಶುದ್ಧವಾಗಿ ಹರಿಯುವ ನದಿಯ ನೀರು, ಜಲಪಾತದ ನೀರಿನಲ್ಲಿ ಬಿಡಬೇಕು. ನೀರಿನಲ್ಲಿ ಬಿಡುವ ಮುನ್ನ ಫೋಟೋ ಫ್ರೇಂ ಗಾಜಿನ ಕನ್ನಡಿ ಇದ್ದಲ್ಲಿ ಅದನ್ನು ತೆಗೆದು ನೀರಿನಲ್ಲಿ ಬಿಡಬೇಕು ಇಲ್ಲವಾದಲ್ಲಿ ಗಾಜಿನಿಂದ ಇತರರಿಗೆ ಗಾಯವಾಗಬಹುದು.
ನದಿಯ ನೀರಿನಲ್ಲಿ ಬಿಡಲಾಗದಿದ್ದಲ್ಲಿ ಅಗ್ನಿಯಲ್ಲೂ ಸುಡಬಹುದು. ಸುಡುವಾಗ ಮರದ ಕೆಳಗೆ ಸುಟ್ಟರೆ ಒಳ್ಳೆಯದು. ತೀರ್ಥಯಾತ್ರೆ ಅಥವಾ ದೇವಸ್ಥಾನಗಳಿಗೆ ಹೋದಾಗ ಫೋಟೋವನ್ನು ಕೊಂಡರೆ ಅದನ್ನು ಇತರರಿಗೆ ಕೊಡಬೇಕೆಂಬ ಮನಸ್ಸಿದ್ದಲ್ಲಿ ಅವರಿಗೆ ಅದು ನಿಜವಾಗಿಯೂ ಬೇಕೇ ಎನ್ನುವುದನ್ನು ತಿಳಿದುಕೊಂಡು ನೀಡಬೇಕು. ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ ನೀಡುವುದು ಒಳ್ಳೆಯದು. ಮುಖ್ಯವಾಗಿ ಅವರಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿದ್ದಲ್ಲಿ ಮಾತ್ರ ನೀಡಿ.
ದೇವರ ಫೋಟೋವನ್ನು ಇತರರಿಗೆ ನೀಡಿದರೆ ತೆಗೆದುಕೊಂಡವರು ಅದಕ್ಕೆ ಸೂಕ್ತ ಪೂಜೆಯನ್ನು ಸಲ್ಲಿವುದು ಮುಖ್ಯ. ಮನೆಯಲ್ಲಿ ಒಂದೇ ರೀತಿಯ ದೇವರ ಫೋಟೋ ಅಥವಾ ಹಳೆಯ ಫೋಟೋ ನಿಮಗೆ ಬೇಡವೆಂದಾದಲ್ಲಿ ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದಾದರೆ ನೀಡಬಹುದು. ಇದನ್ನು ಹೊರತು ಪಡಿಸಿ ಮನಸು ಬಂದ ಕಡೆ ಬಿಸಾಕಿದರೆ ದೇವರಿಗೆ ಅಗೌರವ ನೀಡಿದಂತಾಗುವುದು. ದೇವರ ಮೂರ್ತಿಗಳು ಒಡೆದುಹೋಗಿದ್ದಲ್ಲಿ ಬಿರುಕುಬಿಟ್ಟಿದ್ದಲ್ಲಿ ಅದನ್ನೂ ಹರಿವ ನೀರಿನಲ್ಲಿ ಬಿಡಬಹುದು. ಆದರೆ ಮಾಲಿನ್ಯ ಉಂಟು ಮಾಡುವ ಮೂರ್ತಿಗಳನ್ನು ನೀರಿನಲ್ಲಿ ಬಿಡಬಾರದು.
ಪೂಜೆಗೆ ಬಳಸಿದ ಹೂವುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಹಿಂದೂಧರ್ಮದಲ್ಲಿ ಅಶ್ವತ್ಥಮರ ತುಂಬಾ ಶ್ರೇಷ್ಠವಾದದ್ದು ಹಾಗಾಗಿ ಪೂಜೆಗೆ ಬಳಸಿದ ಹೂಗಳನ್ನು ಅಶ್ವತ್ಥ ಮರದ ಬುಡದಲ್ಲಿ ಹಾಕಬಹುದು, ಉಳಿದ ಸಿಹಿತಿಂಡಿಯನ್ನೂ ಅಶ್ವತ್ಥ ಮರದ ಬುಡದಲ್ಲಿ ಹಾಕಬಹುದು. ಇಲ್ಲವಾದರೆ ಮನೆಯ ಹೂತೋಟದ ಮೂಲೆಯಲ್ಲಿ ಮಣ್ಣಿನಲ್ಲಿ ಹಾಕಿ ಹೀಗೆ ಮಾಡಿದಲ್ಲಿ ಅದು ಕೊಳೆತು ಗೊಬ್ಬರವಾಗಿ ಮಣ್ಣಿನ ಭಾಗವಾಗಿ ಹೋಗುವುದು.
ಮದುವೆ ಆಮಂತ್ರಣ ಪತ್ರಿಕೆ ದೇವರ ಫೋಟೋವಿರುವ ಕ್ಯಾಲೆಂಡರ್ ಹಳೆಯ ಧಾರ್ಮಿಕ ಪುಸ್ತಕಗಳನ್ನು ರದ್ದಿಗೆ ಕೊಡಬಹುದು ಇದರಿಂದ ಅದು ಮರುಬಳಕೆಯಾಗುವುದು. ನೀವು ಸೃಜನಶೀಲರಾಗಿದ್ದಲ್ಲಿ ಹಳೆಯ ಫೋಟೋಗಳನ್ನು ಕತ್ತರಿಸಿ, ಕೊಲಾಜ್ ಮಾಡಿ, ನಿಮ್ಮ ಕ್ರಿಯಾಶೀಲತೆಗೆ ತಕ್ಕಂತೆ ಹೊಸ ರೂಪ ನೀಡಬಹುದು.
ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321
ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.