ಪಾದಕ್ಕೆ ಎಣ್ಣೆ ಹಾಗೂ ತುಪ್ಪ ದಿಂದ ಮಸಾಜ್ ಮಾಡುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಪ್ರತಿದಿನ ಪಾದಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ಪ್ರಯೋಜನವನ್ನು ಹೊಂದಿದೆ ಮಲಗುವ ಮುನ್ನ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ವಿಶ್ರಾಂತಿ ಪಡೆಯಲು ಸಹಾಯ ಆಗುತ್ತದೆ ಇದು ಒತ್ತಡವನ್ನು ನಿವಾರಿಸಿ ನರಗಳನ್ನು ಸಡಿಲಗೊಳಿಸುತ್ತದೆ. ಎಣ್ಣೆ ಮಸಾಜ್ ಉರಿಯೂತವನ್ನು ಶಮನಗೊಳಿಸಿ, ಪಾದಗಳಲ್ಲಿರುವ ಯಾವುದೇ ರೀತಿಯ ಒತ್ತಡ ಅಥವಾ ನೋವನ್ನು ನಿವಾರಿಸುತ್ತದೆ.ಪಾದಕ್ಕೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವ ಮೂಲಕ ನಮ್ಮ ದೇಹದ ಅಂಗಗಳು ಆಕ್ಟಿವೇಟ್ ಆಗುತ್ತದೆ ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆದೃಷ್ಟಿ ದೋಷ ಸಹ ನಿವಾರಣೆ ಆಗುತ್ತದೆ ನಾವು ಈ ಲೇಖನದ ಮೂಲಕ ಪಾದಾಭ್ಯಂಗದ ಬಗ್ಗೆ ತಿಳಿದುಕೊಳ್ಳೋಣ.
ಪಾದಕ್ಕೆ ಎಣ್ಣೆ ಹಾಗೂ ತುಪ್ಪ ದಿಂದ ಮಸಾಜ್ ಮಾಡುವುದರಿಂದ ಎರಡು ರೀತಿಯ ಪ್ರಯೋಜನ ಇರುತ್ತದೆ ಪಾದಕ್ಕೆ ಪ್ರಯೋಜನ ಆಗುತ್ತದೆ ಹಾಗೆಯೇ ಇಡೀ ದೇಹಕ್ಕೆ ಪ್ರಯೋಜನ ಆಗುತ್ತದೆ ಪ್ರತಿದಿನ ಪಾದಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಪಾದದ ಒಡಕು ಕಡಿಮೆ ಆಗುತ್ತದೆ ಹಾಗೆಯೇ ತುಂಬಾ ಜನರಿಗೆ ಹಿಮ್ಮಡಿ ನೋವು ಕಂಡು ಬರುತ್ತದೆ ದೂರ ನಡೆದಾಗ ಹಿಮ್ಮಡಿ ನೋವು ಕಂಡು ಬರುತ್ತದೆ ಹಿಮ್ಮಡಿ ನೋವನ್ನು ಕಡಿಮೆ ಮಾಡಲು ಸಹ ಪಾದಕ್ಕೆ ಎಣ್ಣೆ ಹಾಗೂ ತುಪ್ಪವನ್ನು ಹಚ್ಚುವ ಮೂಲಕ ಹಿಮ್ಮಡಿ ನೋವು ಕಡಿಮೆ ಆಗುತ್ತದೆ. ಪಾದ ಹಿಡಿದುಕೊಳ್ಳುವ ಸಮಸ್ಯೆಯನ್ನು ಸಹ ಪಾದಾಭ್ಯಂಗ ಕಡಿಮೆ ಮಾಡುತ್ತದೆ ತುಂಬಾ ಜನರಿಗೆ ಆಂಕಲ್ ಜಾಯಿಂಟ್ ಅಲ್ಲಿ ಹಿಡಿದುಕೊಂಡ ಹಾಗೆ ಆಗುತ್ತದೆ ಅಂತಹ ಸಮಸ್ಯೆ ಇದ್ದರೂ ಸಹ ಪಾದಕ್ಕೆ ಪ್ರತಿ ದಿನ ಎಣ್ಣೆಯನ್ನು ಹಚ್ಚುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು .
ಪಾದಕ್ಕೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವ ಮೂಲಕ ನಮ್ಮ ದೇಹದ ಅಂಗಗಳು ಆಕ್ಟಿವೇಟ್ ಆಗುತ್ತದೆ ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ ಕಣ್ಣಿಗು ಸಹ ಪಾದಾಭ್ಯಂಗ ತುಂಬಾ ಒಳ್ಳೆಯದು ದೃಷ್ಟಿಯ ಸೂಕ್ಷ್ಮತೆಯ ಪ್ರಸಾರ ಮಾಡಲು ಸಹ ಪಾದಭ್ಯಂಗ ಮಾಡುವ ಮೂಲಕ ಸಹಾಯಕವಾಗುತ್ತದೆ ದೃಷ್ಟಿ ದೋಷ ಸಹ ನಿವಾರಣೆ ಆಗುತ್ತದೆ ವಯಸ್ಸಾದ ನಂತರ ದೃಷ್ಟಿ ದೋಷ ಬರದೆ ಇರಲು ಪಾದಕ್ಕೆ ಎಣ್ಣೆಯ ಮಸಾಜ್ ಅನ್ನು ಮಾಡಬೇಕು. ನಿದ್ದೆ ಸರಿಯಾಗಿ ಬರಲು ಪಾದಕ್ಕೆ ಎಣ್ಣೆಯನ್ನು ಹಚ್ಚಬೇಕು ಕಾಲಿನ ಹೆಬ್ಬೆರಳು ಸಹ ಎಣ್ಣೆಯ ಮಸಾಜ್ ಮಾಡುವುದರಿಂದ ನಮ್ಮ ಮೆದುಳು ಆಕ್ಟೀವೆಟ್ ಆಗುತ್ತದೆ ಚಿಂತೆ ಸಹ ನಿವಾರಣೆ ಆಗುತ್ತದೆ ಹಾಗೆಯೇ ಕೆಲಸವನ್ನು ಒಳ್ಳೆಯ ರೀತಿಯಲ್ಲಿ ಮಾಡಲು ಸಹಾಯಕ ಆಗುತ್ತದೆ ಬೊಜ್ಜು ಹಾಗೂ ಕಫದ ಸಮಸ್ಯೆ ಇದ್ದವರು ಹಾಗೂ ಅಸ್ತಮಾ ಇದ್ದವರು ಎಳ್ಳು ಎಣ್ಣೆಯನ್ನು ಪಾದಕ್ಕೆ ಹಚ್ಚಬೇಕು ಎಳ್ಳು ಎಣ್ಣೆಯನ್ನು ಬಳಸುವುದರಿಂದ ಕಫ ಹೆಚ್ಚಾಗುವುದು ಇಲ್ಲ .
ಉರಿಯುರಿ ಇದ್ದವರು ಹಾಗೂ ಟೆನ್ಶನ್ ತುಂಬಾ ಇರುವರು ಹಾಗೂ ತಲೆ ನೋವು ಇದ್ದವರು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಬೇಕು ಕೊಬ್ಬರಿ ಎಣ್ಣೆ ತುಂಬಾ ತಂಪು ಹಾಗಾಗಿ ಉಷ್ಣ ಇದ್ದವರು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು ಹಾಗೆಯೇ ವಾತದ ಸಮಸ್ಯೆ ಇರುವರು ಎಳ್ಳು ಎಣ್ಣೆಯನ್ನು ಸಹ ಬಳಕೆ ಮಾಡಬಹುದು ಹಾಗೆಯೇ ತುಪ್ಪವನ್ನು ಸಹ ಬಳಕೆ ಮಾಡಬಹುದು ತುಪ್ಪವನ್ನು ಎಲ್ಲ ರೀತಿಯ ದೇಹ ಪ್ರಕೃತಿ ಇರುವರು ಬಳಕೆ ಮಾಡಬಹುದು .ತುಪ್ಪ ವಾತ ಪಿತ್ತ ಕಫ ಇರಿವರಿಗೆ ತುಂಬಾ ಒಳ್ಳೆಯದು ಡಯಾಬಿಟಿಸ್ ಇರುವರಿಗೆ ಪಾದಾಭ್ಯಂಗ ತುಂಬಾ ಒಳ್ಳೆಯದು ರಕ್ತ ಸಂಚಾರ ಕಾಲಿನ ಪಾದಗಳಿಗೆ ಆಗುತ್ತದೆ ಡಯಾಬಿಟಿಸ್ ಆದವರಿಗೆ ಕಾಲಿನಲ್ಲಿ ತುಂಬಾ ಉರಿ ಕಂಡು ಬರುತ್ತದೆ ಇಂತಹ ಸಮಸ್ಯೆಯಿಂದ ಹೋಗಲಾಡಿಸಲು ಪಾದಾಭ್ಯಂಗ ತುಂಬಾ ಒಳ್ಳೆಯದು ಹೀಗೆ ಪಾದಾಭ್ಯಂಗ ತುಂಬಾ ಒಳ್ಳೆಯದು.