WhatsApp Group Join Now
Telegram Group Join Now

ಶ್ರೀ ಕ್ಷೇತ್ರ ದಸರೀಘಟ್ಟದ ಅಮ್ಮನವರ ಪವಾಡ ಅದ್ಭುತವಾಗಿದೆ ಅದನ್ನು ಯಾವ ರೀತಿಯಲ್ಲೂಬಣ್ಣಿಸಲು ವರ್ಣಿಸಲು ಸಾಧ್ಯವೇ ಇಲ್ಲ. ಕಾರಣ ಅದೊಂದು ಅಗೋಚರ ವಿಸ್ಮಯಕಾರಿ ಹಿಂದೆ ಇಂದು ಮುಂದೆ ನಡೆಯುವ ಆಗುಹೋಗುಗಳನ್ನು ಬರೆದು ಹೇಳುವ ಮಹಾಶಕ್ತಿ. ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದುಕೊಳ್ಳುತ್ತಾರೆ

ಒಂದು ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ಯಾವ ಭಾಷೆಯಲ್ಲಾದರೂ ನಮ್ಮ ಮನದಾಳದ ಭಾವನೆ ನೋವು ಸಮಸ್ಯೆ ಬರೆದು ಅದಕ್ಕೆ ಪರಿಹಾರ ಹೇಳುತ್ತದೆ ಇದು ನೈಜಘಟನೆಯಾಗಿದೆ ಭೂಮಂಡಲದಲ್ಲಿಅದೆಷ್ಟೋ ಅಗೋಚರವಾದ ವಿಸ್ಮಯ ಶಕ್ತಿಗಳು ಕಂಡರೂ ಕಾಣದೆ ಆದರೆ ಕಂಡಂತೆ ಗೋಚರಿಸುವ ರಹಸ್ಯಗಳು ವೇದ ಕಾಲದಿಂದಲೂ ಇಂದಿನವರೆಗೂ ನಡೆಯುತ್ತಿವೆ. ಅವುಗಳನ್ನು ಪವಾಡವೆನ್ನುತ್ತಾರೆ. ಅವುಗಳ ಮೂಲಬಿಂದುವೇ ಆದಿಶಕ್ತಿ ನಾವು ಈ ಲೇಖನದ ಮೂಲಕ. ದಸರಿಘಟ್ಟದ ಚೌಡೇಶ್ವರಿ ಬಗ್ಗೆ ತಿಳಿದುಕೊಳ್ಳೋಣ.

ತುಂಬಾ ಜನರ ಅನುಮಾನ ದೇವರು ಇದ್ದಾನೆ ಅಥವಾ ಇಲ್ಲವೆಂದು ಕಲ್ಪತರ ನಾಡು ಎಂದೇ ಪ್ರಸಿದ್ಧ ಆಗಿರುವ ತಿಪಟೂರು ಗ್ರಾಮದ ದಸರಿಘಟ್ಟ ಕ್ಷೇತ್ರ ಶಕ್ತಿ ದೇವತೆ ಚೌಡೇಶ್ವರಿ ನೆಲೆನಾಡು ಇದು ತುಮಕೂರು ಜಿಲ್ಲೆಯಲ್ಲಿ ಇದೆ ದಸರಿಘಟ್ಟ ಕ್ಷೇತ್ರದ ಚೌಡೇಶ್ವರಿ ದೇವಿಯು ಭಕ್ತರ ಕಷ್ಟ ನಷ್ಟ ಗಳಿಗೆ ತನ್ನ ಕಳಸದ ಬರವಣಿಗೆ ಪರಿಹಾರ ಸೂಚಿಸುತ್ತಾಳೆ ಎನ್ನವ ನಂಬಿಕೆ ಇದೆ ಹಾಗಾಗಿ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ.

ಗಣ್ಯರು ಸಹ ಭೇಟಿ ನೀಡಿ ದೇವಿಯ ದರ್ಶನ ಗೈದು ಪುನೀತರಾಗುತ್ತಾರೆ ಈ ದೇವಸ್ಥಾನಕ್ಕೆ ಹೋಗುವ ಮರ್ಗದಲ್ಲಿ ತೆಂಗಿನ ಮರದ ಸಾಲುಗಳು ಇದೆ ಸುಮಾರು ಇನ್ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ ಪ್ರವೇಶ ದ್ವಾರದಲ್ಲಿ ಎಪ್ಪತ್ತೆಂಟು ಅಡಿ ಎತ್ತರದ ರಾಜ ಗೋಪುರ ಇರುತ್ತದೆ ದೇವಾಲಯದಲ್ಲಿ ಹುತ್ತದ ಮಣ್ಣಿನಿಂದ ಅದ ಚೌಡೇಶ್ವರಿ ವಿಗ್ರಹ ಇದೆ. ಈ ದೇವಸ್ಥಾನದ ಪುಟ್ಟ ದೇವಾಲಯವಾದ ಈ ಕ್ಷೇತ್ರ ಪಾಲಕಲಾದ ಕರಿಯಮ್ಮ ಕಪ್ಪು ಶಿಲೆಯ ಮೂರ್ತಿಯು ಇದೆ .

ಆದಿ ಚುಂಚನಗಿರಿ ಮಠವು ಈ ಕ್ಷೇತ್ರದ ಸಂಪೂರ್ಣ ಆಡಳಿತ ಜವಾಬ್ದಾರಿಯನ್ನು ಒಳಗೊಂಡಿದೆ ಚೌಡೇಶ್ವರಿ ದೇವರನ್ನು ಬರೆಯುವ ಅಮ್ಮ ಹಾಗೂ ಮಾತನಾಡುವ ಅಮ್ಮ ಎಂದು ಕರೆಯಲಾಗುತ್ತದೆ ಅಥವಾ ಮಾತನಾಡುವ ದೇವಿ ಎಂದು ಕರೆಯಲಾಗುತ್ತದೆ ಭಕ್ತರ ಸಮಸ್ಯೆಗಳಿಗೆ ಈ ಉತ್ಸವ ಮೂರ್ತಿಯು ತನ್ನ ಕಲಶದ ಬರವಣಿಗೆ ಮೂಲಕ ಪರಿಹಾರ ನೀಡುತ್ತಾಳೆ ಭಕ್ತರು ತಮ್ಮ ಮನಸ್ಸಿನಲ್ಲಿ ಯಾವುದಾದರೂ ವಸ್ತು ಕುರಿತು ಅಂದು ಕೊಂಡರೆ ಉತ್ಸವ ಮೂರ್ತಿ ತೋರಿಸುತ್ತದೆ ಇದು ಈ ಕ್ಷೇತ್ರದ ವಿಶೇಷವಾಗಿದೆ ವಿವಿಧ ಪೂಜೆಗಳನ್ನು ನಡೆಸಲಾಗುತ್ತದೆ.

ಪ್ರತಿ ವರ್ಷ ವಿಜಯ ದಶಮಿಯಂದು ಈ ಕ್ಷೇತ್ರಕ್ಕೆ ಗದ್ದಿಗೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ ನವರಾತ್ರಿಯ ಒಂಬತ್ತು ದಿನ ದೇವಿಗೆ ಅಲಂಕಾರ ಮಾಡಲಾಗುತ್ತದೆ ಇದನ್ನು ನೀಡುವುದೇ ಬಹಳ ಸೊಗಸು ಜಾತ್ರೆ ಸಹ ನಡೆಯುತ್ತದೆ ಇಲ್ಲಿ ರಾಶಿ ಹಾಕಿರುವ ಕಾರೆ ಮುಳ್ಳಿನ ಮೇಲೆ ಜನರು ನಡೆಯುತ್ತಾರೆ ಮುಳ್ಳಿನ ರಾಶಿಗೆ ಅರ್ಚರಕರು ಪೂಜೆ ಮಾಡುತ್ತಾರೆ ನಾಲ್ಕು ಜನರು ಚೌಡೇಶ್ವರಿ ಮೂರ್ತಿಯನ್ನು ಹೊತ್ತು ಮುಳ್ಳಿನ ರಾಶಿಯ ಮೇಲೆ ಹೋಗುತ್ತಾರೆ ಈ ದೇವಾಲಯ ತುಂಬಾ ಸುಂದರವಾಗಿ ಇದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: