ಈಗಿನ ದಿನಗಳಲ್ಲಿ ಹೊರಗಿನ ಬೇಕರಿ ಫುಡ್, ಜಂಕ್ ಫುಡ್ ಮೊರೆ ಹೋಗುತ್ತಿದ್ದೇವೆ. ಜಂಕ್ ಫುಡ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಸಿಗುವ ಕೆಲವೆ ಕೆಲವು ಸಾಮಗ್ರಿಗಳನ್ನು ಬಳಸಿ ರುಚಿಕರವಾದ ಹಾಗೂ ಆರೋಗ್ಯಕ್ಕೆ ಉತ್ತಮವಾಗಿರುವ ಪ್ರೊಟೀನ್ ಲಡ್ಡು ತಯಾರಿಸಬಹುದು. ಪ್ರೊಟೀನ್ ಲಡ್ಡು ಮಾಡುವ ವಿಧಾನ ಹಾಗೂ ಬೇಕಾಗುವ ಸಾಮಗ್ರಿಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ರುಚಿಕರವಾದ ಪ್ರೊಟೀನ್ ಲಡ್ಡು ತಿನ್ನಲು ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸೇವಿಸಬಹುದು. ಚಿಕ್ಕಮಕ್ಕಳು ಇದರ ಸೇವನೆಯಿಂದ ಅವರ ವೇಟ್ ಗೇನ್ ಆಗುತ್ತದೆ ಜೊತೆಗೆ ಅವರಿಗೆ ಪೌಷ್ಟಿಕಾಂಶ ಸಿಗುತ್ತದೆ. ಈ ಲಡ್ಡು ಸೇವನೆಯಿಂದ ನಿಶ್ಯಕ್ತಿ ಕಡಿಮೆ ಆಗುತ್ತದೆ. ಪ್ರೊಟೀನ್ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು 500 ಗ್ರಾಂ ಬಡವರ ಬಾದಾಮಿ ಎಂದೆ ಪ್ರಸಿದ್ಧವಾಗಿರುವ ಶೇಂಗಾ,150 ಗ್ರಾಂ ಎಲ್ಲ ರೀತಿಯ ಡ್ರೈಫ್ರೂಟ್ಸ್, ರುಚಿಗೆ ತಕ್ಕಷ್ಟು ಬೆಲ್ಲ, ಲಡ್ಡು ಮಾಡುವ ವಿಧಾನ ಲಡ್ಡು ಮಾಡಲು ಮೊದಲಿಗೆ ಶೇಂಗಾವನ್ನು ಹುರಿದುಕೊಳ್ಳಬೇಕು ಹುರಿದ ಶೇಂಗಾದ ಸಿಪ್ಪೆಯನ್ನು ಬಿಡಿಸಬೇಕು.
ನಂತರ ಡ್ರೈಫ್ರೂಟ್ಸ್ ಗಳನ್ನು ಲೈಟ್ ಆಗಿ ಹುರಿದುಕೊಳ್ಳಬೇಕು. ಸಿಪ್ಪೆ ಬಿಡಿಸಿದ ಶೇಂಗಾವನ್ನು ಪೌಡರ್ ಮಾಡಿಕೊಳ್ಳಬೇಕು ಡ್ರೈಫ್ರೂಟ್ಸ್ ಗಳನ್ನು ಪೌಡರ್ ಮಾಡಿಕೊಳ್ಳಬೇಕು. ಶೇಂಗಾ ಪೌಡರ್ ಮತ್ತು ಡ್ರೈ ಫ್ರೂಟ್ಸ್ ಪೌಡರ್ ಅನ್ನು ಮಿಕ್ಸ್ ಮಾಡಿ ಅದಕ್ಕೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಅದನ್ನು ಒಂದು ಬಾರಿ ಮಿಕ್ಸಿಗೆ ಹಾಕಿದಾಗ ಉಂಡೆ ಕಟ್ಟುವ ಹದಕ್ಕೆ ಬರುತ್ತದೆ ಆಗ ಉಂಡೆ ಕಟ್ಟಬೇಕು ಹೀಗೆ ಮಾಡಿದ ಉಂಡೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ದೇಹಕ್ಕೆ ಶಕ್ತಿ ದೊರೆಯುತ್ತದೆ.
ಪ್ರತಿದಿನ ಒಂದು ಉಂಡೆಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಕ್ತಿ ದೊರೆತು ಚಟುವಟಿಕೆಯಿಂದ ಇರಲು ಸಾಧ್ಯ. ಚಿಕ್ಕಮಕ್ಕಳು ಈ ಉಂಡೆಯನ್ನು ಇಷ್ಟಪಡುತ್ತಾರೆ. ಯಾವ ವಯಸ್ಸಿನವರಾದರೂ ಈ ಉಂಡೆಯನ್ನು ಸೇವಿಸಬಹುದು. ಈ ಉಂಡೆಯನ್ನು ಮಾಡಿ ವಾರದವರೆಗೆ ಡಬ್ಬದಲ್ಲಿ ಹಾಕಿ ಇಡಬಹುದು. ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಸುಲಭವಾಗಿ ಮಾಡಬಹುದಾದ ಈ ಉಂಡೆಯನ್ನು ಮಾಡಿಕೊಂಡು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಉಂಡೆಯ ಬಗ್ಗೆ ಎಲ್ಲರಿಗೂ ತಿಳಿಸಿ ನೀವು ಪ್ರೊಟೀನ್ ಉಂಡೆ ತಯಾರಿಸಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.