ಕೆಲವೊಮ್ಮೆ ಯಾರಾದರೂ ಬೈದರೆ ನಾವು ತಕ್ಷಣ ಸ್ವೀಕರಿಸಿ ಸುಮ್ಮನೆ ನಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ ಹಾಗೆಯೇ ಯಾರಾದರೂ ಬೈದರೆ ಅದನ್ನು ಸ್ವೀಕರಿಸಬಾರದು ಇದರಿಂದ ಮಾನಸಿಕ ನೆಮ್ಮದಿಯನ್ನು ಸಿಗುತ್ತದೆ ಹಾಗೆಯೇ ಆನಂದವಾಗಿ ಬುದ್ಧ ನ ಹಾಗೆ ಜೀವಿಸಬಹುದು
ಕೆಲವು ವಿಷಯಗಳನ್ನು ಸರಿಯಾಗಿ ಗಮನಿಸಿ ಜೀವನ ನಡೆಸಿದರೆ ಅನೇಕ ಮಾನಸಿಕ ತೊಂದರೆಗಳನ್ನು ಎದುರಿಸುವ ಅವಕಾಶ ಇರುವುದಿಲ್ಲ. ಹಾಗೆಯೇ ಎಲ್ಲಿಯ ವರೆಗೆ ಯಾರಾದರೂ ಬೈದರೆ ಅದನ್ನು ನಾವು ಸ್ವೀಕರಿಸುತ್ತೇವೆ ಅಲ್ಲಿಯ ವರೆಗೆ ನೆಮ್ಮದಿ ಇರುವುದಿಲ್ಲ ಎಸ್ಟೇ ಬೈದರು ಅದನ್ನು ಗಮನಿಸಬಾರದು ಹಾಗೂ ನಮಗೆ ಎಂದು ಸ್ವೀಕರಿಸಬಾರದು ನಾವು ಈ ಲೇಖನದ ಮೂಲಕ ಬುದ್ದನಂತೆ ಜೀವಿಸುವ ಬಗೆ ಹಾಗೂ ಯಾರಾದರೂ ಬೈದರೆ ಅನುಸರಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಒಂದು ದಿನ ಬುದ್ಧ ತಮ್ಮ ಶಿಷ್ಯರೊಂದಿಗೆ ಭಿಕ್ಷೆ ಪತ್ರಗಳನ್ನು ಹಿಡಿದು ಭಿಕ್ಷಾಟನೆಗೆ ಮಾಡುತ್ತ ಒಂದು ಮನೆಯ ಮುಂದು ನಿಂತು ಅಮ್ಮ ಎಂದು ಕೂಗುತ್ತಾರೆ ಆಗ ಮನೆಯಲಿದ್ದ ಮಹಿಳೆ ಹೊರಗೆ ಬಂದು ಬುದ್ಧನನ್ನು ನೋಡಿ ನಿನಗೆ ಸ್ವಲ್ಪ ಆದರೂ ಬುದ್ದಿ ಇಲ್ಲವೇ ಈ ರೀತಿ ಭಿಕ್ಷೆಯನ್ನು ಬೇಡಲು ನಾಚಿಕೆ ಇಲ್ಲವೇ ನಿನಗೆ ಜೊತೆಯಾಗಿ ಶಿಷ್ಯರು ಬೇರೆ ಇವರನ್ನು ಸಹ ಕೆಡಿಸುತ್ತಿರುವೆ ಎಂದು ಆಕೆ ಬುದ್ಧನನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾರೆ .ಸ್ವಲ್ಪ ಸಮಯದ ನಂತರ ಬುದ್ಧನು ಮುಗುಳು ನಗುತ್ತಾ ಅಮ್ಮ ನಿಮ್ಮ ಮಾತು ಮುಗಿಯಿತ ಈಗಲಾದರೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೆನೆ ಉತ್ತರ ಹೇಳುವಿರಾ ಎಂದು ಬುದ್ಧ ಕೇಳುತ್ತಾರೆ.
ಅದಕ್ಕೆ ಆಕೆ ಸರಿ ಕೇಳು ಎಂದು ಕೋಪದಲ್ಲಿ ಹೇಳುತ್ತಾರೆ ನಿನಗೆ ಭಿಕ್ಷಾ ಪಾತ್ರೆಗಳನ್ನು ನೀಡುತ್ತೇನೆ ತಿರಸ್ಕರಿಸಿ ಸ್ವೀಕರಿಸಲಿಲ್ಲ ಎಂದರೆ ಈ ಭಿಕ್ಷಾ ಪಾತ್ರೆ ಏನಾಗುತ್ತದೆ ಎಂದು ಪ್ರಶ್ನಿಸುತ್ತಾರೆ ಆಗ ಆಕೆ ಏನಾಗುತ್ತದೆ ಆ ಭಿಕ್ಷಾ ಪಾತ್ರೆ ನಿನ್ನ ಬಳಿ ಇರುತ್ತದೆ ಎಂದು ಕೋಪದಲ್ಲಿ ಉತ್ತರ ನೀಡುತ್ತಾರೆ ಆಗ ಬುದ್ಧನು ನೀವು ಬೈದ ಬೈಗುಳವನ್ನು ನಾವು ಸ್ವೀಕರಿಸಲಿಲ್ಲ ನಿಮ್ಮ ಬಳಿಯೇ ಇವೆ ಅವು ನಿಮಗೆ ಸೇರುತ್ತದೆ ಎಂದು ಹೇಳಿ ಮುಗುಳು ನಗುತ್ತಾ ಮುಂದೆ ಹೋಗುತ್ತಾರೆ. ನಮ್ಮನ್ನು ಯಾರಾದರೂ ಬೈದರೆ ನಾವು ಅವುಗಳನ್ನು ಸ್ವೀಕರಿಸಿ ಸುಮ್ಮನೆ ಇದ್ದರೆ ಮನಸ್ಸಿಗೆ ಬಾಧೆ ಆಗುತ್ತದೆ ಇದರಿಂದ ಯಾರಿಗಾದರೂ ಹಾಗೂ ಯಾರಾದರೂ ಬೈದರೆ ಅದನ್ನು ಸ್ವೀಕರಿಸಬಾರದು ನಾವು ಬುದ್ಧರ ರೀತಿ ಯೋಚಿಸಿದರೆ ಆನಂದವಾಗಿ ಜೀವಿಸಬಹುದು.