ನಮ್ಮ ದೇಶದಲ್ಲಿ ಎಲ್ಲಾ ಹಬ್ಬಗಳನ್ನು ಅತ್ಯಂತ ಸಡಗರದಿಂದ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂತಹ ಹಬ್ಬಗಳಲ್ಲಿ ಮಕರಸಂಕ್ರಾಂತಿಯು ಒಂದು ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಒಂದೊಂದು ವಿಧದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ತನ್ನ ಮಗನಾದ ಶನಿಯ ಮನೆಗೆ ಹೋಗುತ್ತಾನೆ ಆ ದಿನದಿಂದ ಋತು ಬದಲಾವಣೆಯ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಪ್ರತಿವರ್ಷ ಮಕರ ಸಂಕ್ರಾಂತಿಯನ್ನು ಜನವರಿ ಹಾದಿನಾಲ್ಕರಂದು ಆಚರಿಸಲಾಗುತ್ತದೆ ಕೆಲವೊಮ್ಮೆ ಗ್ರಹಗಳ ನಕ್ಷತ್ರಪುಂಜಗಳ ಸ್ಥಾನ ಬದಲಾವಣೆಯಿಂದಾಗಿ ಮಕರ ಸಂಕ್ರಾಂತಿ ಜನವರಿ ಹದಿನೈದರಂದು ಬರುತ್ತದೆ.
ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಎಲ್ಲರೂ ಕೂಡ ಸಡಗರದಿಂದ ಆಚರಿಸುತ್ತಾರೆ ಅದೇ ರೀತಿ ನಮ್ಮ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಉಪೇಂದ್ರ ಅವರ ಕೂಡ ತಮ್ಮ ಕುಟುಂಬದವರೊಂದಿಗೆ ಸಡಗರ-ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಕೊಂಡಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಉಪೇಂದ್ರ ಅವರು ತಮ್ಮ ಪತ್ನಿ ಪ್ರಿಯಾಂಕ ಮತ್ತು ಮಕ್ಕಳಾದ ಐಶ್ವರ್ಯ ಆಯುಷ್ಯ ಜೊತೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ. ಉಪೇಂದ್ರ ಅವರ ಮನೆಯಲ್ಲಿ ಪ್ರತಿವರ್ಷವೂ ಸಂಕ್ರಾಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ ಅದೇ ರೀತಿ ಈ ವರ್ಷವೂ ಕೂಡ ಕುಟುಂಬದವರೆಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸಡಗರದಿಂದ ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ.
ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಉಪೇಂದ್ರ ಅವರ ಕುಟುಂಬದವರು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಜೊತೆಗೆ ಬಗೆಬಗೆಯ ಅಡುಗೆಗಳನ್ನು ಕೂಡ ಮಾಡಿದ್ದಾರೆ. ಕರೋನಾ ಇರುವ ಕಾರಣ ಅತಿಥಿಗಳನ್ನು ಬರಮಾಡದೆ ಕೇವಲ ಕುಟುಂಬದವರೊಂದಿಗೆ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಕೆಲಸದ ನಡುವೆಯೂ ಉಪೇಂದ್ರ ಅವರು ತಮ್ಮ ಕುಟುಂಬದವರೊಂದಿಗೆ ಸೇರಿಕೊಂಡು ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ನೋಡಿ ಉಪೇಂದ್ರ ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈ ಸಂಕ್ರಾಂತಿ ಹಬ್ಬ ಎಲ್ಲರ ಬದುಕಿನಲ್ಲಿ ಸುಖ-ಸಮೃದ್ಧಿಯನ್ನು ತರಲಿ ಎಂದು ನಾವೆಲ್ಲರೂ ಆಶಿಸೋಣ.