ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕ ನೋಡಿ ಅದೃಷ್ಟದ ಬಗ್ಗೆ ಹೇಳುತ್ತಾರೆ. ಹಾಗೆಯೆ ಸಂಖ್ಯಾ ಶಾಸ್ತ್ರದಲ್ಲೂ ವ್ಯಕ್ತಿಗೆ ಅದೃಷ್ಟ ತಂದು ಕೊಡುವ ಸಂಖ್ಯೆ ಯಾವುದೆಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ಹುಟ್ಟಿದ ದಿನಾಂಕವು ಅದೃಷ್ಟ ತರುವ ಸಂಖ್ಯೆ ಎಂದು ತಿಳಿದಿರುತ್ತೆವೆ, ಅದು ನಿಜವಾಗಬೇಕೆಂದೇನೂ ಇಲ್ಲ ಕೆಲವರಿಗೆ ಹುಟ್ಟಿದ ದಿನ ತಂದರೆ ಮತ್ತೆ ಕೆಲವರಿಗೆ ಆ ಸಂಖ್ಯೆ ಲಕ್ಕಿ ಆಗಿರುವುದಿಲ್ಲ, ಜನ್ಮ ತಿಥಿಯನ್ನು ಆಧರಿಸಿ ವ್ಯಕ್ತಿತ್ವವನ್ನು ಅರಿಯಲಾಗುತ್ತದೆ. ಧನು ರಾಶಿಯವರ ಲಕ್ಕಿ ನಂಬರ್, ಬಣ್ಣ, ದಿನ ಹಾಗೂ ದಿಕ್ಕು ಮತ್ತು ಲಕ್ಕಿ ಸ್ಟೋನ್ ಯಾವುದು ಎಂದು ತಿಳಿಯೋಣ.
ಧನು ರಾಶಿಯವರ ಅದೃಷ್ಟ ಸಂಖ್ಯೆ ಒಂದು, ಎರಡು, ಮೂರು ಹಾಗೂ ಒಂಬತ್ತು. ಈ ಸಂಖ್ಯೆಗಳು ಧನು ರಾಶಿಯವರಿಗೆ ಶುಭವಾಗಿರುವಂತಹ ಸಂಖ್ಯೆಗಳು. ಹಾಗೂ ಐದು ಮತ್ತು ಆರು ಸಂಖ್ಯೆಯಿಂದ ದೂರ ಇರಬೇಕು. ಹೊಸ ಕೆಲಸ ಪ್ರಾರಂಭಿಸುವಾಗ ಅಥವಾ ಅಂಗಡಿ ಶುರು ಮಾಡುವಾಗ ಅಂತಹ ಸಂದರ್ಭದಲ್ಲಿ ಲಕ್ಕಿ ನಂಬರ್ ಅನ್ನು ಆಯ್ಕೆ ಮಾಡಬೇಕು.
ಧನು ರಾಶಿಯವರ ಅದೃಷ್ಟದ ದಿನ ಭಾನುವಾರ, ಸೋಮವಾರ ಮತ್ತು ಗುರುವಾರ ಅತ್ಯಂತ ಶುಭ ದಿನ ಆಗಿರುತ್ತವೆ ಧನು ರಾಶಿಯವರಿಗೆ. ಹಾಗೂ ಬುಧವಾರ ಮತ್ತು ಶುಕ್ರವಾರ ಹೊಸ ಕೆಲಸವನ್ನು ಮಾಡುವುದನ್ನು ಸ್ವಲ್ಪ ನಿಲ್ಲಿಸಿ. ಮಂಗಳವಾರ ಮತ್ತು ಶನಿವಾರ ಯಾವ ಶುಭ ಕಾರ್ಯ ಅಥವಾ ಕೆಲಸ ಮಾಡಲೇಬಾರದು. ಧನು ರಾಶಿಯವರ ಅದೃಷ್ಟದ ಬಣ್ಣ ಕೆಂಪು, ಕೆನೆ ಹಾಲಿನ ಬಣ್ಣ ಮತ್ತು ಹಳದಿ ಬಣ್ಣ ಮತ್ತು ಕೇಸರಿ ಬಣ್ಣ. ಹಸಿರು ಮತ್ತು ಅತಿ ಬಿಳಿ ಬಣ್ಣದ ಬಟ್ಟೆಯನ್ನು ಬಳಸುವುದನ್ನು ಕಡಿಮೆ ಮಾಡಿ.
ಧನುಸ್ಸು ರಾಶಿಯವರಿಗೆ ಪೂರ್ವ ದಿಕ್ಕು ಶ್ರೇಯಸ್ಕರ ಪೂರ್ವ ದಿಕ್ಕಿನಲ್ಲಿ ಮನೆ ಮಾಡುವುದು ಅಂಗಡಿ ಮಾಡುವುದು, ಶುಭವಾಗುತ್ತದೆ. ಧನು ರಾಶಿಯವರ ಅದೃಷ್ಟದ ಹರಳು :ಹಳದಿ ಪುಷ್ಯ ರಾಗ.. ಇದನ್ನು ಚಿನ್ನದಲ್ಲಿ ಗಂಡು ಮಕ್ಕಳು ಬಲಗೈ ಅಲ್ಲಿ ಹೆಣ್ಣು ಮಕ್ಕಳು ಎಡಗೈ ಅಲ್ಲಿ ಹಾಕಬೇಕು. ಇದನ್ನು ತೋರು ಬೆರಳು ಅಥವಾ ಗುರುವಿನ ಬೆರಳ್ಗೆ ಹಾಕಬೇಕಾಗುತ್ತದೆ.