ಧನಸ್ಸು ರಾಶಿಯವರು ಯಾವ ಸಂಖ್ಯೆ ಹಾಗೂ ಯಾವ ಬಣ್ಣ ಉಪಯೋಗಿಸುವುದರಿಂದ ಒಳ್ಳೆಯ ಫಲ ನೀಡುತ್ತದೆ ಎಂದು ಇದರಲ್ಲಿ ತಿಳಿದುಕೊಳ್ಳಬಹುದು.
ಧನಸ್ಸು ರಾಶಿಯ ರಾಶಿಯಾಧಿಪತಿ ಗುರು, ಗುರುವಿನ ಸಂಖ್ಯೆ 3 ಆಗಿರುವುದರಿಂದ ಧನಸ್ಸು ರಾಶಿಯವರ ಅದೃಷ್ಟ ಸಂಖ್ಯೆ 3. ಕೂಡಿಸಿದಾಗ 3 ಬರುವಂತಹ ಸಂಖ್ಯೆ ನಿಮಗೆ ಶುಭ ಸಂಖ್ಯೆಯಾಗಿರುತ್ತದೆ. ಮೂರನ್ನು ಹೊರೆತುಪಡಿಸಿ 2, 1 ಮತ್ತು 9 ಕೂಡ ಅದೃಷ್ಟ ಸಂಖ್ಯೆಯಾಗಿದೆ.
9 ಸಂಖ್ಯೆಯನ್ನ ಮುಖ್ಯವಾಗಿ ವಾಹನ ಖರೀದಿ ಮಾಡುವಾಗ ಉಪಯೋಗಿಸಿಕೊಂಡರೆ ಬಹಳ ಒಳ್ಳೆಯದು. ವ್ಯವಹಾರಿಕವಾಗಿ 3 ಸಂಖ್ಯೆಯು ಶುಭ ನೀಡುತ್ತದೆ. ವೈಯಕ್ತಿಕ ಸಮಾರಂಭದಲ್ಲಿ 1 ಸಂಖ್ಯೆಯನ್ನು ಅನುಸರಿಸಿ ಅನುಕೂಲವಾಗುತ್ತದೆ. 2 ಸಂಖ್ಯೆಯನ್ನ ನೀರಿನ ಮೇಲೆ ವ್ಯವಹಾರ ಮಾಡುವಂಥವರು ಉಪಯೋಗಿಸಿ.
ಧನಸ್ಸು ರಾಶಿಯವರ ಅದೃಷ್ಟ ಬಣ್ಣ ಹಳದಿ. ಹಳದಿ ಹೊರತುಪಡಿಸಿ ಕೇಸರಿ, ಕೆಂಪು ಮತ್ತು ಹಳದಿ ಕೂಡ ಒಳ್ಳೆ ಅದೃಷ್ಟದ ಬಣ್ಣವಾಗಿದೆ. ಧನಸ್ಸು ರಾಶಿಯವರ ಹಸಿರು ಮತ್ತು ಬಿಳಿ ಬಣ್ಣವನ್ನು ಬಳಸುವುದು ಸೂಕ್ತವಲ್ಲ.
ಧನಸ್ಸು ರಾಶಿಯವರಿಗೆ ಗುರುವಾರ ತುಂಬಾ ಒಳ್ಳೆಯ ದಿನ. ಗುರುವಾರ ಹೊರತುಪಡಿಸಿ ಸೋಮವಾರ ಮತ್ತು ಭಾನುವಾರ ತುಂಬಾ ಒಳ್ಳೆಯದು. ಧನಸ್ಸು ರಾಶಿಯವರು ಹೊಸ ಕಾರ್ಯ ಕೆಲಸವನ್ನ ಬುಧವಾರ ಮತ್ತು ಶುಕ್ರವಾರ ಮಾಡುವುದು ಸೂಕ್ತವಲ್ಲ ಯಾಕೆಂದರೆ ಶತ್ರು ಗ್ರಹದ ದಿನಗಳಾಗಿರುತ್ತದೆ.
ಅಷ್ಟ ದಿಗ್ಬಂಧನ ಮಾಡಿಕೊಂಡರೆ ಮನೆಗೆ ಯಾರಾದರೂ ದೃಷ್ಟಿ ಹಾಕಿದ್ದರೆ, ಮಾಂತ್ರಿಕ ಸಮಸ್ಯೆ ಅಥವಾ ಮಾಟ ಮಂತ್ರದ ಸಮಸ್ಯೆಗೆ ಅಷ್ಟು ದಿಗ್ಬಂದನ ಒಳ್ಳೆಯ ಪರಿಹಾರ.