ಬಹಳಷ್ಟು ಜನರು ದೇವರ ಪೂಜೆ ಮಾಡುತ್ತಿರುತ್ತಾರೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪುಷ್ಪಗಳು ಇರುತ್ತದೆ. ಅದೇ ರೀತಿ ವಿಘ್ನ ನಿವಾರಕ ವಿನಾಯಕನ ಪೂಜೆ ಮಾಡುವಾಗ ಒಂದು ಪುಷ್ಪವನ್ನು ಉಪಯೋಗಿಸಬಾರದು ಆ ಪುಷ್ಪ ಯಾವುದು, ಏಕೆ ಬಳಸಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ನಾವು ದಿನನಿತ್ಯ ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಒಳ್ಳೆಯ ರೂಢಿಯಾಗಿದೆ. ಪ್ರಥಮ ಪೂಜೆಯನ್ನು ಪಡೆಯುವ ವಿನಾಯಕನನ್ನು ವಿಘ್ನ ನಿವಾರಕ, ಮೋದಕಪ್ರಿಯ ಮೂಷಿಕವಾಹನ ಎಂದು ಕರೆಯುತ್ತಾರೆ. ಕಲಿಯುಗದಲ್ಲಿ ವಿನಾಯಕನನ್ನು ಮತ್ತು ದುರ್ಗಿಯನ್ನು ಪೂಜೆ ಮಾಡಿದರೆ ಬೇಗ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಎಷ್ಟೇ ಹೋಮ, ಹವನ, ಯಜ್ಞ, ತೀರ್ಥ ಸ್ನಾನ ಮಾಡಿದರೂ ಫಲವಿಲ್ಲ. ಕಲಿಯುಗದಲ್ಲಿ ಗಣಪತಿ ಮತ್ತು ದುರ್ಗಿ ದೇವತೆಯನ್ನು ಪೂಜೆ ಮಾಡಿದರೆ ಶುಭ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ ಅದರಲ್ಲೂ ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ವಿನಾಯಕನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ ಅದೇ ರೀತಿ ವಿನಾಯಕ ವಿಘ್ನಕಾರಕ ಕೂಡ ಹೌದು, ಯಾವುದೇ ಕೆಲಸ ಮಾಡಲು ಏನಾದರೂ ತೊಂದರೆ ಬರುತ್ತದೆ. ಅಂತಹ ವಿನಾಯಕ ದೇವರನ್ನು ಪೂಜೆ ಮಾಡುವುದು ಶುಭ. ವಿನಾಯಕನನ್ನು ಪೂಜೆ ಮಾಡುವಾಗ ನಾವು ಪುಷ್ಪಗಳಿಂದ ಅಲಂಕರೀಸುತ್ತೇವೆ ಆದರೆ ತುಳಸಿಯನ್ನು ವಿನಾಯಕನ ಪೂಜೆಗೆ ಬಳಸುವುದರಿಂದ ಅಶುಭ ಉಂಟಾಗುತ್ತದೆ ಅಲ್ಲದೆ ಕಾರ್ಯ ಪೂರ್ಣವಾಗುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ತುಳಸಿಯನ್ನು ಬಳಸಿ ವಿನಾಯಕನ ಪೂಜೆ ಮಾಡಬಾರದು.
ತುಳಸಿಯನ್ನು ಉಪಯೋಗಿಸದೆ ವಿನಾಯಕನನ್ನು ಪೂಜಿಸಿದರೆ ಖಂಡಿತ ಒಳ್ಳೆಯದಾಗುತ್ತದೆ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ದೇವರ ಪೂಜೆ ಮಾಡುವಾಗ ಶ್ರದ್ಧೆ, ಭಕ್ತಿ ಇರುವುದು ಒಳ್ಳೆಯದು. ದೇವರಿಗೆ ಯಾವ ಪುಷ್ಪ ಶುಭವಾಗಿರುತ್ತದೆಯೋ ಅಂತ ಪುಷ್ಪಗಳಿಂದಲೇ ಪೂಜಿಸುವುದು ಒಳ್ಳೆಯದು. ಈ ವಿಚಾರ ಎಲ್ಲರಿಗೂ ಗೊತ್ತಿರುವುದಿಲ್ಲ ಆದ್ದರಿಂದ ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ