ಕೆಲವರಿಗೆ ಇದ್ದಕ್ಕಿದ್ದ ಹಾಗೆ ಕೈಕಾಲುಗಳಲ್ಲಿ ಜೋಮು ಬರುತ್ತದೆ ಸ್ವಲ್ಪ ಹೊತ್ತು ಕುಳಿತುಕೊಂಡರು ಕೈಕಾಲುಗಳು ಮರಗಟ್ಟಿದ ಅನುಭವ ಆಗುತ್ತದೆ ಅಥವಾ ಬರೆಯುವಾಗ ಇನ್ಯಾವುದಾದರೂ ಕೆಲಸವನ್ನು ಮಾಡುವಾಗ ಕೈ ಕಾಲುಗಳು ಜೋಮು ಬಂದಹಾಗೆ ಅನುಭವ ಆಗುತ್ತದೆ. ಇದು ಸಾಮಾನ್ಯವಾಗಿ ಕಂಡುಬರುವಂಥದು ಡಯಾಬಿಟಿಸ್ ಇರುವವರಿಗೆ. ಅದಕ್ಕೆ ಸಂಬಂಧಿಸಿದ ಹಾಗೆ ನೀವು ತಪಾಸಣೆಯನ್ನು ಮಾಡಿಕೊಂಡು ಡಯಾಬಿಟಿಸ್ ಗೆ ಔಷಧಿಯನ್ನು ತೆಗೆದುಕೊಂಡರೆ ಇದು ಸರಿ ಹೋಗುತ್ತದೆ. ಡಯಾಬಿಟಿಸ್ ಇಲ್ಲದವರಿಗೂ ಕೂಡ ಕೆಲವೊಂದು ಸಮಯದಲ್ಲಿ ಈ ಜೋಮು ಕಾಣಿಸಿಕೊಳ್ಳುತ್ತದೆ ಅದಕ್ಕೆ ಕಾರಣ ಏನು ಅದನ್ನು ಯಾವ ರೀತಿಯಾಗಿ ಸುಲಭವಾಗಿ ಸರಿಪಡಿಸಿಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಕೈಕಾಲುಗಳಲ್ಲಿ ಜೋಮು ಬರುವುದಕ್ಕೆ ಕಾರಣ ನರಗಳಲ್ಲಿ ಕಾಣಿಸಿಕೊಳ್ಳುವ ಬಲಹಿನತೆ. ಅಥವಾ ರಕ್ತ ಸಂಚಾರದಲ್ಲಿ ವ್ಯತ್ಯಯ ಆಗಿರುವಂಥದ್ದು. ಹೃದಯ ಪಂಪ್ ಮಾಡಿದಾಗ ದೇಹದ ದೊಡ್ಡ ದೊಡ್ಡ ಆರ್ಗೆನ್ ಗಳಿಗೆ ರಕ್ತ ಸಂಚಾರ ಆಗುತ್ತದೆ. ದೂರದ ಅಂಗಗಳಿಗೆ ಅಂದರೆ ಕಾಲಿನ ತುದಿ ಕೈ ಬೆರಳಿನ ತುದಿ ಇವುಗಳು ದೂರ ಇರುವುದರಿಂದ ಇವುಗಳಿಗೆ ರಕ್ತಸಂಚಾರ ಸರಿಯಾಗಿ ಆಗುವುದಿಲ್ಲ. ಆಗ ರಕ್ತ ಸಂಚಾರ ಆಗದಿದ್ದಾಗ ಕೈ ಬೆರಳುಗಳು ಕಾಲು ಬೆರಳುಗಳ ತುದಿಯಲ್ಲಿ ಜೋಮು ಬರುವುದು ಸಹಜ ಇದಕ್ಕೆ ಯಾವುದೇ ರೀತಿಯಾದಂತಹ ಔಷಧಿಗಳ ಅವಶ್ಯಕತೆ ಇರುವುದಿಲ್ಲ.
ಮನೆಯಲ್ಲಿಯೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಕುರ್ಚಿಯ ಮೇಲೆ ಕುಳಿತುಕೊಂಡು ಒಂದು ಬಕೆಟ್ ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಸೈಂಧವ ಲವಣವನ್ನು ಹಾಕಿ ಕಾಲನ್ನು ಮೊಣಕಾಲವರೆಗೆ ಬಿಸಿ ನೀರಿನಲ್ಲಿ ಮುಳುಗಿಸಬೇಕು
ಜೊತೆಗೆ ಟೇಬಲ್ಲಿನ ಮೇಲೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ ಅದರಲ್ಲಿ ಉಪ್ಪನ್ನು ಹಾಕಿ ಕೈಯನ್ನು ಇಟ್ಟುಕೊಳ್ಳಬೇಕು. ಐದರಿಂದ ಹತ್ತು ನಿಮಿಷ ಈ ರೀತಿಯಾಗಿ ಕೈಕಾಲುಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಳ್ಳಬೇಕು ಇದನ್ನು ಕೇವಲ ಹತ್ತರಿಂದ ಹನ್ನೊಂದು ದಿವಸದ ತನಕ ಮಾಡಿದರೆ ಸಾಕಾಗುತ್ತದೆ. ಈ ರೀತಿಯಾಗಿ ಮಾಡುವುದರಿಂದ ಏನು ಲಾಭ ಉಂಟಾಗುತ್ತದೆ ಎಂದರೆ ಕೈಕಾಲುಗಳು ಬಿಸಿಯಾದಾಗ ಉಪ್ಪು ನೀರಿನಲ್ಲಿ ಕೈಕಾಲನ್ನು ಅದ್ದಿದಾಗ ಅಲ್ಲಿ ರಕ್ತಸಂಚಾರ ತನ್ನಷ್ಟಕ್ಕೆ ತಾನೇ ಹೆಚ್ಚಾಗುತ್ತದೆ ಒಂದು ಸಾರಿ ಸಂಚಾರ ಸರಿಯಾದಾಗ ಅದು ಹಾಗೆ ಮುಂದುವರೆಯುತ್ತದೆ. ಈ ರೀತಿಯಾಗಿ ಬಿಸಿನೀರಿನಲ್ಲಿ ಉಪ್ಪನ್ನ ಹಾಕುವುದರಿಂದ ಹಂತಹಂತವಾಗಿ ಜೋಮು ಹಿಡಿಯುವುದು ಕಡಿಮೆಯಾಗುತ್ತದೆ.
ಇದನ್ನು ಮಾಡಿಯೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ ಎಂದರೆ ಅಥವಾ ನಿಮಗೆ ಇದನ್ನು ಮಾಡುವುದಕ್ಕೆ ಸರಿ ಎನಿಸುವುದಿಲ್ಲ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದರೆ ನೀವು ನಿಮ್ಮ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ರಕ್ತ ಪ್ರಸಾದಕ್ಕೆ ಅಥವಾ ರಕ್ತ ಸಂಚಾರಕ್ಕೆ ಬೇಕಾದಂತಹ ಹಲವಾರು ಔಷಧಿಗಳು ದೊರೆಯುತ್ತವೆ ಉದಾಹರಣೆಗೆ ಮಂಜಿಷ್ಟ ಖದಿರ ಮುಂತಾದವುಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.
ಈ ರೀತಿಯಾಗಿ ದೇಹದಲ್ಲಿ ರಕ್ತ ಸಂಚಾರ ಕೈಕಾಲುಗಳಿಗೆ ಸರಿಯಾಗಿ ಆದಾಗ ಜೋಮು ಹಿಡಿಯುವುದು ಕಡಿಮೆಯಾಗುತ್ತದೆ ನಿಮಗೂ ಕೂಡ ಈ ಸಮಸ್ಯೆ ಕಾಣಿಸಿಕೊಂಡರೆ ನಾವು ಮೇಲೆ ತಿಳಿಸಿರುವ ಸುಲಭ ಮಾರ್ಗವನ್ನು ಅನುಸರಿಸುವ ಮೂಲಕ ಜೋಮು ಹಿಡಿಯುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.