ಹಣದ ದೇವತೆಯಾಗಿರುವ ಕುಬೇರನ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ದೇವತೆಗಳ ತಿಜೋರಿ ಭಂಡಾರವೇ ಕುಬೇರನ ಬಳಿಯಲ್ಲಿರುತ್ತದೆ ಎಂಬುದಾಗಿ ಹಿಂದೂ ಗ್ರಂಥಗಳಲ್ಲಿ ನಾವು ಕಾಣಬಹುದಾಗಿದ್ದು ಲಕ್ಷ್ಮೀ ಅದೃಷ್ಟ ದೇವತೆ ಎಂದೆನಿಸಿದ್ದು ಧನ ಕನಕಕ್ಕೆ ಪ್ರಮುಖ ಅಧಿಪತಿ ಕುಬೇರ ಎಂಬ ಮಾತಿದೆ. ಶಿವಗಣಗಳೊಂದಿಗೆ ಯಕ್ಷರು ಉತ್ತಮ ಬಾಂಧವ್ಯವವನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಯಕ್ಷ ಅಧಿಪತಿ ಕುಬೇರನು ಶಿವನಿಗೆ ಹೆಚ್ಚು ಆಪ್ತನಾಗಿದ್ದಾನೆ.
ಶಿವಗಣಗಳು ಯಕ್ಷ ದೇವತೆಗಳ ಬಾಹ್ಯ ಸೌಂದರ್ಯಕ್ಕೆ ಗಮನ ಕೊಡದೇ ಅವರನ್ನು ಗೌರವಿಸುವುದು ಇದಕ್ಕೆ ಕಾರಣವಾಗಿದೆ. ಶಿವನನ್ನು ಆರಾಧಿಸಿದರೆ ಕುಬೇರನು ಸುಲಭವಾಗಿ ಒಲಿದು ಬಿಡುತ್ತಾನೆ ಎಂಬ ಮಾತಿದೆ. ಸಂಪತ್ತಿನ ದೇವತೆಯಾದ ಕುಬೇರನ ಅನುಗ್ರಹ ನುರಾಹದಿನೇಳು ವರ್ಷಗಳ ನಂತರ ಈ ಕೆಲವು ರಾಶಿಗಳಿಗೆ ಲಭಿಸಲಿದೆ. ಆ ರಾಶಿಗಳು ಯಾವುವು? ಮತ್ತು ಆ ರಾಶಿಯಲ್ಲಿ ಜನಿಸಿದ ಜನರಿಗೆ ಏನೆಲ್ಲಾ ಅದೃಷ್ಟ ಲಭಿಸಲಿದೆ ಎನ್ನುವುದನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.
ನುರಾಹದಿನೆಳು ವರ್ಷಗಳ ನಂತರ ಕುಬೇರನ ಅನುಗ್ರಹ ಪಡೆಯುವ ಈ ನಾಲ್ಕು ರಾಶಿಯ ಜನರು ಬಹಳ ಅದೃಷ್ಟವಂತರು. ಯಾವುದೇ ಕಷ್ಟ ಬಂದರೂ ಸಹ ಅದನ್ನು ಧೈರ್ಯದಿಂದ ಎದುರಿಸುತ್ತಾರೆ. ಸದಾಕಾಲ ಈ ರಾಶಿಗಳ ಜನರಿಗೆ ಕುಬೇರನ ಅನುಗ್ರಹ ಇರುವುದರಿಂದ ಇವರು ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಯಾರಿಂದಲೂ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳದೆ ತಮ್ಮದೇ ಸ್ವ ಪ್ರಯತ್ನದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಇರದೇ ತಾವೇ ತಮ್ಮ ಕೆಲಸವನ್ನು ಮಾಡಿ ಮುಗಿಸಿ ತಮ್ಮ ಪ್ರತಿಯೊಂದು ಕೆಲಸದಲ್ಲಿ ಕೂಡಾ ಜಯವನ್ನು ಸಾಧಿಸುತ್ತಾರೆ.
ಅಷ್ಟೇ ಅಲ್ಲದೆ ಕುಬೇರ ದೇವರ ಆಶೀರ್ವಾದ ಅನುಗ್ರಹ ಇರುವ ಕಾರಣ ಎಲ್ಲಾ ದೃಷ್ಟಿ ದೋಷಗಳು ದೂರವಾಗುವುದು. ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತ ಸಮಯ ಆಗಿರುತ್ತದೆ. ಅಷ್ಟೇ ಅಲ್ಲದೆ ಕುಬೇರನ ಅನುಗ್ರಹದಿಂದಾಗಿ ಅದೃಷ್ಟ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಗಳಿಸುತ್ತಾರೆ.
ಕುಬೇರ ದೇವರ ಅನುಗ್ರಹ ಇರುವುದರಿಂದ ಹೊಸ ಉದ್ಯಮವನ್ನು ಆರಂಭ ಮಾಡಲು ಇದು ಒಳ್ಳೆಯ ಸಮಯ ಆಗಿರುತ್ತದೆ. ಈ ನಾಲ್ಕು ರಾಶಿಯಲ್ಲಿ ಜನಿಸಿದ ಜನರಿಗೆ ಏನೇ ಕಷ್ಟಗಳು ಬಂದರೂ ಸಹ ಕುಬೇರ ದೇವರ ಸ್ಮರಣೆ ಮಾಡುವುದರಿಂದ ಎಲ್ಲಾ ಕಷ್ಟಗಳೂ ದೂರ ಆಗುತ್ತವೆ. ಸಮಸ್ಯೆಗಳು ಪರಿಹಾರ ಆಗುತ್ತವೆ. ನಿಮಗೆ ತೊಂದರೆ ಕೊಡುವ ಜನರನ್ನು ಯಾವುದೇ ಕಾರಣಕ್ಕೂ ನಿಮ್ಮ ಜೊತೆಗೆ ಸೇರಿಸಿಕೊಳ್ಳಬೇಡಿ ಮತ್ತು ಅವರ ಸಹವಾಸವನ್ನು ಬಿಡಬೇಕು. ಪ್ರಯಾಣ ಮಾಡುವಾಗ ಬಹಳಷ್ಟು ಜಾಗೃತರಾಗಿ ಇರಬೇಕು. ಸಂಗಾತಿಯ ಮನಸ್ಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಇದರಿಂದ ಸಂಸಾರದಲ್ಲಿ ಜಗಳ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ.
ನಿಮ್ಮ ಸಂಗಾತಿಯು ಏನೇ ಕಷ್ಟ ಬಂದರೂ ಸಹ ನಿಮ್ಮ ಜೊತೆಯಲ್ಲಿ ಇರುತ್ತಾರೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದ್ದು ಉದ್ಯೋಗ ಸಿಕ್ಕ ನಂತರ ಕುಬೇರ ದೇವರಿಗೆ ಆರಾಧನೆ ಮಾಡಿ ದೀಪ ಹಚ್ಚಿ ನಮಸ್ಕರಿಸಿ ಆರಾಧಿಸಬೇಕು. ಇದರಿಂದ ನಿಮ್ಮ ಇನ್ನಷ್ಟು ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಕುಬೇರ ದೇವರ ಆಶೀರ್ವಾದ , ಅನುಗ್ರಹದಿಂದ ಇಷ್ಟೆಲ್ಲಾ ಲಾಭ ದೊರೆಯಲಿರುವ ಆ ಅದೃಷ್ಟವಂತ ನಾಲ್ಕು ರಾಶಿಗಳು ಎಂದರೆ, ಸಿಂಹ ರಾಶಿ , ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿಗಳು ಆಗಿವೆ.