ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು ೧೨ ಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಂಗಡಣೆಗಳೇ ರಾಶಿಗಳು. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಪ್ರಧಾನ ಪಾತ್ರವನ್ನು ವಹಿಸಿದ್ದು ರಾಶಿ ಲೆಕ್ಕಾಚಾರವನ್ನು ತಾವು ಹುಟ್ಟಿದ ದಿನ, ಸಮಯ ಮತ್ತು ಗಳಿಗೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ತಮ್ಮ ತಮ್ಮ ರಾಶಿಯ ಅನುಗುಣವಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಗುಣ, ಹಾಗೂ ಉನ್ನತಿ, ಭವಿಷ್ಯ, ಉದ್ಯೋಗ, ಸ್ವಭಾವ ಮೊದಲಾದ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಪಂಚಾಗದ ಪ್ರಕಾರ ಪ್ರತಿ ವ್ಯಕ್ತಿಯ ರಾಶಿಯೂ ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಬದಲಾವಣೆ ಆಗುತದೆ. ಹನ್ನೆರಡು ರಾಶಿಗಳಲ್ಲಿ ಒಂದಾದ ಕನ್ಯಾ ರಾಶಿಯ ಬಗ್ಗೆ ಪಂಡಿತ್ ಮಂಜುನಾಥ್ ಭಟ್ ಅವರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಅದನ್ನು ನಮ್ಮ ಈ ಲೇಖನದಲ್ಲಿ ನೋಡೋಣ ಬನ್ನಿ.
ಕನ್ಯಾ ರಾಶಿಯವರಿಗೆ ಹಿಂದಿನ ವರ್ಷಕ್ಕಿಂತ ಈ ವರ್ಷ ಬಹಳ ಲಾಭದಾಯಕವಾಗಿದೆ. ಗುರು ಮತ್ತು ಶನಿ ಕನ್ಯಾ ರಾಶಿಯ 6 ನೇ ಮನೆಯಲ್ಲಿದ್ದು, ರಾಹು ಮತ್ತು ಕೇತು ತಮ್ಮ ಸ್ಥಾನ ಪಲ್ಲಟ ಆಗುವುದು.ಇದರಿಂದ ಕನ್ಯಾ ರಾಶಿ ಕೇತುವಿನ ಆಗಮನದಿಂದ ಇಷ್ಟು ದಿನದ ಒತ್ತಡ ಜೀವನಕ್ಕೆ ಮುಕ್ತಿ ಸಿಗುವ ಸಾಧ್ಯತೆ ಜಾಸ್ತಿ. ಇನ್ನೂ ಕರ್ಮದಿಪತಿ ಶನಿಯು 24-4-2022ಕ್ಕೇ ಕುಂಭ ರಾಶಿಗೆ ತನ್ನ ಪತ ಸಂಚಲನ ಮಾಡುವುದರಿಂದ 3 ತಿಂಗಳಲ್ಲಿ ಕನ್ಯಾ ರಾಶಿ ಮುಟ್ಟಿದೆಲ್ಲವು ಚಿನ್ನ ಅನ್ನುವ ಹಾಗೆ ಅತ್ಯಂತ ಶುಭ ಫಲ.
ಇನ್ನು ವಿದ್ಯಾರ್ಥಿಗಳು ಏಕಾಗ್ರತಯಿಂದ ಓದಿ ತಮ್ಮ ಮುಂದಿನ ಗುರಿ ಮುಟ್ಟಲು ಒಳ್ಳೆ ಅವಕಾಶ. ಸರಕಾರಿ ನೌಕರರ ತಮ್ಮ ಬಡ್ತಿ ಸಿಗುವ ಸಾಧ್ಯತೆ , ತುಂಬ ದಿನದಿಂದ ಸರಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿ ಕೆಲಸದ ನೀರೀಕ್ಷೆ ಫಲ ನೀಡುವ ಸಾಧ್ಯತಗಳಿವೆ. ಕೋರ್ಟು ಕಚೇರಿ ವ್ಯವಹಾರ, ಹಣಕಾಸಿನ ವ್ಯವಹಾರ ಕೂಡ ಕನ್ಯಾ ರಾಶಿ ಅವರಿಗೆ ಸುಲಲಿತವಾಗಿ ಬಗೆಹರಿಯಲಿದೆ.
ಮುಖ್ಯವಾಗಿ ಫೈನಾನ್ಸಿಯಲ್ ವ್ಯವಹಾರ ಮಾಡುವರು ಹಣ ಕೊಟ್ಟು ತಗೊಳ್ಳುವವರ ಜೊತೆ ಸ್ವಲ್ಪ ಹುಷಾರಾಗಿ ಇರ್ಬೇಕು ಇಲ್ಲವಾದಲ್ಲಿ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಇನ್ನು ಸ್ನೇಹಿತರ ಮದ್ಯೆ ಹಣಕಾಸಿನ ವ್ಯವಹಾರ ಅಷ್ಟೊಂದು ಸಮಂಜಸ ಅಲ್ಲ ಅವರಿಗೆ ಮಾತು ಕೊಡುವ ಮುನ್ನ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸಾಮಾನ್ಯ ಶೀತ ಕಫ ಸೊಂಟನೋವು ಸಾಧ್ಯತೆ ಇದ್ದು ಮತ್ಯಾವ ತೊಂದರೆ ಇರುವುದಿಲ್ಲ.
ಇನ್ನೂ ಕೇತು ಆಗಮನದಿಂದ ತಂದೆ ತಾಯಿ ಕಡೆಯಿಂದ ಧನಾಗಮನ, ಆಸ್ತಿಯಲಿ ಪಾಲು.ಇನ್ನೂ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಸಾಧನೆ ಮಾಡಲು ಒಂದು ಸುವರ್ಣ ಅವಕಾಶ.. ಸಾಂಸಾರಿಕ ಜೀವನ ಸುಗಮವಾಗಿದ್ದು ಸಂತಾನಯೋಗವಿದೆ.. ಇನ್ನೂ ಹೆಂಗಳೆಯರು ಚಿನ್ನ ಬೆಳ್ಳಿ ಕೊಳ್ಳಲು ಒಳ್ಳೆ ಕಾಲಾವಕಾಶ.
ಈ ವರ್ಷ ಕನ್ಯಾ ರಾಶಿ ಅವ್ರು ಯಾರನ್ನೇ ಆಗಲಿ ಅತಿಯಾಗಿ ನಂಬಿ ಕೈ ಸುಟ್ಟುಕೊಳ್ಳಬೇಡಿ .. ಮನುಷ್ಯ ಕೆಟ್ಟಮೇಲೆ ಬುದ್ದಿ ಬಂತು ಅನ್ನೋಹಾಗೆ ಯಾರನ್ನು ನಂಬಿ ವ್ಯವಹಾರ ಮಾಡುವ ಮುನ್ನ ಸಾವಿರ ಸಲ ಯೋಚಿಸಿ ಹೆಜ್ಜೆ ಇಡಿ. ದೂರ ಪ್ರಯಾಣ ಜಾಗ್ರತೆ ಅವಶ್ಯ. ಇನ್ನೂ ಕುಜ ಅಗ್ನಿ ಅವಗಡ್ಡಿ ಆದಷ್ಟು ಹುಷಾರು ಆಗಿ ಇರಿ.
ನಿಮ್ಮ ಮನೆಯಲ್ಲಿ ನೀವು ಆದಷ್ಟು ಲಕ್ಷ್ಮೀ ನಾರಾಯಣ ಸ್ತೋತ್ರ ಹೇಳಿಕೊಂಡು ವಿಗೃಹ ಇಲ್ಲದಿದ್ದರೆ ಫೋಟೋಗೆ ದಿನ ಪೂಜೆ ಮಾಡಿದಲ್ಲಿ ಅತ್ಯಂತ ಶುಭ. ಹಾಗೆಯೇ ಪ್ರತಿ ಶುಕ್ರವಾರ ಅಥವಾ ಗುರುವಾರ ನಿಮ್ಮ ಮನೆಯ ಹತ್ತಿರ ಹತ್ತಿ ಮರ ಇದ್ದಲ್ಲಿ ಪ್ರದಕ್ಷಿಣೆ ಹಾಕಿದರೆ ನಿಮ್ಮ ದೋಷ ಆದಷ್ಟು ಪರಿಹಾರವಾಗಿ ಎಲ್ಲವೂ ಶುಭವಾಗುತ್ತದೆ.