WhatsApp Group Join Now
Telegram Group Join Now

ನಮ್ಮ ಬಳಿ ಒಮ್ಮೊಮ್ಮೆ ಹಣ ಇರುವುದಿಲ್ಲ ಇದರಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹಣದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಆ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕೆಲವರು ಎಷ್ಟು ಹಣ ಗಳಿಸಿದರು ಅವರ ಹತ್ತಿರ ಹಣ ಇರುವುದಿಲ್ಲ ಅಲ್ಲದೆ ಹಣದ ಕೊರತೆ ಅನೇಕ ತೊಂದರೆಗೆ ಒಳಗಾಗುವಂತೆ ಮಾಡುತ್ತದೆ. ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಾವು ಪ್ರಕೃತಿಯಿಂದ ಬಂದಿದ್ದೇವೆ, ಭೂಮಿಯನ್ನು ದೇವರು ಎಂದು ಭಾವಿಸುವ ಸಂಸ್ಕ್ರತಿ ನಮ್ಮದಾಗಿದೆ. ಮೊದಲಿನ ಕಾಲದಿಂದಲೂ ಮಣ್ಣನ್ನು ನಂಬಿ ಜೀವನ ನಡೆಸುತ್ತೇವೆ. ಮಣ್ಣಿನಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ.

ಜ್ಯೋತಿಷ್ಯಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ನಮಗೆ ಒಳ್ಳೆಯದಾಗುತ್ತದೆ ಏಕೆಂದರೆ ನಾವು ಮೊದಲಿನಿಂದಲೂ ಮಣ್ಣನ್ನು ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ ಆದ್ದರಿಂದ ಮಣ್ಣಿನ ಮಡಕೆಗಳನ್ನು ಸಕಾರಾತ್ಮಕ ಸಂಕೇತ ಎಂದು ತಿಳಿದಿದ್ದೇವೆ. ಗಡಿಗೆ ಅಥವಾ ಮಣ್ಣಿನ ಮಡಕೆಯಲ್ಲಿ ನೀರನ್ನು ತುಂಬಿ ಮನೆಯ ಈಶಾನ್ಯ ಭಾಗದಲ್ಲಿ ಇಡಬೇಕು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ತೊಲಗಿಹೋಗಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಬುಧ ಮತ್ತು ಚಂದ್ರನ ಗ್ರಹಸ್ಥಾನ ಚಲನೆಯ ಪರಿಣಾಮದಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ.

ಕುಟುಂಬದ ಎಲ್ಲರಿಗೂ ಅದೃಷ್ಟ, ಸದವಕಾಶ, ಯಶಸ್ಸು ಸಿಗುವಂತೆ ಮಾಡುತ್ತದೆ ಅಲ್ಲದೆ ದುಗುಡ ಹಾಗೂ ಮಾನಸಿಕ ತೊಂದರೆಯನ್ನು ತೆಗೆದುಹಾಕುತ್ತದೆ, ಒತ್ತಡದಿಂದ ಹೊರಹಾಕುತ್ತದೆ. ಗಡಿಗೆಯಲ್ಲಿ ನೀರನ್ನು ತಂದು ಮನೆ ಸಮೀಪದಲ್ಲಿರುವ ಯಾವುದಾದರೂ ಗಿಡಕ್ಕೆ ಹಾಕಿ ಇದರಿಂದ ಒಳ್ಳೆಯದಾಗುತ್ತದೆ. ಇನ್ನು ಎಲ್ಲರಿಗೂ ತಿಳಿದಂತೆ ಗಡಿಗೆಯ ನೀರು ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಪೂರ್ವಜರು ಮಣ್ಣಿನ ಲೋಟದಲ್ಲಿ ಚಹಾ, ಮಜ್ಜಿಗೆಯನ್ನು ಕುಡಿಯುತ್ತಿದ್ದರು.

ನಮ್ಮ ರಾಶಿಯಲ್ಲಿ ಮಂಗಳ ಗ್ರಹದ ಸ್ಥಾನದಿಂದ ತೊಂದರೆ ಉಂಟಾಗುತ್ತಿದ್ದರೆ ಮಣ್ಣಿನ ಲೋಟದಲ್ಲಿ ನೀರನ್ನು ತುಂಬಿ ಪ್ರತಿ ಶನಿವಾರದ ಮಧ್ಯಾಹ್ನ ಒಂದು ಮರದ ಕೆಳಗೆ ಇಟ್ಟರೆ ಯಾವುದೆ ರೀತಿಯ ಶನಿ ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ. ನಾವು ಪ್ರಕೃತಿಯನ್ನು ಆರಾಧಿಸುತ್ತೇವೆ ಪ್ರತಿಯೊಂದು ಜೀವ ಜಂತುಗಳ ಅವಶ್ಯಕತೆ ನಮಗಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಮಣ್ಣಿನ ಮಡಕೆ ಅಥವಾ ಮಣ್ಣಿನ ಲೋಟದಲ್ಲಿ ನೀರನ್ನು ತುಂಬಿಸಿಟ್ಟರೆ ವ್ಯಾಪಾರದಲ್ಲಿ ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ.

ಮಣ್ಣಿನ ವಿಗ್ರಹದಿಂದ ಸಾಕಷ್ಟು ಪ್ರಯೋಜನವಿದೆ. ಮನೆಯಲ್ಲಿ ಮಣ್ಣಿನ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ತೊಲಗಿ ಭದ್ರ ಹಣಕಾಸು ವ್ಯವಸ್ಥೆ ಉಂಟಾಗುತ್ತದೆ. ಮನೆಯಲ್ಲಿ ಮಣ್ಣಿನ ಅಲಂಕಾರಿಕ ಪ್ರಾಣಿ, ಪಕ್ಷಿಯ ಗೊಂಬೆಯನ್ನು ತಂದು ಮನೆಯ ಆಗ್ನೇಯ ದಿಕ್ಕಿಗೆ ಇಟ್ಟರೆ ಅದೃಷ್ಟವನ್ನು ಆಹ್ವಾನಿಸಿದಂತೆ ಆಗುತ್ತದೆ. ನಮ್ಮ ಹಿಂದೂ ಧರ್ಮದ ಸಂಪ್ರದಾಯದಲ್ಲಿ ಮಣ್ಣಿನ ಹಣತೆಗಳಿಗೆ ಮಹತ್ವವಿದೆ. ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಮಣ್ಣಿನ ಹಣತೆಯಲ್ಲಿ ತುಳಸಿ ಗಿಡದ ಹತ್ತಿರ ಹಾಗೂ ಪೂಜಾ ಮಂದಿರದಲ್ಲಿ ದೀಪವನ್ನು ಹಚ್ಚುವುದರಿಂದ ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ, ಸುಂದರ ದಾಂಪತ್ಯ ಇರುತ್ತದೆ. ಶನಿವಾರ ಅರಳಿ ಮರದ ಕೆಳಗೆ ಸಂತಾನ ಭಾಗ್ಯ, ಹಣಕ್ಕಾಗಿ, ಉದ್ಯೋಗದಲ್ಲಿ ಬಡ್ತಿಗಾಗಿ, ನಾಲ್ಕು ದಿಕ್ಕುಗಳಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ. ಪ್ರತಿದಿನ ಬೆಳಗ್ಗೆ ಶ್ರೀಕೃಷ್ಣನಿಗೆ ಮಣ್ಣಿನ ಹಣತೆಯಲ್ಲಿ ದೀಪವನ್ನು ಹಚ್ಚಿಟ್ಟರೆ ಮನೆಗೆ ಒಳ್ಳೆಯದಾಗುತ್ತದೆ. ಹೀಗೆ ಮಣ್ಣಿನ ಗಡಿಗೆ, ಮಣ್ಣಿನ ಲೋಟ, ಮಣ್ಣಿನ ಹಣತೆಗಳಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಮಾಹಿತಿಯನ್ನು ನೀವು ಅನುಸರಿಸಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: