WhatsApp Group Join Now
Telegram Group Join Now

ನಲವತ್ತಾರು ವರ್ಷಗಳ ಬದುಕಿನಲ್ಲಿ ಪುನೀತ್‌ ಸುಮಾರು ಮೂವತ್ತೆರಡು ವರ್ಷಗಳನ್ನು ನಟಿಸುತ್ತಲೇ ಕಳೆದಿದ್ದಾರೆ ಒಂದನೇ ವರ್ಷದಿಂದ ಹದಿನಾಲ್ಕು ವರ್ಷದವರೆಗೆ ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸುವಷ್ಟರ ಮಟ್ಟಿಗೆ ಬೆಳೆದ ಪುನೀತ್‌ ಇಪ್ಪತ್ತೇಳುವಯಸ್ಸಿನಲ್ಲಿ ನಾಯಕನಾಗಿ ಮರು ಪ್ರವೇಶವನ್ನು ಪಡೆದರು. ಅಲ್ಲಿಂದ ಹತ್ತೊಂಬತ್ತು ವರ್ಷಗಳ ಕಾಲ ಅವರು ಕನ್ನಡ ನಾಡಿನ ಕಣ್ಮಣಿಯಾಗಿ ಬೆಳೆದ ರೀತಿಯೇ ಅದ್ಭುತ. ವರನಟ ಡಾ. ರಾಜ್‌ಕುಮಾರ್‌ ಅವರ ಮಗನಾಗಿ ಅವರು ಪ್ರತಿಪಾದಿಸಿದ ಮೌಲ್ಯಗಳನ್ನೇ ಸಿನಿಮಾಗಳಲ್ಲಿ ಮತ್ತು ಬದುಕಿನಲ್ಲಿ ಪ್ರತಿನಿಧಿಸಿದ್ದು ಅಪ್ಪುವಿನ ವಿಶೇಷ

ಪುನೀತ್‌ ಎಂದ ಕೂಡಲೇ ಸಿನಿಮಾ ಪಾತ್ರಗಳಷ್ಟೇ ನಿಜ ಬದುಕಿನ ವಿನಮ್ರತೆಗಳೂ ನೆನಪಾಗುತ್ತವೆ ಪುಟ್ಟ ಮಕ್ಕಳ ಎದುರೂ ಅತ್ಯಂತ ವಿಧೇಯತೆಯಿಂದ ನಡೆದುಕೊಳ್ಳುವ ದೊಡ್ಡವರ ಎದುರಂತೆ ಕೈಕಟ್ಟಿ ತಲೆ ಬಾಗಿ ನಿಲ್ಲುವಷ್ಟು ವಿನಯವನ್ನು ನಟ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಸಹಜವಾಗಿ ಹೊಂದಿದ್ದರು. ನಾವು ಈ ಲೇಖನದ ಮೂಲಕ ಪುನೀತ್ ಅವರಿಗೆ ತಂದೆಯ ಬಗ್ಗೆ ಇರುವ ಅಭಿಮಾನವನ್ನು ತಿಳಿದುಕೊಳ್ಳೋಣ.

ಬದುಕಿನ ಉದ್ದಕ್ಕೂ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಯಿಂದ ಅಪ್ಪಿಕೊಂಡೇ ಇದ್ದ ಪುನೀತ್‌ ರಾಜ್‌ಕುಮಾರ್‌ ಕಾಣದಂತೆ ಮಾಯವಾಗಿದ್ದಾರೆ ದೊಡ್ಡ ಸ್ಟಾರ್‌ ಎಂಬ ಯಾವ ಅಹಂ ಕೂಡ ಇಲ್ಲದ ಎಲ್ಲರನ್ನೂ ಗೌರವದಿಂದ ಕಾಣುವ ಅತ್ಯಂತ ವಿನೀತವಾದ ಪುನೀತವಾದ ಜೀವವೊಂದು ಅಸ್ತಂಗತವಾಗಿದೆ.ಪುನೀತ್ ಅವರು ರಾಜಕುಮಾರ್ ಅವರ ಬಗ್ಗೆ ಹೀಗೆ ಹೇಳುತ್ತಾರೆ ಎಲ್ಲರೂ ರಾಜಕುಮಾರ್ ಅವರ ಅಭಿಮಾನಿ ಆಗಲು ಕಾರಣ ಅವರ ವ್ಯಕ್ತಿತ್ವ ಹಾಗೆಯೇ ಈ ಮಾತನ್ನು ಪುನೀತ್ ಅವರು ರಾಜಕುಮಾರ್ ಅವರ ಹದಿನೈದು ವರ್ಷದ ಕಾರ್ಯದ ಸಮಯದಲ್ಲಿ ಹೇಳಿದರು

ಅವರು ತೋರಿಸಿದ ಪ್ರೀತಿ ಬಗ್ಗೆ ಹಾಗೆಯೇ ಜನಗಳ ಮೇಲೆ ಅವರ ಪ್ರೀತಿಯ ಬಗ್ಗೆ ಹೆಮ್ಮೆ ಆಗುತ್ತದೆ ಎಂದು ಹೇಳಿದ್ದರು ರಾಜಕುಮಾರ್ ಅವರು ಮಕ್ಕಳಿಗೆ ಕುಟುಂಬದಲ್ಲಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ತುಂಬಾ ಜನರ ಪ್ರೀತಿಗಳಿಸಿದ್ದಾರೆ ಎಂದು ಪುನೀತ್ ಅವರು ತಿಳಿದಿದ್ದರು ಅವರ ಮಗನಾಗಿ ಹುಟ್ಟಿದ್ದು ಹೆಮ್ಮೆ ಪಡುತ್ತಾರೆ ಹೀಗೆ ಅವರ ತಂದೆಯ ಬಗ್ಗೆ ಅಭಿಮಾನವಿತ್ತು .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: