ಆತ್ಮೀಯ ಓದುಗರೇ ಇಂದಿನ ದಿನಗಳಲ್ಲಿ ಬರಿ ಸ್ವಾರ್ಥ ದ್ವೇಷ, ಅಸೂಯೆ ತುಂಬಿರುವ ಈ ಸಮಾಜದಲ್ಲಿ ತನುಗೂ ತಮ್ಮ ಮನೆಯವರಿಗೂ ಇರಲಿ ಅನ್ನೋ ಕಾಲದಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಊರಿನ ಜನರ ಒಳಿತಿಗಾಗಿ ಬರಿ ಒಬ್ಬನೇ ಯಾರ ಸಹಾಯ ಪಡೆಯದೇ ತನ್ನೂರಿಗೆ ರಸ್ತೆ ನಿರ್ಮಿಸಿದ ಈ ಛಲಗಾರ ವ್ಯಕ್ತಿ ನಿಜಕ್ಕೂ ಯಾರು ಅನ್ನೋದನ್ನ ಈ ಲೇಖನ ಮೂಲಕ ತಿಳಿಯೋಣ.
ಇದು ಯಾವುದೊ ಸಿನಿಮಾ ಸ್ಟೋರಿ ಅಂದುಕೊಳ್ಳಬೇಡಿ ಇದು ನಿಜಕ್ಕೂ ನಿಜ ಜೀವನದಲ್ಲಿ ನಡೆದಂತ ರಿಯಲ್ ಸ್ಟೋರಿ ಆಗಿದೆ. ಹೌದು ಅದೊಂದು ಪುಟ್ಟ ಹಳ್ಳಿ ಆ ಹಳ್ಳಿಯ ಸುತ್ತಲೂ ದಟ್ಟ ಅರಣ್ಯ ಈ ಊರಿಗೆ ಹೋಗಬೇಕು ಅಂದ್ರೆ ಬೆಟ್ಟ ಗುಡ್ಡ ದಾಟಿಕೊಂಡು ಹೋಗಬೇಕು. ಸಮಯಕ್ಕೆ ಸರಿಯಾಗಿ ಮನೆಯಿಂದ ನಗರಕ್ಕೆ ನಗರದಿಂದ ಮನೆಗೆ ತಲುಪಲು ಸಾರಿಗೆ ಸಂಪರ್ಕ ಸರಿಯಿಲ್ಲದ ಕರಣ ಅದೆಷ್ಟೋ ಜನ ಆಸ್ಪತ್ರೆಗೆ ಹೋಗಲು ಆಗದೆ ಅಷ್ಟೇ ಅಲ್ಲ ಸಮಯಕ್ಕೆ ಸರಿಯಾಗಿ ಹೆರಿಗೆ ಆಸ್ಪತ್ರೆಗಳು ಸಿಗದ ಕಾರಣ ಆ ಊರಿನ ಜನ ಕಷ್ಟ ಪಡುತ್ತಿದ್ದರು.
ಯಾವುದು ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಹೇಳಿದರು ಸಹ ಯಾವುದು ಪ್ರಯೋಜನ ಕಂಡಿಲ್ಲ ಇದನೆಲ್ಲ ಅರಿತ ಈ ವ್ಯಕ್ತಿ ಅಂದರೆ ಕೀನ್ಯಾದ ಈ ಮಾಂಜಿ ನಿಕೋಲಸ್ ಮುಚಾಮಿ ಎನ್ನುವ ವ್ಯಕ್ತಿ ಸರ್ಕಾರಕ್ಕೆ ಮನವಿ ಮಾಡಿದರು ಇವರ ಬಗ್ಗೆ ಯಾವುದೇ ರೀತಿಯ ಅನುಕೂಲತೆಯನ್ನು ಮಾಡಿಕೊಡಲಿಲ್ಲ. ಇವರನ್ನು ನಂಬಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತ ಈ ವ್ಯಕ್ತಿ, ಯಾರ ಸಹಾಯವಿಲ್ಲದೆ ಬರಿ 6 ದಿನದಲ್ಲಿ ಒಂದು ಕಿ.ಮೀ ದೂರದ ರಸ್ತೆಯನ್ನು ನಿರ್ಮಿಸಿ ಊರಿನ ಜನರಿಗೆ ರಸ್ತೆ ಸಂಪರ್ಕ ಮಾಡಿ ಕೊಟ್ಟಿದ್ದಾನೆ.
ಇದರಿಂದ ತನ್ನ ಊರಿನಲ್ಲಿ ಇರುವಂತ ರೋಗಿಗಳು ಹಾಗೂ ವಯಸ್ಸಾದವರಿಗೆ ಈ ಆಸ್ಪತ್ರೆ ಮುಂತಾದ ಕೆಲಸ ಕಾರ್ಯಗಳಿಗೆ ಹೋಗಲು ಈ ರಸ್ತೆ ಉಪಯೋಗಕಾರಿಯಾಗಿದೆ. ನಿಜಕ್ಕೂ ಅದೇನೇ ಹೇಳಿ ಇವರ ಈ ಕಾರ್ಯ ವೈಖರಿಗೆ ನಿಜಕ್ಕೂ ಮೆಚ್ಚಲೇಬೇಕು. ಈ ವ್ಯಕ್ತಿ ಮಾಡಿದಂತ ಪರೋಪಕಾರಿ ಕೆಲಸಕ್ಕೆ ದೇಶದೆಲ್ಲೆಡೆ ಬಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ