WhatsApp Group Join Now
Telegram Group Join Now

ಮದುವೆಯಾಗುವುದು ಎಲ್ಲರ ಕನಸು. ತಮಗೆ ತಾವು ಬಯಸಿದಂತ ಸಂಗಾತಿ ಸಿಗಲಿ ಅವರು ಸಿಕ್ಕಾಗ ತನ್ನ ಬದುಕು ಹೇಗೆಲ್ಲ ಇರಬಹುದು ಎಂದು ಹಲವರು ಕನಸು ಕಾಣುತ್ತಾರೆ. ಸಾಮಾನ್ಯವಾಗಿ ವಿವಾಹವಾಗುವಾಗ ಹುಡುಗ ಹುಡುಗಿಯ ಜಾತಕ ತೋರಿಸಲಾಗುತ್ತದೆ. ಮದುವೆ ಎಂಬುದು ಜೀವನದ ಮಹತ್ವದ ಘಟ್ಟಗಳಲ್ಲಿ ಒಂದು. ಜೀವನದಲ್ಲಿ ಒಮ್ಮೆ ನಡೆಯುವ ಈ ಮದುವೆ ಅನೇಕರ ಬದುಕಿನಲ್ಲಿ ಎರಡು ಮೂರು ಬಾರಿ ಕೂಡ ಆಗುತ್ತದೆ ಈ ರೀತಿ ಬಹು ಮದುವೆ ಆಗಲು ಕಾರಣ ಅವರ ಜಾತಕ. ಜಾತಕದಲ್ಲಿನ ಈ ಅಂಶದ ಪರಿಣಾಮವಾಗಿ ಕೆಲವರಿಗೆ ಈ ರೀತಿ ಯೋಗ ಇರುತ್ತದೆ ಇನ್ನು ಜಾತಕದಲ್ಲಿನ ಯಾವ ಅಂಶವೂ ಈ ಎರಡನೇ ಮದುವೆಗೆ ಕಾರಣವಾಗುತ್ತದೆ ಎಂಬ ಅಂಶ ಇಲ್ಲಿದೆ.

ಹೊಂದಾಣಿಕೆ ಇದೆಯೇ ನೋಡಲಾಗುತ್ತದೆ. ಇದ್ದರೆ ಮಾತ್ರ ಮುಂದುವರೆಯಲಾಗುತ್ತದೆ. ಕೆಲವೊಮ್ಮೆ ಈ ಜಾತಕ ನೋಡಿದಾಗ ಅವರಿಬ್ಬರೂ ಮುಂದೆ ಸುಖವಾಗಿರಬಲ್ಲರೇ, ಮದುವೆ ವಿಷಯದಲ್ಲಿ ಜಾತಕ ಸರಿಯಿದೆಯೇ ಎಂದೆಲ್ಲ ಜ್ಯೋತಿಷಿಗಳಿಗೆ ತಿಳಿಯುತ್ತದೆ. ಅವರು ಹೊಂದಾಣಿಕೆ ಇಲ್ಲ ಎಂಬುದಷ್ಟೇ ಹೇಳುತ್ತಾರೆ. ಆದರೆ, ಅಪರೂಪದಲ್ಲಿ ಅವರು ಹೀಗೆ ಹೇಳಲು ಕಾರಣ ಕೆಲವರ ಜಾತಕದಲ್ಲಿ ಎರಡು ಮದುವೆಯ ಯೋಗ ಇರುವುದಾಗಿರಬಹುದು.

ಒಬ್ಬರಿಗೆ ಎಷ್ಟು ಮದುವೆಯಾಗುವ ಯೋಗವಿದೆ ಎಂಬುದನ್ನು ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿ ನೋಡಿ ತಿಳಿಯಬಹುದು. ಮದುವೆಯು ಇಬ್ಬರು ವ್ಯಕ್ತಿಗಳ ಒಕ್ಕೂಟವಾಗಿದೆ, ಆದರೆ ಮದುವೆಗೆ ಪರಿಪೂರ್ಣವಾದ ಜಾತಕ ಹೊಂದಾಣಿಕೆಯು ಈ ಒಕ್ಕೂಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಜಾತಕವು ಮಾನವ ಜೀವನದ ಎಲ್ಲಾ ಅಂಶಗಳನ್ನು ನಿರ್ವಹಿಸುತ್ತದೆ. ಮದುವೆ ಕುರಿತು ಕೂಡಾ ಜಾತಕ ನೋಡಿ ತಿಳಿಯಬಹುದು.

ಲಗ್ನದ ಅಧಿಪತಿ ಗ್ರಹ ಮತ್ತು ಸಪ್ತಮ ಸ್ಥಾನದ ಗ್ರಹ, ಈ ಎರಡೂ ಗ್ರಹಗಳು ಜೊತೆಯಾಗಿ ಮೊದಲನೇ ಅಥವಾ ಏಳನೇ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂಥವರಿಗೆ ಎರಡು ಮದುವೆ ಯೋಗವಿರುತ್ತದೆ. ಸಾಮಾನ್ಯವಾಗಿ ಎರಡು ಹೆಂಡತಿಯರು. ಉದಾಹರಣೆಗೆ ಲಗ್ನ ಸಿಂಹವಾದರೆ ಅದರ ಅಧಿಪತಿ ಗ್ರಹ ಸೂರ್ಯ. ಸಪ್ತಮದಲ್ಲಿ ಅಂದರೆ ಏಳನೇ ಮನೆಯಲ್ಲಿ ಕುಂಭ ರಾಶಿಯ ಅಧಿಪತಿ ಶನಿ ಸ್ಥಿತನಾಗಿದ್ದರೆ ಮತ್ತು ಈ ಎರಡೂ ಗ್ರಹಗಳು ಒಂದನೇ ಮನೆ ಇಲ್ಲವೇ ಏಳನೇ ಮನೆಯಲ್ಲಿದ್ದರೆ ಅಂಥವರಿಗೆ ಎರಡು ಮದುವೆ ಯೋಗವಿದೆ ಎನ್ನಲಾಗುತ್ತದೆ.

ಜಾತಕದ ಏಳನೇ ಮನೆಯ ಅಧಿಪತಿ ಗ್ರಹದ ಜೊತೆಗೆ ಮಂಗಳ ರಾಹು ಕೇತು ಶನಿ ಗ್ರಹಗಳು ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಂಥವರಿಗೆ ಒಂದು ಹೆಂಡತಿಯು ಮರಣ ಹೊಂದಿದ ಕಾರಣಕ್ಕೆ ಇನ್ನೊಂದು ಮದುವೆ ಆಗುತ್ತದೆ. 7ನೇ ಮನೆಯ ಅಧಿಪತಿಯು ದ್ವಿಸ್ವಭಾವ ರಾಶಿಗಳಾದ ಮಿಥುನ, ಕನ್ಯಾ, ಧನು ಅಥವಾ ಮೀನದೊಂದಿಗೆ ಇದ್ದರೆ ಅಂತಹ ಜಾತಕದವರಿಗೆ ಎರಡು ವಿವಾಹವಾಗುತ್ತದೆ.

ಲಗ್ನದ ಅಧಿಪತಿ ಗ್ರಹವು ಹನ್ನೆರಡನೇ ಮನೆಯಲ್ಲಿ ಮತ್ತು ದ್ವಿತೀಯ ಮನೆಯ ಅಧಿಪತಿ ಗ್ರಹ ಮಂಗಳ, ಶನಿ, ರಾಹು, ಕೇತು ಗ್ರಹಗಳು ಜೊತೆಗಿದ್ದು, ಸಪ್ತಮ ಸ್ಥಾನದಲ್ಲಿ ಪಾಪಗ್ರಹವಿದ್ದರೆ ಅಂತಹ ಜಾತಕದವರಿಗೆ ಎರಡು ಮದುವೆ ಯೋಗವಿರುತ್ತದೆ. ಇದಲ್ಲದೆ, 2ನೇ, 7ನೇ ಮತ್ತು 11ನೇ ಮನೆಯಲ್ಲಿ ದೋಷಪೂರಿತ ಗ್ರಹಗಳ ಸಾಮಾನ್ಯ ದೌರ್ಬಲ್ಯ ಮತ್ತು ಉಪಸ್ಥಿತಿಯು ಮರುಮದುವೆಯನ್ನು ಸೂಚಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: