ಇದೇ ಮಾರ್ಚ್ ತಿಂಗಳ 22ರಂದು ಯುಗಾದಿಯ ಹಬ್ಬ ಬರಲಿದೆ. ಅದರ ಆಚರಣೆಗಳು ಬಹಳ ವಿಶೇಷವಾಗಿ ಇರುತ್ತವೆ. ಸಡಗರ ಸಂಭ್ರಮದಿಂದ ಯುಗಾದಿಯನ್ನು ಆಚರಿಸುತ್ತೇವೆ. ಆದರೆ ಯುಗಾದಿಗು ಮುನ್ನ ಬರುವ ಅಮವಾಸ್ಯೆಯ ಬಗ್ಗೆ ನಿಮಗೆ ತಿಳಿದಿದೆಯೆ? ಅಮವಾಸ್ಯೆಯಿಂದ ಯಾವ ಯಾವ ರಾಶಿಗಳ ಭವಿಷ್ಯ ಹೇಗೆ ಬದಲಾಗಲಿದೆ ಎನ್ನುವುದನ್ನು ಮುಂದೆ ನೋಡೊಣ.
ಅಮವಾಸ್ಯೆ ಎಂದರೆ ಕತ್ತಲು ಎಂದು ನಾವೆಲ್ಲರು ಭಯಪಡುತ್ತೇವೆ. ಹಾಗೂ ಆ ದಿನ ಯಾವ ಒಳ್ಳೆಯ ಕೆಲಸಗಳನ್ನು ನಾವು ಮಾಡುವುದಿಲ್ಲ. ಆದರೆ ಅಮವಾಸ್ಯೆಯು ಲಕ್ಷ್ಮೀಗೆ ಪ್ರಿಯವಾದ ದಿನವಾಗಿದೆ. ಆ ದಿನ ಎಲ್ಲ ಕಡೆಯಲ್ಲಿಯೂ ಹೆಚ್ಚಾಗಿ ಲಕ್ಷ್ಮೀದೇವಿಯನ್ನು ಸಂಜೆಯ ಹೊತ್ತಿನಲ್ಲಿ ಪೂಜಿಸುವ ಪದ್ಧತಿಗಳು ನಡೆದುಕೊಂಡು ಬಂದಿವೆ. ಅಂತಹ ಅಮವಾಸ್ಯೆಯ ಪೂಜೆಯಿಂದಾಗಿ ಲಕ್ಷ್ಮೀಯು ಸ್ಥಿರವಾಗುತ್ತಾಳೆ ಎಂದು ಹೇಳುತ್ತಾರೆ. ಹಾಗಾದರೆ ಯುಗಾದಿಯ ಅಮವಾಸ್ಯೆಯ ವಿಶೇಷತೆಗಳೇನು ಹಾಗೆ ಆ ದಿನದ ನಂತರ ಯಾವ ರಾಶಿಗೆ ರಾಜ ಯೋಗವು ಬರುತ್ತದೆ ಎಂದು ತಿಳಿಯೋಣ.
ಇದೇ ಮಾರ್ಚ್ ತಿಂಗಳ 21ನೇ ತಾರೀಖಿನಂದು ಬರುತ್ತಿರುವ ಅಮವಾಸ್ಯೆಯು ಬಹಳ ಶಕ್ತಿಶಾಲಿಯಾದ ಅಮವಾಸ್ಯೆಯಾಗಿದ್ದು ಕೆಲವೊಂದು ರಾಶಿಗಳಿಗೆ ಭಾರಿ ಯೋಗಗಳನ್ನು ತರಲಿದೆ. ಇದರಿಂದಾಗಿ ಈ ರಾಶಿಗಳ ಗ್ರಹಚಾರವು ಬದಲಾಗಿ ಎಲ್ಲ ರೀತಿಯಿಂದಲೂ ಇವರು ಉನ್ನತಿಯನ್ನು ಹೊಂದಲಿದ್ದಾರೆ. ಈ ಅಮವಾಸ್ಯೆಯಲ್ಲಿ ಕೇವಲ ಲಕ್ಷ್ಮೀ ದೇವಿಯ ಅನುಗ್ರಹವಲ್ಲದೆ ಶಿವನ ಅನುಗ್ರಹವು ಸಹ ಈ ರಾಶಿಗಳಲ್ಲಿ ಜನಿಸಿದವರಿಗೆ ಸಿಗಲಿದೆ.
ಈ ಮೊದಲೇ ಹೇಳಿದಂತೆ ಅಮವಾಸ್ಯೆಯಂದು ಲಕ್ಷ್ಮೀಯ ಕೃಪಾದೃಷ್ಟಿಯು ಈ ರಾಶಿಗಳ ಮೇಲೆ ಬೀಳುವುದರಿಂದ, ಇಷ್ಟು ದಿನ ಅನುಭವಿಸಿದ ಕಷ್ಟಗಳೆಲ್ಲ ದೂರವಾಗುತ್ತವೆ. ಇವರ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ಹೊಸ ಹೊಸ ಉದ್ಯೋಗಗಳನ್ನು ಇವರು ಕೈಗೆತ್ತಿಕೊಳ್ಳುತ್ತಾರೆ. ಇದರಿಂದಾಗಿ ಹೆಚ್ಚಿನ ಹಣವು ಒದಗಿಬಂದು ಶ್ರೀಮಂತಿಕೆಯು ಬರಲಿದೆ. ಅಷ್ಟೇ ಅಲ್ಲ ಇವರಿಗೆ ಶಿವ ಕೃಪೆಯು ಸಹ ಇರುವುದರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನಕ್ಕೆ ಏರಲಿದ್ದಾರೆ.
ಅಮವಾಸ್ಯೆಯಂದು ನಡೆಯುವ ಗ್ರಹಗಳ ಸ್ಥಾನ ಬದಲಾವಣೆಯು ಈ ರಾಶಿಗಳಲ್ಲಿ ಶುಭಫಲವನ್ನು ತರಲಿದೆ. ಇವರ ಸಾಲ ಸಂಬಂಧಗಳು ಕೊನೆಯಾಗಲಿದ್ದು, ಸ್ವಂತ ಉದ್ಯೋಗಗಳಲ್ಲಿ ಬಹಳ ಲಾಭವನ್ನು ಗಳಿಸಿಕೊಳ್ಳಲಿದ್ದಾರೆ. ಕೋರ್ಟ್ ವ್ಯಾಜ್ಯವು ಬಗೆಹರಿಯಲಿದ್ದು, ಪಿತ್ರಾರ್ಜಿತ ಆಸ್ತಿಯಲ್ಲಿ ಸಿಗಬೇಕಿರುವ ಪಾಲು ಸಹ ಸಿಗಲಿದೆ. ಇನ್ನು ವಿವಾಹದ ಬಗ್ಗೆ ಹೇಳಬೇಕೆಂದರೆ, ಅಮವಾಸ್ಯೆಯ ನಂತರ ಈ ರಾಶಿಯವರು ವಿವಾಹದ ಪ್ರಯತ್ನವನ್ನು ಮಾಡಬಹುದು. ಆದಾಗ್ಯೂ ಕೆಲವೊಂದು ಅಡಚಣೆಗಳು ಕಾಡುತ್ತವೆ.
ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಕೆಲಸವಿಲ್ಲದೆ ಖಾಲಿ ಕುಳಿತವರಿಗೆ ಕೆಲಸಗಳು ಸಿಗಲಿವೆ. ಹೊಸ ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬಹುದು. ಸ್ವಂತ ಉದ್ಯೋಗವನ್ನು ಮಾಡುವವರಿಗೆ ಈ ದಿನಗಳು ಚೆನ್ನಾಗಿದೆ. ಇವರ ಗ್ರಹಗತಿಗಳು ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಲಿವೆ. ಮನೆಯ ಸ್ಥಿತಿ ಸಹ ಸುಧಾರಿಸಲಿದ್ದು, ಅತೀ ಶೀಘ್ರವಾಗಿ ಉನ್ನತಿಯನ್ನು ಕಾಣುತ್ತಾರೆ. ಇವರ ಯೋಗವು ರಾಜಯೋಗವಾಗಿದ್ದರಿಂದ ಇವರನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗುವುದಿಲ್ಲ.
ಜೀವನದಲ್ಲಿ ಏನೇ ಸಾಧನೆ ಮಾಡಬೇಕು ಎಂದುಕೊಂಡಿದ್ದರು ಸಹ ಈ ರಾಶಿಯವರಿಗೆ ಇದು ಸಕಾಲವಾಗಿದೆ. ಈ ಸಮಯದಲ್ಲಿ ಇವರು ಪ್ರಯತ್ನವನ್ನು ಮಾಡಿದರೆ ಬಹುಬೇಗ ಫಲಗಳು ಲಭಿಸಲಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯವಾಗಿದ್ದು, ದುಪ್ಪಟ್ಟು ಲಾಭ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇಷ್ಟೆಲ್ಲ ಅದೃಷ್ಟವನ್ನು ಹೊಂದಿರುವ ರಾಶಿಗಳು ಯಾವವೆಂದರೆ ವೃಶ್ಚಿಕ ರಾಶಿ, ಮೇಷರಾಶಿ, ತುಲಾ ರಾಶಿ, ಕಟಕರಾಶಿ, ವೃಷಭರಾಶಿ, ಧನಸ್ಸು ರಾಶಿ, ಕನ್ಯಾರಾಶಿ ಹಾಗೂ ಸಿಂಹರಾಶಿಯಾಗಿದೆ.