12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯೂ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರತಿಯೊಂದು ರಾಶಿಯು ತನ್ನದೆ ಆದ ರಾಶಿ ಭವಿಷ್ಯವನ್ನು ಹೊಂದಿರುತ್ತದೆ. ಯಾವ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಒಂದು ಆಟದ ಮೂಲಕ ತಿಳಿಯಬಹುದು ಹಾಗಾದರೆ ಆಟದ ರೀತಿ-ನೀತಿ ಹಾಗೂ ಯಾವ ರಾಶಿಯ ಫಲ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ನಮ್ಮ ಎಲ್ಲಾ ರಹಸ್ಯವನ್ನು ಕೇವಲ ಒಂದು ಎಮೋಜ್ ಸೆಲೆಕ್ಟ್ ಮಾಡುವುದರಿಂದ ತಿಳಿಯಬಹುದು. ಮೊದಲನೇಯದಾಗಿ ಹಲವು ಎಮೋಜ್ ಗಳಲ್ಲಿ ಒಂದೊಂದು ರಾಶಿಯ ಎಮೋಜ್ ಕೆಳಗೆ ಆ ರಾಶಿಯ ಹೆಸರಿದೆ. ನಮ್ಮ ರಾಶಿಯ ಎಮೋಜ್ ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಮ್ಮ ಎಮೋಜಿ ಪ್ರಕಾರ ನಮ್ಮ ರಹಸ್ಯಗಳು ಹಾಗೂ ಸಾಕಷ್ಟು ವಿಷಯಗಳನ್ನು ತಿಳಿಯಬಹುದು. ಮೇಷ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ. ಈ ರಾಶಿಯವರ ಪ್ರತಿಭೆಯಿಂದ ತುಂಬಾ ಫೇಮಸ್ ಆಗಿರುತ್ತಾರೆ. ಫ್ರೆಂಡ್ಸ್ ಗ್ರೂಪ್ ನಲ್ಲಿ ನಿಮ್ಮನ್ನು ಯಾಕೆ ತುಂಬಾ ಇಷ್ಟಪಡುತ್ತಾರೆ ಅಂದರೆ ನಿಮ್ಮ ಪ್ರತಿಭೆ ಆಗಿರಲಿ, ನಿಮ್ಮ ಟ್ಯಾಲೆಂಟ್ ಆಗಿರಲಿ ನೋಡಿ ತುಂಬಾ ಇಷ್ಟಪಟ್ಟಿರುತ್ತಾರೆ. ಹಾಗೆ ಈ ರಾಶಿಯವರ ಇನ್ನೊಂದು ಒಳ್ಳೆಯ ಕ್ಯಾರೆಕ್ಟರ್ ಏನಂದರೆ ಯಾವುದಕ್ಕೂ ಭಯ ಪಡುವುದಿಲ್ಲ ತುಂಬಾ ಧೈರ್ಯವಾಗಿ ಮುನ್ನುಗುತ್ತಾರೆ.
ಯಾವುದೆ ಕೆಲಸ ಆದರೂ ಅದಕ್ಕೆ ಭಯ ಪಡುವುದಿಲ್ಲ ಅಂತ ಹೇಳಬಹುದು ಇದಲ್ಲದೆ ನಿಮ್ಮ ನಕಾರಾತ್ಮಕ ಯೋಚನೆಗಳಿಂದ ನಿಮ್ಮ ಫ್ರೆಂಡ್ಸ್ ಗ್ರೂಪ್ನಲ್ಲಿ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದೀರಾ ಅಂತ ಹೇಳಬಹುದು. ಎರಡನೆಯದಾಗಿ ವೃಷಭ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ ಹಾಗೂ ಇವರ ಕೆಲಸದಲ್ಲಿ ಮಾತ್ರ ಬಹಳ ಉತ್ಸಾಹಿ ಆಗಿರುತ್ತಾರೆ. ಎಷ್ಟೆ ಚಿಕ್ಕ ಕೆಲಸ ಕೊಟ್ಟರು ಕೂಡ ಅದನ್ನು ಬಹಳ ಸೀರಿಯಸ್ಸಾಗಿ, ಪರ್ಫೆಕ್ಟಾಗಿ ಮಾಡುತ್ತಾರೆ. ಇವರ ಒಳ್ಳೆಯ ಗುಣ ಎಂದರೆ ಯಾವುದೆ ಕಷ್ಟದ ಪರಿಸ್ಥಿತಿ ಬಂದರೂ ಹಿಡಿದ ಕೆಲಸವನ್ನು ಯಾವುದೆ ಕಾರಣಕ್ಕೂ ಬಿಡುವುದಿಲ್ಲ. ಮೂರನೇಯದಾಗಿ ಮಿಥುನ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಓಪನ್ ಮೈಂಡೆಡ್ ಆಗಿರುತ್ತಾರೆ
ಯಾವಾಗಲೂ ಫ್ರೆಂಡ್ಲಿ ನೇಚರ್ ಹೊಂದಿದ್ದು ಫ್ರೆಂಡ್ಲಿಯಾಗಿ ಇರುತ್ತಾರೆ. ಹಾಗೆ ಅಕ್ಕಪಕ್ಕದವರ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಪರ್ಫೆಕ್ಟಾಗಿ ತಿಳಿದುಕೊಂಡಿರುತ್ತಾರೆ. ನಾಲ್ಕನೆಯದಾಗಿ ಕರ್ಕಾಟಕ ರಾಶಿಯ ಎಮೋಜಿಯನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಆಳವಾದ ಯೋಚನೆಗೆ ಹೆಸರು ಮಾಡಿರುತ್ತಾರೆ ಯಾವುದೆ ವಿಷಯವಾಗಿದ್ದರೂ ಅದನ್ನು ಡೀಪಾಗಿ ಯೋಚನೆ ಮಾಡುತ್ತಾರೆ. ಬಹಳ ಎಮೋಷನಲ್ ಆಗಿರುತ್ತಾರೆ ಅಂತ ಹೇಳಬಹುದು ಇದಲ್ಲದೆ ಇವರು ಒಬ್ಬರ ಜೊತೆ ಕಂಫರ್ಟೇಬಲ್ ಆಗುವುದಕ್ಕೆ ಬಹಳ ಟೈಮ್ ತೆಗೆದುಕೊಳ್ಳುತ್ತಾರೆ ಆದರೆ ಒಬ್ಬರ ಜೊತೆ ಕಂಫರ್ಟೇಬಲ್ ಆದರು ಅಂದರೆ ಅವರ ಜೊತೆ ಎಲ್ಲದನ್ನು ಶೇರ್ ಮಾಡಿಕೊಳ್ಳುತ್ತಾರೆ.
ಐದನೇಯದಾಗಿ ಸಿಂಹರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಸ್ವತಂತ್ರವಾದ ಜೀವಿಗಳು ಆದರೆ ಯಾವುದನ್ನು ಹೇಳುವುದಕ್ಕೂ ಯಾವುದಾದರೂ ಮಾತನಾಡುವುದಕ್ಕೂ ಹಿಂಜರಿಯುವುದಿಲ್ಲ. ಏನೆ ವಿಷಯ ಆದರೂ ಸರಿ ಅದು ಸರಿ ಇದ್ದರೆ ಸರಿ ತಪ್ಪು ಇದ್ದರೆ ತಪ್ಪು ಅಂತ ಡೈರೆಕ್ಟಾಗಿ ಹೇಳುತ್ತಾರೆ. ಆರನೆಯದಾಗಿ ಕನ್ಯಾರಾಶಿಯ ಎಮೋಜಿ ಸೆಲೆಕ್ಟ್ ಮಾಡಿದರೆ ಅವರು ತುಂಬಾ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ, ಚಿಕ್ಕ ಚಿಕ್ಕ ವಿಷಯಗಳಿಗೂ ಬಹಳ ಆಳವಾಗಿ ಯೋಚನೆ ಮಾಡಿ ಬೇಜಾರ್ ಮಾಡಿಕೊಳ್ಳುತ್ತಾರೆ. ಇದನ್ನು ಬಿಟ್ಟರೆ ಇವರು ಬಹಳ ಪಾಸಿಟಿವ್ ವ್ಯಕ್ತಿಗಳಾಗಿರುತ್ತಾರೆ. ಏಳನೆಯದಾಗಿ ತುಲಾ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರು ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಕೋಪ ಕೂಡ ಬಹಳ ಬೇಗ ಬರುತ್ತದೆ ಎಂದು ಹೇಳಬಹುದು ಆದರೆ ಎಷ್ಟು ಬೇಗ ಕೋಪ ಬರುತ್ತದೆಯೊ ಅಷ್ಟೆ ಬೇಗ ಶಾಂತವಾಗುತ್ತಾರೆ.
ಇದಲ್ಲದೆ ಇವರ ಜೀವನದಲ್ಲಿ ಯಾವ ಕೆಲಸಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಕರೆಕ್ಟಾಗಿ ತಿಳಿದಿರುತ್ತಾರೆ. ಎಂಟನೇಯದಾಗಿ ವೃಶ್ಚಿಕರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಒಳ್ಳೆಯ ವಿಚಾರ ಏನೆಂದರೆ ಇವರು ಬಹಳ ಆತ್ಮವಿಶ್ವಾಸಿಗಳು ಆಗಿರುತ್ತಾರೆ ಯಾವುದೆ ಕೆಲಸದಲ್ಲಿ ಆದರೂ ಆತ್ಮವಿಶ್ವಾಸ ಜಾಸ್ತಿ ಇರುತ್ತದೆ. ಯಾವುದೆ ಕೆಲಸವನ್ನು ಮಾಡಬೇಕಾದರೂ ಕೂಡ ಭಯ ಇಲ್ಲದೆ ಆ ಕೆಲಸವನ್ನು ಮಾಡುತ್ತಾರೆ. ಇವರ ಒಳ್ಳೆಯ ವಿಷಯ ಏನೆಂದರೆ ಇವರ ಮಾತಿನಿಂದಲೆ ಎಲ್ಲರನ್ನೂ ಇಂಪ್ರೆಸ್ ಮಾಡುವ ಗುಣ ಇರುತ್ತದೆ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ.
9ನೇಯದಾಗಿ ಧನುರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರ ಪಾಸಿಟಿವ್ ನೇಚರ್ ಹಾಗೂ ಆಶಾವಾದಿ ನೇಚರ್ ಏನಿದೆ ಇದರಿಂದ ಬಹಳ ಫೇಮಸ್ ಆಗಿರುತ್ತಾರೆ. ಇದಲ್ಲದೆ ಜೀವನದಲ್ಲಿ ಯಾವಾಗಲೂ ಕೆಟ್ಟ ಯೋಚನೆ ಮಾಡುವುದಿಲ್ಲ ಬದಲಾಗಿ ಲೈಫನಲ್ಲಿ ಹೇಗೆ ಮುಂದೆ ಬರಬೇಕು ಎನ್ನುವುದರ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ, ಅದರ ಮೇಲೆ ಹೆಚ್ಚಿನ ವರ್ಕ್ ಮಾಡುತ್ತಾರೆ.
10ನೇಯದಾಗಿ ಮಕರ ರಾಶಿಯ ಎಮೋಜಿ ಅನ್ನು ಸೆಲೆಕ್ಟ್ ಮಾಡಿದರೆ ಇವರದು ಅಂಡರ್ಸ್ಟ್ಯಾಂಡಿಂಗ್ ನೇಚರ್ ಯಾರ ಜೊತೆ ಬೇಕಾದರೂ ಬೇಗ ಅಂಡರ್ಸ್ಟ್ಯಾಂಡ್ ಮಾಡಿಕೊಂಡು ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಇದಲ್ಲದೆ ಸುತ್ತಮುತ್ತಲಿನ ಜನರಿಗೆ ಹೆಲ್ಪ್ ಮಾಡುವುದಕ್ಕೆ ಮುಂದೆ ಬರುತ್ತಾರೆ. ಇವರ ಜೊತೆ ಟೈಮ್ ಸ್ಪೆಂಡ್ ಮಾಡುವುದಕ್ಕೆ ಫ್ರೆಂಡ್ಸಿಗೆ ಅಥವಾ ಸ್ನೇಹಿತರಿಗೆ ಬಹಳ ಇಷ್ಟ ಇರುತ್ತದೆ. ಹನ್ನೊಂದನೇಯದಾಗಿ ಕುಂಭ ರಾಶಿಯ ಎಮೋಜಿ ಯನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಹಾನೆಸ್ಟ್ ಆಗಿರುತ್ತಾರೆ, ಯಾವುದೆ ವಿಷಯದಲ್ಲಿ ಆದರೂ ಹಾಗೆ ಜಾಸ್ತಿ ಸುಳ್ಳು ಹೇಳುವುದಕ್ಕೆ ಹೋಗುವುದಿಲ್ಲ. ಇದಲ್ಲದೆ ಯಾವುದಾದರೂ ಕೆಲಸವನ್ನು ಮಾಡಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡರೆ ಅದನ್ನು ಮಾಡುವವರೆಗೂ ಕೂಡ ಬಿಡುವುದಿಲ್ಲ.
ಇವರ ಫ್ಯಾಮಿಲಿ ಮೇಲೆ ಬಹಳ ಗೌರವ ಹಾಗೂ ಪ್ರೀತಿ ಇರುತ್ತದೆ. ಕೊನೆಯದಾಗಿ ಮೀನಾ ರಾಶಿಯ ಎಮೋಜಿಯನ್ನು ಸೆಲೆಕ್ಟ್ ಮಾಡಿದರೆ ಇವರು ಬಹಳ ಕ್ರಿಯಾಶೀಲರಾದ ವ್ಯಕ್ತಿಗಳಾಗಿರುತ್ತಾರೆ ಇದೆ ಕಾರಣಕ್ಕೆ ಬಹಳ ಜನರಿಗೆ ನಿಮ್ಮನ್ನು ನೋಡಿದರೆ ಇಷ್ಟ ಆಗುತ್ತದೆ. ಇನ್ನೊಂದು ಒಳ್ಳೆಯ ವಿಷಯ ಏನೆಂದರೆ ಇವರು ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಇವರ ಲೈಫಿನಲ್ಲಿ ಏನು ಮಾಡಬೇಕು ಅಂತ ಅಂದುಕೊಂಡಿರುತ್ತಾರೊ ಅದರ ಮೇಲೆ ಮಾತ್ರ ಇವರು ಕಾನ್ಸಂಟ್ರೇಟ್ ಮಾಡುತ್ತಾರೆ. ನೀವು ಯಾವ ಎಮೋಜಿಯನ್ನು ಸೆಲೆಕ್ಟ್ ಮಾಡಿಕೊಳ್ಳುತ್ತೀರಾ, ಆ ಎಮೋಜಿ ಏನು ಹೇಳುತ್ತದೆ ಎಂದು ಓದಿ ತಿಳಿದುಕೊಳ್ಳಿ.