ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ನಮ್ಮೊಂದಿಗಿಲ್ಲ ಆದರೆ ಅವರು ಮಾಡಿದ ಅನೇಕ ಸಾಮಾಜಿಕ ಸೇವಾ ಕೆಲಸಗಳು ನಮ್ಮೊಂದಿಗೆ ಇನ್ನೂ ಜೀವಂತವಾಗಿದೆ. ಪುನೀತ್ ಅವರ ಸಾವು ಅವರ ಕುಟುಂಬಸ್ಥರಿಗೆ ಸಹಿಸುವುದು ಬಹಳ ಕಷ್ಟದ ವಿಷಯವೆ ಆಗಿದೆ ಆದರೂ ಪುನೀತ್ ಅವರ ಪತ್ನಿ ಹಾಗೂ ಮಕ್ಕಳು ಧೈರ್ಯ ತಂದುಕೊಂಡು ಕೆಲವು ಒಳ್ಳೆಯ ನಿರ್ಧಾರಗಳನ್ನು ಮಾಡಿದ್ದಾರೆ. ಪುನೀತ್ ಅವರ ಸಮಾಧಿಯ ಬಳಿ ಅವರ ಮಗಳು ವಂದಿತಾ ಪುನೀತ್ ಅವರ ಮುದ್ದಿನ ನಾಯಿ ಮರಿಯನ್ನು ಕರೆದುಕೊಂಡು ಹೋಗಿರುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕನ್ನಡ ಚಿತ್ರರಂಗದ ಪವರ್ ಸ್ಟಾರ್, ನಗುಮುಖದ ಸರದಾರ ಪುನೀತ್ ರಾಜಕುಮಾರ್ ಅವರು 2021 ನೆ ಇಸ್ವಿ ಅಕ್ಟೋಬರ್ 29ರಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದರು. ಹಠಾತ್ತನೆ ಹೃದಯಘಾತದಿಂದ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದರು. ಯಾರಿಂದಲೂ ಊಹಿಸಲಸಾಧ್ಯವಾದ ವಿಚಾರವೊಂದನ್ನು ನಾವೆಲ್ಲರೂ ಅರಗಿಸಿಕೊಳ್ಳಬೇಕಾಯಿತು. ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ಸಮಯದಲ್ಲಿ ಅವರ ಮೊದಲ ಮಗಳು ಧೃತಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾದಲ್ಲಿದ್ದರು. ಎರಡನೆ ಮಗಳು ವಂದಿತಾ ಎಸ್ಎಸ್ಎಲ್ ಸಿ ಓದುತ್ತಿದ್ದರು. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷ ಜನರು ಅಂತಿಮ ದರ್ಶನ ಪಡೆದುಕೊಂಡರು.
ಗಾಂಧೀಜಿ ಅವರನ್ನು ಬಿಟ್ಟರೆ ಅಂತಿಮದರ್ಶನಕ್ಕೆ ಇಷ್ಟು ಜನರು ಸೇರಿದ್ದು ಪುನೀತ್ ಅವರ ಅಂತ್ಯಸಂಸ್ಕಾರದ ದಿನ ಇದೊಂದು ಇತಿಹಾಸದಲ್ಲಿ ಬರೆದಿಡುವಂಥ ವಿಷಯವಾಗಿದೆ. ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅನೇಕ ಅನಾಥಾಲಯ, ವೃದ್ಧಾಶ್ರಮ, ಗೋಶಾಲೆಯನ್ನು ನಿರ್ಮಿಸಿದರು ಅಲ್ಲದೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೈಸೂರಿನಲ್ಲಿ ವಿದ್ಯಾಧಾಮ ಎಂಬ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿ ಸಾವಿರಾರು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿದ್ದಾರೆ.
ಆರ್ ಕೆ ಪ್ರೊಡಕ್ಷನ್ ಮೂಲಕ ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡುವ ಮೂಲಕ ತಾವು ಮಾತ್ರವಲ್ಲದೆ ಹೊಸಬರನ್ನು ಬೆಳೆಸುವ ಕಾರ್ಯವನ್ನು ಪುನೀತ್ ರಾಜಕುಮಾರ್ ಅವರು ಮಾಡಿದ್ದರು. ಅವರ ಮರಣದ ನಂತರ ಅವರ ಎಲ್ಲಾ ಸಾಮಾಜಿಕ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಅವರು ಮುಂದುವರಿಸುವ ನಿರ್ಧಾರವನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇಷ್ಟೆ ಅಲ್ಲದೆ ಅವರ ಮೊದಲ ಮಗಳು ಧೃತಿ ತಮ್ಮ ಸ್ಕಾಲರ್ಷಿಪ್ ನಿಂದಲೆ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.
ಇತ್ತೀಚಿಗೆ ಕೆಲವುದಿನಗಳ ಹಿಂದೆ ಪುನೀತ್ ಅವರ ಸಮಾಧಿಯ ಬಳಿ ಹೋಗಿ ಪುನೀತ್ ಅವರ ಪತ್ನಿ ಅಶ್ವಿನಿ, ಮಗಳು ವಂದಿತಾ ಹಾಗೂ ಕುಟುಂಬಸ್ಥರು ಗಿಡ ನೆಟ್ಟಿದ್ದಾರೆ ಜೊತೆಗೆ ಪುನೀತ್ ಅವರ ಮುದ್ದಿನ ನಾಯಿ ಮರಿಯನ್ನು ಅವರ ಮಗಳು ವಂದಿತಾ ಪುನೀತ್ ಅವರ ಸಮಾಧಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಬಹುಶಃ ಪುನೀತ್ ಅವರ ಅನುಪಸ್ಥಿತಿ ಅವರ ಮುದ್ದಿನ ನಾಯಿಮರಿಗೂ ದುಃಖವನ್ನು ತಂದಿರಬಹುದು ಎಂದು ಹೇಳಿದರೆ ತಪ್ಪಾಗಲಾರದು. ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ.