ಬೇಸಿಗೆ ಕಾಲದಲ್ಲಿ ಹಾಗೂ ಜೊತೆಗೆ ಚಳಿಗಾಲದಲ್ಲಿಯೂ ಕೂಡಾ ಆದಷ್ಟೂ ಜಾಗರೂಕರಾಗಿರುವುದು ಉತ್ತಮ. ಹವಾಮಾನವು ಸ೦ಪೂರ್ಣ ಶುಷ್ಕವಾಗಿದ್ದಲ್ಲಿ, ಅ೦ತಹ ವಾತಾವರಣವು ಮೂಗಿನ ರಕ್ತಸ್ರಾವಕ್ಕೆ ದಾರಿಮಾಡಿಕೊಡುವ ಸಾಧ್ಯತೆ ಇದೆ.
ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಏಳನೀರನ್ನು ಕುಡಿದರೆ ಮೂಗಿನಿಂದ ರಕ್ತ ಬರುವುದಿಲ್ಲ.ಮೂಗಲ್ಲಿ ರಕ್ತ ಬರುತ್ತಿದ್ದಾಗ ಹಣೆ ಮೇಲೆ ಐಸ್ ಪ್ಯಾಕ್ ಇಟ್ಟರೆ ಕೂಡಲೇ ರಕ್ತ ನಿಲ್ಲುತ್ತದೆ. ಗರಿಕೆ ರಸವನ್ನು ಸೊಸಿ 2 ಹನಿ ಮೂಗಿಗೆ ಹಾಕಿದರೂ ರಕ್ತಸ್ರಾವ ನಿಲ್ಲುತ್ತದೆ. ಮೂಗಿನ ಮೇಲೆ ಮತ್ತು ಹುಬ್ಬುಗಳ ಮೇಲೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಚ್ಚಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.
ನಿಯಮಿತವಾಗಿ ಗುಲ್ಕಂದ್ ಸೇವಿಸಿದರೆ ದೇಹ ತಂಪಾಗಿ ರಕ್ತ ಬರುವುದು ನಿಲ್ಲುತ್ತದೆ.ದಿನ ನಿತ್ಯ ಬೆಟ್ಟದ ನೆಲ್ಲಿಕಾಯಿ ಸೇವಿಸಿದರೂ ಮೂಗಿನಿಂದ ರಕ್ತ ಬರುವುದಿಲ್ಲ.2 ಅಂಜೂರದ ಹಣ್ಣನ್ನು ರಾತ್ರಿ ನೀರಲ್ಲಿ ನೆನಸಿ ಬೆಳಗ್ಗೆ ಸೇವಿಸಿದರೆ ಪ್ರಯೋಜನವಾಗುತ್ತದೆ.ಮೂಗಿನಿಂದ ರಕ್ತ ಬರುತ್ತಿದ್ದರೆ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಮೂಸಿದರೆ ರಕ್ತ ನಿಲ್ಲುತ್ತದೆ. ಮೂಗು ಹಾಗೂ ಹಣೆ ಮೇಲೆ ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಸೇರಿಸಿ ಕಲಸಿ ಮಾಡಿದ ಪೇಸ್ಟ್ ಅನ್ನು ಪ್ಯಾಕ್ ಮಾಡಿದರೆ ರಕ್ತ ಬರುವುದು ನಿಲ್ಲುತ್ತದೆ .
ಕುರಿಯ ಹಾಲನ್ನು ಪ್ರತಿದಿನ ಸೇವಿಸಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.
ಒಂದು ನಿಂಬೆಹಣ್ಣು ಹಾಗೂ ಚೆನ್ನಾಗಿ ತಿಳಿದಂತಹ ಸ್ವಲ್ಪ ಕೊತ್ತಂಬರಿ ಸೊಪ್ಪು ತೆಗೆದುಕೊಂಡು, ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ದಾಗ ಬರುವ ರಸವನ್ನು ತೆಗೆದುಕೊಂಡು ಅಷ್ಟೇ ಪ್ರಮಾಣದ ಲಿಂಬೆರಸವನ್ನು ಸೇರಿಸಿಕೊಳ್ಳಬೇಕು. ಎರಡು ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮೂಗಿನ ಹೊಳ್ಳೆಗೆ ಬಿಡಬೇಕು ಧನು ವಯಸ್ಸಿನ ಮಿತಿಯಲ್ಲಿ ಬಿಡಬೇಕು ದೊಡ್ಡವರಿಗೆ ನಾಲ್ಕರಿಂದ ಐದು ಹನಿಯನ್ನು ಬಿಟ್ಟರೆ ಯೋಗ್ಯ ಹಾಗೂ ಸಣ್ಣ ವಯಸ್ಸಿನವರಿಗೆ ಒಂದರಿಂದ ಎರಡು ಹನಿಯನ್ನು ಬಿಡುವುದು ಒಳ್ಳೆಯದು