WhatsApp Group Join Now
Telegram Group Join Now

ತಿರುಪತಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಇವರು. ಪ್ರತಿಯೊಬ್ಬರಿಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬ ಮಹದಾಸೆ ಇರುತ್ತದೆ ಅದರಲ್ಲೂ ಬಾಲಾಜಿಯ ದರ್ಶನವನ್ನು ಮೊದಲು ಪಡೆಯುವವರು ಎಷ್ಟು ಅದೃಷ್ಟವಂತ ಆಗಿರಬಹುದು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಯಾರು ಗೊತ್ತಾ ತಿಳಿಯಲು ಈ ಲೇಖನ ಓದಿರಿ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇಶ ದೇಶಗಳಿಂದ ಭಕ್ತರು ಆಗಮಿಸುತ್ತಾರೆ ಕೆಲವೊಮ್ಮೆ ಬಾಲಾಜಿ ದರ್ಶನಕ್ಕೆ ಭಕ್ತರು ದಿನಗಟ್ಟಲೆ ನಿಲ್ಲುತ್ತಾರೆ ಕೆಲವರು ಬೆಟ್ಟ ಹತ್ತಿ ವೆಂಕಟೇಶ್ವರನ ಜಪ ಮಾಡುತ್ತಾ ಬಂದು ದರ್ಶನ ಮಾಡುತ್ತಾರೆ ಪ್ರತಿಯೊಬ್ಬ ಭಕ್ತನಿಗೆ ತಿರುಪತಿಯಲ್ಲಿ ದರ್ಶನ ಸಿಗುವುದು ಕೆಲ ಕ್ಷಣ ಮಾತ್ರ ಈ ದರ್ಶನ ಅತೀವ ಆನಂದ ಹಾಗೂ ವಿಸ್ಮಯ ಉಂಟು ಮಾಡುತ್ತದೆ ಭಕ್ತರಿಗೆ ಏನೋ ಒಂದು ಸಾಧನೆ ಮಾಡಿರುವ ಅನುಭವ ಆಗುತ್ತದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಮೊದಲು ದೇವರ ದರ್ಶನ ಮಾಡುವುದು ಅರ್ಚಕರು ಆದರೆ ಮೊದಲು ದೇವಾಲಯದ ಬಾಗಿಲು ತೆಗೆದು ದೇವರ ದರ್ಶನ ಮಾಡುತ್ತಾರೆ.

ಆದರೆ ತಿರುಪತಿಯಲ್ಲಿ ದೇವರ ದರ್ಶನ ಮೊದಲು ಮಾಡುವುದು ಅರ್ಚಕರು ಅಲ್ಲ. ಸನ್ನಿಧಿ ಗೊಲ್ಲರು ಸನ್ನಿಧಿ ಕುಲ ಎಂಬ ಕುಟುಂಬದವರು ಮೊದಲು ದೇವರ ದರ್ಶನ ಮಾಡುತ್ತಾರೆ ಈ ದೇಗುಲದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾರ್ಯವನ್ನು ಹಂಚಲಾಗಿದೆ. ಸ್ವಾಮಿಯ ಪೂಜಾ ಕಾರ್ಯವನ್ನು ಅರ್ಚಕರು ಮಾಡುತ್ತಾರೆ ಪ್ರಸಾದ ವಿತರಣೆಯನ್ನು ಕೆಲವರು ನೋಡಿ ಕೊಳ್ಳುತ್ತಾರೆ. ಹಾಗೆ ಸನ್ನಿಧಾನ ಜವಾಬ್ಧಾರಿಯನ್ನು ಕೆಲವರಿಗೆ ನೀಡುತ್ತಾರೆ.

ಅವರಲ್ಲಿ ಸನ್ನಿಧಿ ಕುಲದವರ ಪಾತ್ರ ಬಹಳ ಮುಖ್ಯ. ಇವರು ರಾತ್ರಿ ದೇವರ ಸನ್ನಿಧಾನ ಮುಚ್ಚಿ ಬೆಳಗ್ಗೆ ಗರ್ಭ ಗುಡಿಯ ಬಾಗಿಲನ್ನು ತೆರೆಯುತ್ತಾರೆ. ಈ ಸಂಪ್ರದಾಯ ಮೊದಲಿನಿಂದ ನಡೆದು ಕೊಂಡು ಬಂದಿದೆ. ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಅರ್ಚಕರೆಲ್ಲ ಸೇರಿ ಸನ್ನಿಧಿ ಗೊಲ್ಲರ ನಿವಾಸದ ಮುಂದೆ ನಿಂತು ದೇವಸ್ಥಾನದ ಬಾಗಿಲ ತೆರೆಯಲು ಆಹ್ವಾನ ನೀಡುತ್ತಾರೆ.

ಆಗ ಸನ್ನಿಧಿ ಗೊಲ್ಲರು ಸ್ನಾನ ಮಾಡಿ ಬಂದು ದೇವಸ್ಥಾನದ ಬಾಗಿಲು ತೆರೆಯುತ್ತಾರೆ ಹೀಗೆ ಬಾಗಿಲು ತೆರೆಯುವಾಗ ಅರ್ಚಕರು ದೇವಸ್ಥಾನದ ಮುಂದೆ ನಿಂತು ಸುಪ್ರಭಾತ ಹಾಡುತ್ತಾರೆ. ಆಗ ಸನ್ನಿಧಿ ಗೊಲ್ಲರು ಬಾಗಿಲು ತೆಗೆದು ಮೊದಲ ದರ್ಶನ ಪಡೆಯುತ್ತಾರೆ. ಹೀಗೆ ಸನ್ನಿಧಿ ಕುಲ ಕುಟುಂಬದವರು ಬಾಲಾಜಿಯ ದರ್ಶನವನ್ನು ಮೊದಲು ಮಾಡುತ್ತಾರೆ. ಭಕ್ತರು ದಿನಗಟ್ಟಲೆ ಗಂಟೆ ಗಟ್ಟಲೆ ಕಾದು ದರ್ಶನ ಪಡೆಯುತ್ತಾರೆ ಆದರೆ ಅದು ಸನ್ನಿಧಿ ಗೊಲ್ಲ ಬಾಲಾಜಿಯ ದರ್ಶನ ಮೊದಲು ಪಡೆಯುತ್ತಾನೆ ಹೀಗೆ ತಿರುಪತಿ ತಿಮ್ಮಪ್ಪ ನ ಕ್ಷೇತ್ರ ಹಲವು ನಿಗೂಢ ರಹಸ್ಯಗಳು ಒಳಗೊಂಡಿದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: