ಪ್ರತಿಯೊಬ್ಬರೂ ಸಹ ರಾಶಿ ಭವಿಷ್ಯದಲ್ಲಿ ಸಾಡೇಸಾತಿ ಜನ್ಮ ಶನಿ ಇದೆ ಎಂದಾಗ ತುಂಬಾ ಭಯಕ್ಕೆ ಒಳಗಾಗುತ್ತಾರೆ ಮುಂದೆ ಯಾವ ಸಮಸ್ಯೆ ಬರುತ್ತದೆ ಎಂಬ ಗೊಂದಲ ಮನೆ ಮಾಡುತ್ತದೆ ಸಾಡೇಸಾತಿ ಬಂದರೆ ಭಯಬಾರದು ಎಷ್ಟೇ ಕಷ್ಟಗಳು ಬಂದರು ಸಹ ಧೈರ್ಯದಿಂದ ಎದುರಿಸಬೇಕು ನಂತರ ಕಷ್ಟಗಳು ಯಾವಾಗಲೂ ಜೀವನದಲ್ಲಿ ಇದ್ದೇ ಇರುವುದು ಇಲ್ಲ ಹಾಗೆಯೇ ಸುಖ ಸಹ ಯಾವಾಗಲೂ ಇರುವುದು ಇಲ್ಲ ಒಮ್ಮೆ ಕಷ್ಟ ಬಂದರೆ ನಂತರ ಸುಖ ಸಿಗುತ್ತದೆ ಸುಖ ಬಂದರೆ ಕಷ್ಟಗಳು ಬಂದೆ ಬರುತ್ತದೆ ಹೀಗೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಬಂದೆ ಬರುತ್ತದೆ.
ಸುಖ ಇದ್ದಾಗ ಸಂತೋಷಕ್ಕೆ ಒಳಗಾಗದೆ ದುಃಖ ಬಂದಾಗ ಕುಗ್ಗದೆ ಆತ್ಮ ವಿಶ್ವಾಸದಿಂದ ಜೀವನದ ನಡೆಸಬೇಕು ಯಾವುದೇ ಕಷ್ಟದಲ್ಲಿ ಇದ್ದರು ಧೈರ್ಯ ದಿಂದ ಸಮಸ್ಯೆಯನ್ನು ಎದುರಿಸಬೇಕುಜನವರಿ ಹದಿನೇಳಕ್ಕೆ ಕುಂಭ ರಾಶಿಯಲ್ಲಿ ಜನ್ಮ ಶನಿ ಇರುತ್ತಾನೆ ಕುಂಭ ರಾಶಿಯವರಿಗೆ ಎರಡು ವರ್ಷಗಳ ಕಾಲ ಸಾಡೇಸಾತಿ ಇರುತ್ತದೆ ಇಂತಹ ಸಮಯದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಂಡು ಬಂದರೂ ಸಹ ಅದನ್ನು ಎದುರಿಸಬೇಕು ನಂತರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಕುಂಭ ರಾಶಿಗೆ ಸಾಡೇಸಾತಿ ಜನ್ಮ ಶನಿಯಿಂದ ಉಂಟಾಗುವ ಫಲ ಹಾಗೂ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ.
ಜನವರಿ ಹದಿನೇಳಕ್ಕೆ ಕುಂಭ ರಾಶಿಯಲ್ಲಿ ಜನ್ಮ ಶನಿ ಇರುತ್ತಾನೆ ಶನಿಯ ಇನ್ನೊಂದು ಹೆಸರು ಮಂದ ಹಾಗಾಗಿ ಹೆಸರೇ ಸೂಚಿಸುವಂತೆ ಶನಿ ಯಿಂದಾಗಿ ಜೀವನ ನಿಧಾನ ಗತಿಯಲ್ಲಿ ಸಾಗುತ್ತದೆ ಕಪ್ಪು ಬಟ್ಟೆ ಹಾಕಿಕೊಳ್ಳುವುದು ಕತ್ತಲನ್ನು ಸೂಚಿಸುತ್ತದೆ ಕತ್ತಲು ನಮ್ಮ ಚಟುವಟಿಕೆಯನ್ನು ಚುರುಕುಗೊಳಿಸುವ ಬದಲು ನಿಧಾನ ಮಾಡುತ್ತದೆ
ಸೋಮಾರಿತನ ಸಹ ಶನಿಯ ಕಾರಣದಿಂದ ಬರುತ್ತದೆ ಪ್ರಮುಖವಾಗಿ ದುಃಖ ಕೊಡುವವನು ಶನಿ ಆಗಿರುತ್ತಾನೆ ಸುಖದ ಜೀವನವನ್ನು ದುಃಖ ತಂದುಕೊಡುವನು ಶನಿ ಆಗಿರುತ್ತಾನೆ ದುಃಖ ಎನ್ನುವುದು ನೆಗೆಟಿವ್ ಅಂಶ ವಾಗಿದೆ ಸಾಡೇಸಾತಿ ಬಂದಾಗ ಎಲ್ಲರೂ ಅದೃಷ್ಟ ಕೈ ಕೊಡುತ್ತದೆ ಎಂದು ಕೊಳ್ಳುತ್ತಾರೆ ಆದರೆ ಸಾಡೇಸಾತಿ ಬಂದರೆ ನಮ್ಮ ಜೀವನದ ಮೇಲಿನ ದೃಷ್ಟಿಕೋನವನ್ನು ಶನಿ ಹೆಚ್ಚಿಸುತ್ತಾನೆ.
ಮನೋವೈಜ್ಞಾನಿಕವಾದ ಕಾರಣಗಳು ಉಂಟಾಗುತ್ತದೆ ಗೊಂದಲ ಸಂಶಯವನ್ನು ಸಹ ಶನಿ ಉಂಟುಮಾಡುತ್ತಾನೆ ಕುಂಭ ರಾಶಿಗೆ ಜನ್ಮ ಶನಿಯಿಂದ ಒಳ್ಳೆಯ ಪರಿಣಾಮ ಬೀರುತ್ತದೆ ಮನುಷ್ಯರು ಯಾರು ಒಂದೇ ತರನಾಗಿ ಬದುಕಲು ಸಾಧ್ಯವಿಲ್ಲ ಒಮ್ಮೆ ಕಷ್ಟ ಕಾರ್ಪಣ್ಯ ಬಂದರೆ ಕಾಲ ಚಕ್ರ ತಿರುಗಿದಂತೆ ಸುಖ ಸಂತೋಷ ಕಂಡು ಬರುತ್ತದೆ ಹೀಗೆ ಒಮ್ಮೆ ಮೇಲೆ ಒಮ್ಮೆ ಕೆಳಗೆ ಆಗುತ್ತಿರುತ್ತದೆ ನಾವು ಕೆಲವೊಮ್ಮೆ ತಪ್ಪು ಮಾಡುತ್ತೇವೆ ಅದನ್ನು ಸರಿದೂಗಿಸಲು ಬೇರೆ ದಾರಿಯನ್ನು ಹುಡುಕುತ್ತೇವೆ ಹೀಗೆ ಶನಿ ಮಾಡುತ್ತಾನೆ.
ಕೆಟ್ಟ ಮಾತುಗಳನ್ನು ಆಡುತ್ತೇವೆ ಹಾಗೆಯೇ ನಮ್ಮ ಬಗ್ಗೆ ಒಂದು ರೀತಿಯ ಅಹಂಕಾರದ ಭಾವನೆ ಇದ್ದೇ ಇರುತ್ತದೆ ಅಹಂಕಾರ ಇರುವ ವ್ಯಕ್ತಿಗಳು ಒಂದಲ್ಲ ಒಂದು ದಿನ ಸೋಲೆ ಸೋಲುತ್ತಾರೆ ಜೀವನದಲ್ಲಿ ಎಸ್ಟು ಬೇಗ ಸೊಲುತ್ತಿರಿ ಅಷ್ಟು ಬೇಗ ಗೆಲ್ಲುತ್ತಾರೆ ಕುಂಭ ರಾಶಿಗೆ ಶನಿಯು ಅಧಿಪತಿಯಾಗಿ ಇರುತ್ತಾನೆ ಹಾಗೆಯೇ ಶನಿಗೆ ಮೂಲ ಕೈ ಗುಣ ಸ್ಥಾನ ಸಹ ಆಗಿದೆ ಜನ್ಮ ಶನಿ ಕುಂಭ ರಾಶಿಯಲ್ಲಿ ಇರುತ್ತಾನೆ
ಇದು ಕಷ್ಟದಿಂದ ಕೂಡಿದ ನದಿಯನ್ನು ಸೇರಲು ಸಾಧ್ಯ ಆಗುತ್ತದೆ ಕುಂಭ ರಾಶಿಯವರಿಗೆ ಸಾಡೆ ಸಾತಿ ಮುಗಿಯುವ ಹೊತ್ತಿಗೆ ಒಂದು ದೃಢ ನಿರ್ಧಾರ ಕೈಗೊಂಡ ಹಾಗೆ ಆಗುತ್ತದೆ ಹೀಗೆ ಕುಂಭ ರಾಶಿಯವರಿಗೆ ಸಾಡೇಸಾತಿ ಮುಗಿಯುವ ಹೊತ್ತಿಗೆ ಯಶಸ್ಸನ್ನು ಸಾಧಿಸುತ್ತಾರೆ .ಸಾಡೆ ಸಾತಿನಿಂದ ಬರುವ ಕಷ್ಟಗಳಿಂದ ಜೀವನದ ಪಾಠವನ್ನು ಕಲಿಯಬಹುದು ಜನ್ಮ ಶನಿಯು ವಿಘ್ನಗಳು ತೊಂದರೆಗಳು ತಾಪತ್ರೆಯನ್ನು ನೀಡುತ್ತಾನೆ ಕುಂಭ ರಾಶಿಯವರಿಗೆ ಜನ್ಮ ಶನಿ ಇಂದ ಧೈರ್ಯ ಕಡಿಮೆ ಆಗುವ ಸಾಧ್ಯತೆ ಸಾಡೆ ಸಾತಿ ಇದ್ದಾಗ ಅನೇಕ ವಿಷಯಗಳಲ್ಲಿ ಗೊಂದಲ ಕಂಡುಬರುತ್ತದೆ
ಜನ್ಮ ಶನಿ ಇದ್ದಾಗ ಮದುವೆ ವಿಚಾರದಲ್ಲಿ ಜಾತಕ ಕೂಡಿ ಬಂದರು ಸಹ ಮದುವೆ ಆಗುವುದು ಇಲ್ಲ ನಾನಾ ರೀತಿಯ ವಿಘ್ನಗಳು ಬರುತ್ತದೆ ಮದುವೆ ಆದರೂ ಸಹ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಕೆಲಸ ಕಾರ್ಯಗಳಲ್ಲಿ ಅನೇಕ ರೀತಿಯಲ್ಲಿ ವಿಘ್ನಗಳು ಉಂಟಾಗುತ್ತದೆ ಹೊಸದಾಗಿ ಕೆಲಸ ಹುಡುಕುವರಿಗೆ ಕೆಲಸದ ವಿಳಂಬ ಕಂಡು ಬರುತ್ತದೆ ಕೆಲಸ ಮಾಡುತ್ತಿರುವವರಿಗೆ ಕೆಲಸದಲ್ಲಿ ಒತ್ತಡ ಕಿರಿಕಿರಿ ಕಂಡು ಬರುತ್ತದೆ
ಇನ್ನೆರಡು ವರ್ಷಗಳ ಕಾಲ ಕೆಲಸದ ಸ್ಥಾನದಲ್ಲಿ ಕಿರಿಕಿರಿ ಉಂಟಾಗುತ್ತದೆ ಕುಂಭ ರಾಶಿಯವರು ಎಷ್ಟೇ ಕಷ್ಟ ಬಂದರು ಸಹ ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಹೀಗೆ ಸಾಡೆಸಾತಿ ಬಂದಿದೆ ಎಂದು ಆತ್ಮ ವಿಶ್ವಾಸ ಕೆಡಿಸಿಕೊಳ್ಳಬಾರದು ಧೈರ್ಯವಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕು ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ.