WhatsApp Group Join Now
Telegram Group Join Now

ಆದುನಿಕ ಜಗತ್ತಿನಲ್ಲಿ ಯಾಂತ್ರಿಕ ಜೀವನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡು ಬಿಟ್ಟಿದ್ದೇವೆ
ಬೆಳಿಗ್ಗೆ ಕೆಲ್ಸಕ್ಕೆ ಹೋದ್ರೆ ಸಂಜೆ ಮನೆಗೆ ಬರುತ್ತಾರೆ ಇನ್ನು ಊಟದ ವಿಚಾರಕ್ಕೆ ಹೋದ್ರೆ ಮನೆಯಲ್ಲಿ ರುಚಿಯಾದ ಆಹಾರವನ್ನು ತಯಾರಿಸಿ ತಿನ್ನಲು ಸಮಯದ ಅಭಾವ ಇದ್ದು ಜಂಕ್ ಫುಡ್ ಸ್ವಿಗ್ಗಿ ಝೋಮಾಟೋ ನಂತಹ ಡೆಲಿವರಿಯ ಮೊರೆ ಹೋಗಿದ್ದಾರೆ. ಇತ್ತೀಚಿನ ಆಹಾರ ವ್ಯವಸ್ಥೆಯಿಂದ ಜನರಲ್ಲಿ ತುಂಬಾ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಾ ಇದ್ದು ಅದರಲ್ಲಿ ಸ್ತುಲಕಾಯ ಒಂದು ದೇಹದ ತೂಕವು ಜಾಸ್ತಿ ಆಗಿದ್ದು ಅದನ್ನು ಕಮ್ಮಿ ಮಾಡಲು ಅನೇಕರು ಹಲವಾರು ಜಾಹೀರಾತುಗಳ ಮೊರೆ ಹೋಗ್ತಾ ಇದ್ದಾರೆ

ಇಂದಿನ ಲೇಖನದಲ್ಲಿ ಮನೆಯಲ್ಲಿ ಇರುವ ವಸ್ತುವಿಂದ ತೂಕವನ್ನು ಹೀಗೆ ನಿಯಂತ್ರಿಸಬಹುದು ಎಂಬುದನ್ನು ನೋಡೋಣ ಬನ್ನಿ.ನಿಯಮಿತ ವ್ಯಯಾಮ ಮತ್ತು ಕ್ರಮಬದ್ಧವಾದ ಆಹಾರ ಸೇವೆನೆ ಯಿಂದ ನಮ್ಮ ದೇಹವನ್ನು ಆರೋಗ್ಯಕರವಾಗಿ ನಿರ್ದಿಷ್ಟ ತೂಕವನ್ನು ಕಾಪಾಡಿಕೊಳ್ಳಬಹುದು ಆದರೆ ಈಗಿನ ಒತ್ತಡಬರಿತ ಜೀವನದಲ್ಲಿ ಇದು ಅಸಾಧ್ಯ ಮಾತು ಸಾಕಷ್ಟು ಬಾರಿ ಮನೆಯಲ್ಲಿ ಇರುವಂಥ ವಸ್ತುಗಳಿಂದ ನಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ಸಾಬೀತು ಆಗಿದೆ.ಕೆಲವೊಬ್ಬರು ತಮ್ಮ ತೂಕವನ್ನು ಕಡಿಮೆ ಮಾಡಲು ಹೆಚ್ಚು ಶ್ರಮ ಪಡುತ್ತಾರೆ . ನಾಲಕ್ಕು ಐದು ಒಣ ದ್ರಾಕ್ಷಿ ಮತ್ತು ಸ್ವಲ್ಪ ಬೆಲ್ಲದ ಉಪಯೋಗದಿಂದ ಸ್ತೂಲಕಾಯ ಕಡಿಮೆ ಮಾಡಬಹುದು ಎಂದರೆ ನಂಬಲು ಸಾಧ್ಯವೇ ಬನ್ನಿ ಈ ಲೇಖನದಿಂದ ಹೇಗೆ ಈ ಎರಡು ಪದಾರ್ಥ ಇಂದ ಸ್ತೂಲಕಾಯ ಕಡಿಮೆ ಆಗುವುದು ತಿಳಿಯೋಣ.

ದಿನ ರಾತ್ರಿ ಮಲುಗುವ ಮುಂಚೆ ನಾಲ್ಕು ಐದು ಒಣ ದ್ರಾಕ್ಷಿಯನ್ನು ಬೆಚ್ಚಗಿನ ನೀರಿನಲ್ಲಿ ನೆನೆ ಹಾಕಿ ಮುಂಜಾನೆ ಎದ್ದ ಮೇಲೆ ಒಂದು ಲೋಟ ನೀರಿಗೆ ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕರಗಿಸಿ ಆ ಮಿಶ್ರಣಕ್ಕೆ ನೆನೆಸಿದ ದ್ರಾಕ್ಷಿಯನ್ನು ಹಾಕಿ ಕುಡಿಯಿರಿ ಹೀಗೆ ದಿನನಿತ್ಯವೂ ಮಾಡುವುದರಿಂದ ನಮ್ಮ ದೇಹದಲ್ಲಿ ಚಯಪಚಯ ಕ್ರಿಯೆಗೆ ಉತ್ತೇಜಿಸಿ ದೇಹದಲ್ಲಿ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಹಾಗೆಯೇ ಒಣ ದ್ರಾಕ್ಷಿಯನ್ನು ಊಟದ ನಂತರ ಮೊಸರಿನಲ್ಲಿ ನೆನಸಿ ಸೇವನೆ ಮಾಡುವುದರಿಂದ ಕರುಳಿನ ಆರೋಗ್ಯ ಹೆಚ್ಚಿಸಿ ಜೀರ್ಣಕ್ರಿಯೆ ಗೆ ಸಹಾಯ ಮಾಡುತ್ತದೆ

ಸಾಮಾನ್ಯವಾಗಿ ಒಣ ದ್ರಾಕ್ಷಿ ಮತ್ತು ಬೆಲ್ಲವನ್ನು ಒಳ್ಳೆಯ ಆಹಾರ ಎಂದು ಇವು ಆರೋಗ್ಯದಲ್ಲಿ ಔಷಧಿಯಾಗಿ ಅನಾಧಿಕಾಲದಿಂದ ಪ್ರಸಿದ್ದಿ ಆಗಿದೆ. ಇವೆರಡರ ಮಿಶ್ರಣದ ಸೇವನೆ ಆರೋಗ್ಯದಲ್ಲಿ ಮೂಳೆಗಳ ಬಲಕ್ಕೆ ಸಹಾಯ ಮಾಡಿ ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆ ತಗ್ಗಿಸುತ್ತದೆ ಜೊತೆಗೆ ಚಯಾಪಚಯ ಕ್ರಿಯೆಗೆ ಸಹಾಯವಾಗುತ್ತದೆ ಹೀಗೆ ತೂಕವನ್ನು ಗಮನಾರ್ಹ ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಲ್ಲದಲ್ಲಿ ಮಗ್ನಿಷಿಯಂ ಪೊಟ್ಯಾಷಿಯಂ ಸೆಲೆನಿಯಮ್ ಕ್ಯಾಲಿಸಿಯಾಂ ಮ್ಯಾಂಗನೀಸ್ ಕಬ್ಬಿಣ ಮತ್ತು ಸತು ಹೇರಳವಾಗಿದ್ದು ಸಿಹಿಸಿಹಿ ಬೆಲ್ಲವು ಖನಿಜ ಮತ್ತು ಜೀವಸತ್ವ ಸಮ್ದೃದ್ದಿಯಾಗಿದೆ. ಕ್ಯಾಲೋರಿ ವಿಷಯಕ್ಕೆ ಬಂದ್ರೆ 28ಗ್ರಾಂ ಬೆಲ್ಲವು 38 ಕ್ಯಾಲೋರಿ ಹೊಂದಿರುತ್ತದೆ.ಬೆಲ್ಲದ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬಿದಂತೆ ಇದ್ದು ತೂಕವು ಹೆಚ್ಚು ಆಗುವುದನ್ನು ನಿಯಂತ್ರಿಸುತ್ತದೆ . ದ್ರಾಕ್ಷಿಯನ್ನು ಫೈಬರ್ ಅಂಶವು ಜಾಸ್ತಿ ಆಗಿದ್ದು ದೀರ್ಘಕಾಲಿಕ ನಿಮ್ಮನ್ನು ಪೂರ್ಣವಾಗಿ ಇರುವಂತೆ ಸಹಾಯಕಾರಿ. ಒಟ್ಟಾರೆ ಕ್ಯಾಲೋರಿ ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ

ನೈಸರ್ಗಿಕವಾಗಿ ಒಣ ದ್ರಾಕ್ಷಿ ಪೊಟ್ಯಾಷಿಯಂ ಕ್ಯಾಲ್ಸಿಯಂ ಕಬ್ಬಿಣ ಅಂತಹ ಪೋಷಕಾಂಶಗಳಿಂದ ಸಮೃದ್ಧಿಯಾಗಿದೆ ಇದರಿಂದ ಚಯಪಚಯ ಕ್ರಿಯೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತ ನಿಮ್ಮ ತೂಕ ಇಳಿಕೆಗೆ ಸಹಾಯವಾಗುತ್ತದೆ. ಆದರೆ ಒಣ ದ್ರಾಕ್ಷಿ ಬೆಲ್ಲವನ್ನು ಕ್ರಮಬದ್ದ ಸೇವನೆಯಿಂದ ತೂಕ ಇಳಿಕೆ ಸಾದ್ಯ. ಒಂದುವೇಳೆ ಅತಿಯಾದ ಸೇವನೆಯಿಂದ ನಿಮ್ಮ ತೂಕವು ಹೆಚ್ಚು ಆಗುವ ಸಾಧ್ಯತೆ ಜಾಸ್ತಿ. ಮಧುಮೇಹಿಗಳು ಇದುನ್ನು ಉಪಯೋಗಿಸುವ ಮೊದಲು ವೈದ್ಯರ ಸಲಹೆ ಅತ್ಯಗತ್ಯ. ಇದರ ಜೊತೆಗೆ ವ್ಯಾಯಾಮ ಮತ್ತು ಡಯೆಟ್ ಅಗತ್ಯ ಇಲ್ಲವಾದಲ್ಲಿ ನಿಮ್ಮ ಪ್ರಯತ್ನ ವಿಫಲವಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: