ತ್ವಚೆಯಲ್ಲಿರುವ ರಂದ್ರಗಳಲ್ಲಿ ಧೂಳು ಮತ್ತು ಬೆವರಿನಲ್ಲಿ ಇರುವಂತಹ ಉಪ್ಪಿನ ಅಂಶವು ಆ ರಂಧ್ರದಲ್ಲಿ ಕೂರುತ್ತಾ ಹೋದಂತೆ ಮುಖದಲ್ಲಿ ಪಿಂಪಲ್ಸ್ ಗಳು ಹೆಚ್ಚಾಗುತ್ತಿರುತ್ತದೆ, ಆದ್ದರಿಂದ ಆಚೆ ಹೋಗಿ ಬಂದಕೂಡಲೇ ಮುಖವನ್ನು ತೊಳೆದುಕೊಳ್ಳಿ.ಈಗ ಪಿಂಪಲ್ಸ್ ಗಳನ್ನು ಹೋಗಲಾಡಿಸಿ ಕೊಳ್ಳುವುದಕ್ಕೆ ಏನೆಲ್ಲಾ ಮಾಡಬೇಕು ಅನ್ನೋದನ್ನು ತಿಳಿಯೋಣ. ಇದಕ್ಕಾಗಿ ಮೂರು ಸ್ಟೆಪಗಳನ್ನು ಫಾಲೋ ಮಾಡಬೇಕು.ಮೊದಲನೆಯದಾಗಿ ಪ್ರೆಸ್ ಅನಂತರ ಸ್ಪಾಟ್ ಪ್ಲೇಸಮೆಂಟ್ ನಂತರ ಹೀಲಿಂಗ್.
ಪ್ರೆಸ್ ಸ್ಟೆಪ್ನಲ್ಲಿ ಮೊಡವೆಗಳು ತುಂಬಾ ದಪ್ಪವಾಗಿದ್ದಾರೆ ಅದರ ಸೈಜ್ ಅನ್ನು ಸಣ್ಣದಾಗಿ ಮಾಡುವುದಕ್ಕೆ ಏನು ಮಾಡಬೇಕು ಅನ್ನುವುದಾದರೆ ಮನೆಯಲ್ಲಿ ಇರುವಂತಹ ಐಸ್ಕ್ಯೂಬ್ ಗಳನ್ನು ತೆಗೆದುಕೊಂಡು ಪಿಂಪಲ್ ಆಗಿರುವಂತಹ ಜಾಗಕ್ಕೆ ಹಚ್ಚಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಐಸ್ ಕ್ಯೂಬ್ ಗಳು ತುಂಬಾನೇ ತಣ್ಣಗೆ ಇರುವುದರಿಂದ ಪಿಂಪಲ್ಗಳು ಹಿಟ್ ಆಗಿ ಇರುವುದರಿಂದ ಈ ಒಂದು ರಿಯಾಕ್ಷನ್ ನಿಂದ ಪಿಂಪಲ್ಗಳು ಸಣ್ಣಗಾಗುತ್ತವೆ. ನಂತರ ಸ್ಪಾಟ್ ರಿಪ್ಲೆಷ್ಮೆಂಟ್ ಅಂದರೆ ಪಿಂಪಲ್ಗಳನ್ನು ಒಡೆಯುವುದು ಅಥಾವ ಪಿಂಪಲ್ ಒಳಗಿನ ಕೆಟ್ಟ ಪದಾರ್ಥಗಳನ್ನು ತೆಗೆದು ಹಾಕುವುದು ಇದಕ್ಕಾಗಿ ಮಾಡಾಬೇಕಾಗಿರುವುದು ಈ ಕೆಳಗಿನಂತೆ ತಿಳಿಯೋಣ.
ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಪಿಂಪಲ್ ಆಗಿರುವಂತಹ ಜಾಗಕ್ಕೆ ಹಚ್ಚಬೇಕು ಈ ರೀತಿ ಮಾಡುವುದರಿಂದ ಪಿಂಪಲ್ ಒಳಗಿರುವ ಕೆಟ್ಟ ಅಂಶವು ಆಚೆ ಬರುತ್ತದೆ. B3 ಎಸೆನ್ಶಿಯಲ್ ಆಯಿಲ್ ಅನ್ನು ಒಂದು ಆಯಿಲ್ ಅನ್ನು ತೆಗೆದುಕೊಂಡು ಒಂದು ಹನಿ ಮಾತ್ರ ಪಿಂಪಲ್ ಆಗಿರುವಂತಹ ಜಾಗಕ್ಕೆ ಹಚ್ಚಿಕೊಳ್ಳಬೇಕು. ನಂತರ ಒಂದು ಕಾಟನ್ ಬಟ್ಟೆಯಿಂದ ಅದನ್ನು ಒರೆಸಬೇಕು. ಈ ರೀತಿ ಮಾಡುವುದರಿಂದ ಕೂಡ ಪಿಂಪಲ್ ಕರಗುತ್ತದೆ. ಇದರ ಬದಲು ಎಲ್ಲರ ಮನೆಯಲ್ಲಿಯೂ ಕೂಡ ಆಲೂ ಗಡ್ಡೆ ಇರುತ್ತದೆ. ಇದರಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಚೆಕ್ಕೆಯನ್ನು ಪುಡಿ ಮಾಡಿ ಬೆರೆಸಿ ಪಿಂಪಲ್ ಆಗಿರುವಂತಹ ಜಾಗಕ್ಕೆ ಹಚ್ಚುವುದರಿಂದ ಸುಲಭವಾಗಿ ಪಿಂಪಲ್ ಕರಗುತ್ತದೆ.
ಕಿತ್ತಳೆ ಹಣ್ಣಿನ ರಸವನ್ನು ತುಳಸಿ ಎಲೆಗೆ ಹಾಕಿ ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮಾಯವಾಗುತ್ತವೆ. ಮೊಡವೆ ಹೋದರು ಕಲೆಗಳು ಮಾಯವಾಗಿರುವುದಿಲ್ಲ, ಈ ಪಿಂಪಲ್ ಮಾಯಾ ಆಗಬೇಕು ಅಂದರೆ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಸ್ವಲ್ಪ ಅದಕ್ಕೆ ಅರಿಶಿಣವನ್ನು ಬೆರೆಸಿ ಮೊಡವೆಯ ಕಲೆಗಳು ಇರುವ ಜಾಗಕ್ಕೆ ಹಚ್ಚುವುದರಿಂದ ಕಲೆ ಮಾಯವಾಗುತ್ತದೆ.