12 ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. 12 ರಾಶಿಗಳಲ್ಲಿ ತುಲಾ ರಾಶಿಯು ಪ್ರಮುಖವಾಗಿದೆ. ತುಲಾ ರಾಶಿಯ ರಾಶಿ ಭವಿಷ್ಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗೃಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು ಒಂದು ವರ್ಷ ಬೇಕಾಗುತ್ತದೆ. ರಾಹು ಕೇತುಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು 18 ತಿಂಗಳು ಬೇಕು. ಶನಿ ದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪರಿವರ್ತನೆಯಾಗಲು ಎರಡುವರೆ ವರ್ಷ ಬೇಕಾಗುತ್ತದೆ. ಇಂದು ಮಿತ್ರನಾಗಿರುವವನು ನಾಳೆ ಶತ್ರು ಆಗುತ್ತಾನೆ, ಇಂದು ಶತ್ರು ಆದವನು ನಾಳೆ ಮಿತ್ರನಾಗುತ್ತಾನೆ ಇದಕ್ಕೆಲ್ಲ ಕಾರಣ ಗ್ರಹಗತಿ.
ತುಲಾ ರಾಶಿಯವರು ಪರೋಪಕಾರಿಗಳು, ಶ್ರಮ ಜೀವಿಗಳು, ವಿಚಾರವಂತರು ಆಗಿರುತ್ತಾರೆ. ತುಲಾ ರಾಶಿಯವರಿಗೆ ನವೆಂಬರ್ 2021 ರಿಂದ ಏಪ್ರಿಲ್ 2022 ರವರೆಗೆ ಗುರುಬಲ ಹೊಂದಿದ್ದಾರೆ ಇದರಿಂದ ಶುಭಫಲ ಸಿಗುತ್ತದೆ, ಸರ್ವಾಂಗೀಣ ಅಭಿವೃದ್ದಿ ಹೊಂದುತ್ತಾನೆ. ವಿವಾಹ ವಿಳಂಬವಾದವರಿಗೆ ವಿವಾಹವಾಗುತ್ತದೆ. ಮಕ್ಕಳಾಗದೆ ಇರುವವರಿಗೆ ಪುತ್ರ ಪ್ರಾಪ್ತಿಯಾಗುತ್ತದೆ. ಹೊಸ ಉದ್ಯೋಗವನ್ನು ಆರಂಭಿಸಿ ಅಭಿವೃದ್ಧಿ ಕಾಣುತ್ತದೆ. ಶನಿ ಗ್ರಹ ಚಲನೆಯಿಂದ ತುಲಾ ರಾಶಿಯವರಿಗೆ ವಿವಾಹ ವಿಳಂಬವಾಗುತ್ತದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗುತ್ತದೆ.
ಪ್ರೇಮ ವಿವಾಹ ಆಗುವವರೆಗೆ ಅಡತಡೆ ಉಂಟಾಗುತ್ತದೆ. ಹನುಮಾನ್ ಚಾಲೀಸಾ ಓದಬೇಕು ಇದರಿಂದ ಒಳ್ಳೆಯದಾಗುತ್ತದೆ. ತುಲಾ ರಾಶಿಯವರಿಗೆ ವರಮಾನ ಹೆಚ್ಚಾಗುತ್ತದೆ. ರೈತರಿಗೆ ವ್ಯವಸಾಯದ ಮೂಲಕ ಹಣ ಸಂಪಾದನೆ ಆಗುತ್ತದೆ. ಫ್ಲ್ಯಾಟ್ ಖರೀದಿ, ಮನೆ ಕಟ್ಟುವ ಕೆಲಸ ಮಾಡುವುದಿದ್ದರೆ ಒಳ್ಳೆಯದು. ತುಲಾ ರಾಶಿಯವರು ಈ ಸಮಯದಲ್ಲಿ ಕಡಿಮೆ ಬಂಡವಾಳ ಹಾಕಿ ಹೆಚ್ಚಿನ ಲಾಭ ಗಳಿಸಬಹುದು. ಈ ರಾಶಿಯವರು ರಾಹು ಕೇತು ಶಾಂತಿ ಪೂಜೆಯನ್ನು ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ತುಲಾ ರಾಶಿಯವರಿಗೆ ತಿಳಿಸಿ.