ನಿಮಗೆ ಪ್ರೀತಿಸಿ ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಆಸೆಯಿರಬಹುದು. ಆಸೆ ಎನ್ನುವುದು ಮನುಷ್ಯನ ಸಹಜ ಸ್ವಭಾವವಾಗಿದೆ. ತಾನು ಪ್ರೀತಿಸಿದವರನ್ನು ಸಂಗಾತಿಯಾಗಿ ಪಡೆಯಬೇಕು ಎನ್ನುವುದು ಎಷ್ಟೋ ಜನರ ಹಂಬಲವಾಗಿರುತ್ತದೆ. ಆದರೆ ಕೆಲವರಿಗೆ ಅವರು ಪ್ರೀತಿಸಿದವರೆ ಸಂಗಾತಿಗಳಾಗಿ ಸಿಕ್ಕಿದರೆ, ಇನ್ನು ಹಲವರಿಗೆ ಅಂತಹ ಯೋಗ ಬಂದಿರುವುದಿಲ್ಲ. ಯಾರಿಗೆ ಅಂತಹ ಯೋಗ ಸಿಗುತ್ತದೆ ಎನ್ನುವುದು ಗೊತ್ತೆ ನಿಮಗೆ? ನೀವು ಯಾರನ್ನಾದರೂ ಪ್ರೀತಿಸುವ ಮೊದಲೆ ಈ ವಿಷಯ ತಿಳಿದುಕೊಂಡಿದ್ದರೆ, ಮುಂದೆ ಉಪಯೋಗ ಆಗುತ್ತದೆ.
ಹುಟ್ಟಿದ ದಿನಾಂಕ ಸಹ ಪ್ರೇಮ ವಿವಾಹಕ್ಕೆ ಸಹಕಾರಿಯಾಗಿರುತ್ತದೆ. ಜನ್ಮ ದಿನಾಂಕ ಗೊತ್ತಿದ್ದರೆ ಸಾಕು, ನೀವು ಯಾವ ರೀತಿಯಲ್ಲಿ ವಿವಾಹ ಆಗಲಿದ್ದಿರಿ ಎನ್ನುವುದನ್ನು ತಿಳಿಯಬಹುದು. ಗಂಡ ಮತ್ತು ಹೆಣ್ಣನ್ನು ಒಟ್ಟಿಗೆ ಬದುಕುವಂತೆ ಮಾಡುವ ವಿವಾಹ ಪದ್ಧತಿಯು ಬಹಳಷ್ಟು ಕೌತುಕಗಳನ್ನು ಒಳಗೊಂಡಂತಹ ಪದ್ಧತಿಯಾಗಿದೆ.
ವೈವಾಹಿಕ ಜೀವನ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಹೊಸ ಉತ್ಸಾಹವನ್ನು ತರುವಂತದ್ದಾಗಿದೆ. ಇದರಿಂದಾಗಿ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಹಾಗೂ ಮಾನಸಿಕವಾಗಿ ಮನುಷ್ಯನ ಬೆಳವಣಿಗೆಗೆ ವಿವಾಹವೆನ್ನುವುದು ಬಹು ಮುಖ್ಯವಾಗಿದೆ.
ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕಕ್ಕೆ ಬಹಳ ಮಹತ್ವವಿದೆ. ಅದರ ಆಧಾರದ ಮೇಲೆಯೆ ಜೀವನದ ಆಗು ಹೋಗುಗಳನ್ನು ಸಂಖ್ಯಾಶಾಸ್ತ್ರಜ್ಞರು ತಿಳಿಸುತ್ತಾರೆ. ಅಂತೆಯೇ ನಿಮ್ಮ ಹುಟ್ಟಿದ ದಿನಾಂಕವು 6,15 ಅಥವಾ 24 ಆಗಿದ್ದರೆ ನಿಮ್ಮ ಸಂಖ್ಯೆಯು 6 ಆಗುತ್ತದೆ. ನಿಮ್ಮ ಜನ್ಮ ದಿನಾಂಕವು 2,11, 20, 29 ಆಗಿದ್ದರೆ ನಿಮ್ಮ ಸಂಖ್ಯೆಯು 2 ಆಗಿರುತ್ತದೆ. ಇದೇ ರೀತಿ ನೀವು ನಿಮ್ಮ ಜನಗಮ ದಿನಾಂಕವನ್ನು ಲೆಕ್ಕ ಹಾಕಬಹುದು. ಹಾಗೆಯೆ ಇದನ್ನು ಆಧಾರವಾಗಿ ಇಟ್ಟುಕೊಂಡು ವಿವಾಹ ನಿಶ್ಚಯ ಮಾಡುವುದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ.
1 ಸಂಖ್ಯೆಯು ಸೂರ್ಯನನ್ನು ಪ್ರತಿನಿಧಿಸುತ್ತದೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಇವರು ಬೇರೆಯವರ ಜೊತೆ ಯಾವುದೇ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇವರು ಅಂದುಕೊಂಡ ವಿಷಯಗಳು ಅಂದುಕೊಂಡ ಹಾಗೆಯೆ ನಡೆಯಬೇಕು ಎಂದು ಬಯಸುತ್ತಾರೆ. ಹಾಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದು ಇವರಿಗೆ ತುಸು ಕಷ್ಟದ ಕೆಲಸವಾಗಿರುತ್ತದೆ. ಇವರು ಬಹಳ ನಾಚಿಕೆಯ ಸ್ವಭಾವದ ಜನರಾಗಿರುವುದರಿಂದ, ತಮ್ಮ ಪ್ರೀತಿಯನ್ನು ಬೇರೆಯವರ ಮುಂದೆ ಹೇಳಿಕೊಳ್ಳಲು ಹೋಗುವುದಿಲ್ಲ.
ಸಂಖ್ಯೆ 2ನ್ನು ಚಂದ್ರನೆಂದು ಕರೆಯುತ್ತಾರೆ. ಇವರ ಅಧಿಪತಿಯಾದ ಚಂದ್ರನು ಮನಕಾರಕನಾಗಿದ್ದಾನೆ. ಹಾಗಾಗಿ ಇವರು ಯಾವುದೇ ಸಣ್ಣ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮನಸ್ಸಿನಿಂದ ಯೋಚಿಸುತ್ತಾರೆ. ಇವರಿಗೆ ಬುದ್ಧಿ ಗಿಂತ ಮನಸ್ಸಿನ ಮಾತು ಹೆಚ್ಚಾಗಿರುತ್ತದೆ. ಇವರು ಭಾವನಾತ್ಮಕ ಜೀವಿಗಳಾದ್ದರಿಂದ ಇವರಿಗೆ ಲವ್ ಮ್ಯಾರೆಜ್ ಆಗುತ್ತದೆ. ಸಂಖ್ಯೆ 3 ಗುರುವಿನ ಸಂಖ್ಯೆಯಾಗಿದೆ. ಇವರು ಬಹಳ ಪ್ರಾಕ್ಟಿಕಲ್ ಜೀವನವನ್ನು ನಡೆಸುತ್ತಾರೆ. ಇವರಿಗೆ ಪ್ರೀತಿಯಾದರೆ ಅದನ್ನು ಮದುವೆಯ ತನಕ ಕೊಂಡೊಯ್ಯದೆ ಬಿಡುವುದಿಲ್ಲ. ಆದರೆ ಪ್ರೀತಿಸುವ ಮುನ್ನ ಅದರ ಸಾಧಕ ಬಾಧಕಗಳನ್ನು ಚೆನ್ನಾಗಿ ಯೋಚಿಸಿಯೆ ಮುಂದುವರೆದಿರುತ್ತಾರೆ.
ಸಂಖ್ಯೆ 4ರ ಅಧಿಪತಿ ರಾಹುವಾಗಿದ್ದಾನೆ. ಆದ್ದರಿಂದ ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿಸುತ್ತಾರೆ. ಇವರು ಕೇವಲ ಪ್ರೀತಿಸುತ್ತಾರೆಯೆ ಹೊರತು ಪ್ರೇಮ ವಿವಾಹದ ಬಗ್ಗೆ ಯೋಚಿಸಿರುವುದಿಲ್ಲ. ಸಂಖ್ಯೆ 5 ಬುಧನ ಸ್ಥಾನವಾಗಿದೆ. ಇವರು ಪ್ರೀತಿಗಿಂತ ಹೆಚ್ಚಾಗಿ ಮನೆಯಲ್ಲಿ ನೋಡಿದ ಸಂಗಾತಿಯೊಡನೆ ವಿವಾಹ ಆಗಲು ಬಯಸುತ್ತಾರೆ. ಒಂದು ವೇಳೆ ಪ್ರೇಮವಿವಾಹ ಆಗುವ ಪ್ರಸಂಗ ಬಂದರು ಸಹ ಮನೆಯವರ ಒಪ್ಪಿಗೆ ಪಡೆದು ಮುಂದುವರೆಯುತ್ತಾರೆ. ಇನ್ನು ಪ್ರೇಮ ವಿವಾಹವನ್ನೇ ಆಗುವ ಸಂಖ್ಯೆಯವರೆಂದರೆ 6. ಶುಕ್ರನು ಇದರ ಅಧಿಪತಿಯಾಗಿದ್ದರಿಂದ ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದಿರುತ್ತಾರೆ.
7ನೇ ಸಂಖ್ಯೆ ಕೇತುವಿನದಾಗಿದೆ. ಇವರು ಸ್ವಲ್ಪ ಸಂಕೋಚ ಸ್ವಭಾವದ ಜನರಾಗಿರುತ್ತಾರೆ. ಇವರು ಹೆಚ್ಚು ಚಟುವಟಿಕೆಯಿಂದ ಕೂಡಿದ ಮನುಷ್ಯರಾಗಿರುತ್ತಾರೆ. ಆದಾಗ್ಯೂ ತಮ್ಮ ಸಂಕೋಚ ಸ್ವಭಾವದಿಂದಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಹೋಗುವುದಿಲ್ಲ. ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ. 8 ನೇ ಸಂಖ್ಯೆಗೆ ಶನಿದೇವನು ಅಧಿಪತಿಯಾಗಿದ್ದಾನೆ. ಈ ಸಂಖ್ಯೆಯವರು ಪ್ರೇಮ ವಿವಾಹವಾಗುವುದು ಕಡಿಮೆ. ಒಂದು ವೇಳೆ ಪ್ರೀತಿಸಿದ್ದೆ ಆದಲ್ಲಿ ಅದನ್ನು ಉಳಿಸಿಕೊಳ್ಳುತ್ತಾರೆ. ಸಂಖ್ಯೆ 9 ಮಂಗಳನ ಸ್ಥಾನವಾಗಿದ್ದು, ಇವರು ಮನೆಯವರಿಗೆ ಹೆಚ್ಚು ಅಟ್ಯಾಚ್ ಆಗಿರುತ್ತಾರೆ. ಹಾಗಾಗಿ ಇವರು ಪ್ರೇಮ ವಿವಾಹ ಆಗುವುದು ಕಡಿಮೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.