ಮನುಷ್ಯನ ಆರೋಗ್ಯನ ಚೆನ್ನಾಗಿರಬೇಕು ಅಂದ್ರೆ ಅವರು ಆರೋಗ್ಯಕರ ತಿಂಡಿ ತಿನಿಸು ತಿನ್ನಬೇಕು. ಆ ತಿಂಡಿ ತಿನ್ನುವ ಜಾಗ ಮತ್ತು ದಿಕ್ಕು ಕೂಡ ಉತ್ತಮವಾಗಿರಬೇಕು. ಹಾಗಾದ್ರೆ ಬನ್ನಿ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ
ಪೌಷ್ಠಿಕ ಆಹಾರ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದರೆ ಉತ್ತಮ ರುಚಿಕರ ಆಹಾರ ಮಾತ್ರ ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಗೆ ಕೆಲವು ದಿಕ್ಕುಗಳನ್ನು ವಿವರಿಸಲಾಗಿದೆ. ಇದರ ಅನುಸಾರವಾಗಿ ಊಟ ಮಾಡಿದರೆ ಆರೋಗ್ಯ ಮತ್ತು ದೇಹದ ಮೇಲೆ ಅನುಕೂಲಕರ ಪರಿಣಾಮ ಬೀರಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ದೇಹ, ಆರೋಗ್ಯಕ್ಕೆ ಎರಡಕ್ಕೂ ಪ್ರಯೋಜನ
ವಾಸ್ತು ಶಾಸ್ತ್ರದ ಪ್ರಕಾರ ಆ ದಿಕ್ಕುಗಳು ದೇವತೆಗಳು ಮತ್ತು ಶಕ್ತಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಈ ಆಧಾರದ ಮೇಲೆ ತಿನ್ನುವಾಗ ದಿಕ್ಕಕ್ಕೆ ಅನುಗುಣವಾಗಿ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಯಾವ ದಿಕ್ಕಿನಲ್ಲಿ ಆಹಾರವನ್ನು ಸೇವಿಸಿದರೆ ಒಳಿತು ಎಂಬ ಬಗ್ಗೆ ಕೂಡ ಅರಿವಿರಬೇಕು ಈ ಕಾರಣಕ್ಕಾಗಿ, ವಾಸ್ತು ಶಾಸ್ತ್ರದಲ್ಲಿ ಅಡುಗೆಮನೆ ಮತ್ತು ಊಟದ ಕೋಣೆಗೆ ನಿರ್ದೇಶನವನ್ನು ಸಹ ನೀಡಲಾಗಿದೆ.
ಊಟದ ಮನೆ ಪಶ್ಚಿಮದಲ್ಲಿದ್ದರೆ ಒಳ್ಳೆಯದು. ಅದು ಇಲ್ಲದಿದ್ದರೆ ನೀವು ಅದನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬಹುದು ಪೂರ್ವಕ್ಕೆ ಮುಖ ಮಾಡಿ ಊಟ ಮಾಡುವುದರಿಂದ ಆಯಸ್ಸು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಅನಾರೋಗ್ಯ ಸಮಸ್ಯೆ ಸಾವಿನ ಭಯವಿದ್ದರೆ ಪೂರ್ವ ದಿಕ್ಕಿಗೆ ಮುಖ ಮಾಡಿ ಊಟ ಮಾಡಲು ಹೇಳಿ. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಪದೇ ಪದೇ ಆರೋಗ್ಯ ಕೆಡುತ್ತಿದ್ದರೆ ಅಂಥವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಊಟ ಮಾಡಿದೆ ಉತ್ತಮ.
ಹಣಕಾಸಿನ ಸಮಸ್ಯೆ, ಸಾಲ ಬಾಧೆ ಇದ್ದರೆ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬೇಕು. ಮನೆಯ ಒಡೆಯ ಉತ್ತರಕ್ಕೆ ಮುಖ ಮಾಡಿ ಊಟ ಮಾಡಿದರೆ ಆರ್ಥಿಕ ಸಮಸ್ಯೆ ಉತ್ತಮವಾಗಿರುತ್ತದೆ. ಇನ್ನು ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡುವುದು ನಿಷಿದ್ಧ. ಈ ದಿಕ್ಕಿಗೆ ಕುಳಿತು ಊಟ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಕಲಹ ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುವ ಕಾರಣಕ್ಕೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು ನಿಷಿದ್ಧ. ನೀವು ದಕ್ಷಿಣ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬಾರದು.
ಒಂದು ವೇಳೆ ನೀವು ಆ ದಿಕ್ಕಿನಲ್ಲಿ ಮುಖ ಮಾಡಿ ಊಟ ಸೇವಿಸುತ್ತಿದ್ದರೆ ಅದನ್ನುಬದಲಿಸಿ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಯಮ ಸಾವಿನ ದೇವರು. ದಕ್ಷಿಣಾಭಿಮುಖವಾಗಿ ಆಹಾರ ಸೇವಿಸುವುದರಿಂದ ಪ್ರಾಣಹಾನಿಯಾಗುತ್ತದೆ. ಇಲ್ಲವೇ, ನೀವು ಅನೇಕ ರೀತಿಯ ಸಮಸ್ಯೆ ಕಾಡಬಹುದು