ಮಕರ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ?

ಜ್ಯೋತಿಷ್ಯ

ಮಕರ ರಾಶಿ ಅಧಿಪತಿ ಶನಿ ಮಹಾರಾಜ ಮಕರ ರಾಶಿಯವರು ಮಕರ ರಾಶಿಯವರನ್ನು ಮದುವೆಯಾಗಬಹುದು ಮತ್ತು ಮಕರ ರಾಶಿಯವರು ಕುಂಭ ರಾಶಿಯವರನ್ನು ಮದುವೆ ಯಾಗಬಹುದು ಏಕೆಂದರೆ ಎರಡು ರಾಶಿಯು ಸಮೀಪವಿದೆ ಮತ್ತು ಇಲ್ಲಿ ಎರಡರ ಅಧಿಪತಿಯು ಶನಿ ಆಗಿರುವುದರಿಂದ ಅಲ್ಲಿ ಒಂದು ಸೂಕ್ಷ್ಮವಾದ ಹೊಂದಾಣಿಕೆಯನ್ನು ನಿರೀಕ್ಷಿಸಬಹುದು.

ಮಕರ ರಾಶಿಗೆ ಮೀನ ರಾಶಿ ಆದರೆ ಮೀನ ರಾಶಿಯ ಅಧಿಪತಿ ಗುರು ಮತ್ತು ಮಕರ ರಾಶಿಯ ಅಧಿಪತಿ ಶನಿ ಮಹಾತ್ಮ ಗುರು ಮತ್ತು ಶನಿಯ ಮಧ್ಯೆ ಒಳ್ಳೆಯ ಗೌರವವಿದೆ ಮಕರ ರಾಶಿ ಹಾಗೂ ಮೀನ ರಾಶಿಯವರನ್ನು ಮದುವೆ ಮಾಡಿದರೆ ತುಂಬಾ ಒಳ್ಳೆಯದು ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ.

ಮಕರ ರಾಶಿಯವರಿಗೆ ಮೇಷ ರಾಶಿಯವರೊಂದಿಗೆ ಮದುವೆಯಾದರೆ ದಾಂಪತ್ಯ ಜೀವನ ಅಷ್ಟು ಚೆನ್ನಾಗಿ ಇರುವುದಿಲ್ಲ ಏಕೆಂದರೆ ಮೇಷ ರಾಶಿ ಅಧಿಪತಿ, ಕುಜ ಹಾಗೂ ಮಕರ ರಾಶಿ ಅಧಿಪತಿ ಶನಿ ಇವರಿಬ್ಬರೂ ಪರಮ ವೈರಿಗಳು ಮೇಷ ಹಾಗೂ ಮಕರ ರಾಶಿಯವರ ನಡುವೆ ಸಾಮರಸ್ಯ ಬರುವಂತದ್ದು ಬಹಳ ಕಷ್ಟ.

ಮಕರ ರಾಶಿಗೆ ವೃಷಭ ರಾಶಿಯವರಾದರೆ ಇಲ್ಲಿ ಶುಕ್ರ ಮತ್ತು ಶನಿ ಅಧಿಪತ್ಯ ಆಗಿರುವುದರಿಂದ ಮದುವೆಯಾಗಬಹುದು ನಿಮ್ಮ ರಾಶಿಯಿಂದ ವರನ ರಾಶಿಗೆ 5 ಅಥವಾ 9ನೇ ಸ್ಥಾನವಾಗಿದ್ದರೆ ಅಲ್ಲಿ ಹೆಚ್ಚಿನ ಗೊಂದಲ ವಿರುವುದಿಲ್ಲ ಎಂದು ತಿಳಿದುಕೊಳ್ಳಬೇಕು ಮಕರ ರಾಶಿಯವರು ವೃಷಭ ರಾಶಿಯವರನ್ನು ಮದುವೆಯಾದರೆ ತುಂಬಾ ಉತ್ತಮವಾಗಿರುತ್ತಾರೆ, ಶುಕ್ರ ಗ್ರಹವು ಶನಿ ಮಹಾತ್ಮನನ್ನು ಎಷ್ಟು ಗೌರವದಿಂದ ನೋಡುತ್ತಾನೆಯೋ ಹಾಗೆ ಶನಿ ಮಹತ್ವನೂ ಶುಕ್ರನನ್ನು ಬಾರಿ ಮಿತ್ರನಾಗಿ ನೋಡುತ್ತಾನೆ.

ಮಕರ ರಾಶಿಯವರಿಗೆ ಮಿಥುನ ರಾಶಿಯವರು ಹೇಗೆಂದರೆ ಇಲ್ಲಿ ಮಿತ್ರ ಶಡಶ್ಛಕ ಇರುತ್ತದೆ ಮದುವೆಯಾಗಬಹುದು ಚಂದ್ರನಿಗೆ ಯಾರು ವೈರಿಗಳು ಇಲ್ಲದಿದ್ದರೂ ಕೂಡ ಶನಿ ಮಹಾತ್ಮ ಚಂದ್ರನನ್ನು ಒಪ್ಪುವುದಿಲ್ಲ ಹಾಗಾಗಿ ಮಕರ ರಾಶಿಗೆ ಕರ್ಕಾಟಕ ರಾಶಿ ಅವರು ಮದುವೆ ಆದರೆ ಗೊಂದಲ ಉಂಟಾಗಬಹುದು ಪರಸ್ಪರ ರಲ್ಲಿ ಮಿತ್ರತ್ವಕ್ಕೆ ಕೊರತೆ ಉಂಟಾಗಬಹುದು ಮತ್ತು ಸಂಸಾರದಲ್ಲಿ ತೊಂದರೆಯಾಗುವ ಸಾಧ್ಯತೆಗಳು ಇರುತ್ತದೆ ಅದಕ್ಕಾಗಿ ಮಕರ ರಾಶಿಯವರು ಕರ್ಕಾಟಕ ರಾಶಿಯವರನ್ನು ಮದುವೆಯಾಗುವುದು ಒಳ್ಳೆಯದಲ್ಲ.

ಮಕರ ರಾಶಿಗೆ ಸಿಂಹ ರಾಶಿಯವರು ಹೊಂದಾಣಿಕೆಯಾಗೋದಿಲ್ಲ ಏಕೆಂದರೆ, ಸಿಂಹ ರಾಶಿಯ ಅಧಿಪತಿ ಸೂರ್ಯ ಮತ್ತು ಮಕರ ರಾಶಿಯಾಧಿಪತಿ ಶನಿ ಪರಮ ವೈರಿಗಳು ಇದನ್ನು ಕ್ರೂರ ಷಡಚಕ ಎನ್ನುತ್ತಾರೆ ಮಕರ ರಾಶಿಯವರಿಗೆ ಸಿಂಹ ರಾಶಿಯವರನ್ನು ಮದುವೆಯಾದರೆ ಸ್ವಲ್ಪ ಕಷ್ಟವಾಗುತ್ತದೆ. ಮಕರ ರಾಶಿಯವರಿಗೆ ಕನ್ಯಾರಾಶಿ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ ಅಲ್ಲಿ ಬುಧ ಮತ್ತು ಶನಿಯ ಮಿತ್ರತ್ವ ಒಳ್ಳೆಯದಿರುವುದರಿಂದ ದಾಂಪತ್ಯ ಜೀವನ ಚೆನ್ನಾಗಿ ಇರುತ್ತದೆ.

ಮಕರ ರಾಶಿಗೆ ತುಲಾ ರಾಶಿ ಹೇಗೆಂದರೆ ಶುಕ್ರ ಮತ್ತು ಶನಿಮಹಾತ್ಮ ಮಿತ್ರರಾಗಿರುವುದರಿಂದ ಒಳ್ಳೆಯ ಹೊಂದಾಣಿಕೆ ಆಗುವ ಸಾಧ್ಯತೆಗಳಿವೆ. ಮಕರ ರಾಶಿಯವರಿಗೆ ವೃಶ್ಚಿಕ ರಾಶಿ ಒಳ್ಳೆಯದಲ್ಲ ಅಷ್ಟು ಹೊಂದಾಣಿಕೆ ಇರುವುದಿಲ್ಲ. ಅಂತೆಯೇ ಮಕರ ರಾಶಿಯವರಿಗೆ ಧನು ರಾಶಿ ಆದರೆ ಇಲ್ಲಿ ಗುರು ಮತ್ತು ಶನಿಯು ಪರಸ್ಪರ ಗೌರವದಿಂದ ವರ್ತಿಸುತ್ತಾರೆ ಮಕರ ರಾಶಿಗೆ ಧನುರಾಶಿಯವರು ಕೂಡ ಮದುವೆಯಾಗಬಹುದು.

Leave a Reply

Your email address will not be published. Required fields are marked *