ನಿಮ್ಮ ಉಗುರಿನಲ್ಲಿ ಈ ರೀತಿ ಇದೆಯೇ? ಇದರ ಅರ್ಥ ಏನು ಗೊತ್ತಾ, ತಿಳಿದುಕೊಳ್ಳಿ

ಜ್ಯೋತಿಷ್ಯ

ಚಿಕ್ಕಂದಿನಲ್ಲಿ ಉಗುರಿನಲ್ಲಿ ಬಿಳಿ ಚುಕ್ಕೆ ಮೂಡಿದರೆ ಹೊಸ ಬಟ್ಟೆ ಸಿಗುತ್ತದೆ ಎಂದು ನಂಬುತ್ತಿದ್ದರು. ಆದರೆ ಅದರ ನಿಜವಾದ ಅರ್ಥವೇನು? ಉಗುರುಗಳ ಮೇಲೆ ಮೂಡುವ ಬಿಳಿ ಚುಕ್ಕೆಗಳ ಆಕಾರದ ಮೇಲೆ ಅವರ ಒಳಿತು ಕೆಡಕುಗಳನ್ನು ವರ್ಗೀಕರಿಸಲಾಗುತ್ತದೆ. ಉಗುರುಗಳ ಮೇಲೆ ಮೂಡುವ ಬಿಳಿ ಚುಕ್ಕೆಗಳು ಅನಿಮಿಯಾ ಅಥವಾ ರಕ್ತಹೀನತೆಯ ಲಕ್ಷಣ ಎಂದು ಹೇಳಲಾಗುತ್ತದೆ.

ಆದರೂ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಈ ರೀತಿ ಉಗುರುಗಳಲ್ಲಿ ಮೂಡುವ ಬಿಳಿ ಚುಕ್ಕೆಗಳು ಬರುವ ದಿನಗಳ ಮುನ್ಸೂಚನೆಯಾಗಿರುತ್ತದೆ. ಅನಿರೀಕ್ಷಿತ ಧನ ಪ್ರಾಪ್ತಿ, ಹಣ ಸಂಪಾದನೆ, ಭವಿಷ್ಯದ ದಿನಗಳನ್ನು ಈ ಚುಕ್ಕಿಗಳನ್ನು ನೋಡಿ ಹೇಳಬಹುದಾಗಿದೆ. ನಿಮ್ಮ ಉಗುರುಗಳಲ್ಲೂ ಬಿಳಿ ಚುಕ್ಕೆ ಮೂಡಿವೆಯಾ? ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅವುಗಳ ಅರ್ಥ ಏನೆಂಬುದನ್ನು ತಿಳಿಯೋಣ ಬನ್ನಿ.

ಹೆಬ್ಬೆರಳಿನ ಮೇಲೆ ಬಿಳಿ ಚುಕ್ಕಿ ಮೂಡುವುದರ ಹಿಂದೆ ಅನೇಕ ಅರ್ಥಗಳಿವೆ. ಸಮುದ್ರ ಶಾಸ್ತ್ರದ ಪ್ರಕಾರ ಹೆಬ್ಬೆರಳಿನ ಉಗುರಿನ ಮೇಲೆ ಚುಕ್ಕಿ ಕಾಣಿಸಿಕೊಳ್ಳುವುದು ಬೆಳವಣಿಗೆಯ ಲಕ್ಷಣ. ನಿಮ್ಮ ಉದ್ಯಮದಲ್ಲಿ ನೀವು ಯಶಸ್ವಿಯಾಗುತ್ತೀರಿ. ಸದ್ಯದಲ್ಲೇ ಲಾಭ ದೊರೆಯಲಿದೆ. ಕುದುರೆ ವ್ಯಾಪಾರದಿಂದ ನಿಮ್ಮ ಅದೃಷ್ಟ ಖುಲಾಯಿಸಬಹುದು. ನೀವು ಸ್ನೇಹಿತ/ಸ್ನೇಹಿತೆ ಎಂದುಕೊಂಡಿರುವವರೊಂದಿಗಿನ ಸಂಬಂಧ ಪ್ರೀತಿಯಾಗಿ ಬದಲಾಗಬಹುದು. ಯಾರೋ ನಿಮಗೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಲು ಕಾದಿರಬಹುದು.

ಈ ಗುರುತು ನಿಮ್ಮ ಅದೃಷ್ಟದ ದಿನಗಳ ಮುನ್ಸೂಚನೆಯಾಗಿದೆ. ಇಂಥಹ ಗುರುತು ಇರುವುದೂ ಕೂಡ ನಿಮ್ಮ ಹಸ್ತರೇಖೆಯಲ್ಲಿ ಅದೃಷ್ಟ ತರುತ್ತದೆ. ತೋರು ಬೆರಳಿನ ಉಗುರಿನ ಮೇಲೆ ಬಿಳಿ ಚುಕ್ಕೆ ಇರುವುದೂ ಕೂಡ ಅದೃಷ್ಟದ ಸಂಕೇತವಾಗಿದೆ. ಇದು ಉದ್ಯಮ ಹಾಗೂ ಕೆಲಸದಲ್ಲಿ ಅಭಿವೃದ್ಧಿಯ ಮುನ್ಸೂಚನೆಯಾಗಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿದರೂ ಯಶಸ್ವಿಯಾಗುತ್ತೀರಿ. ಒಂದು ಅರ್ಥದಲ್ಲಿ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಉದ್ಯಮದಲ್ಲಿ ನೀವು ಪ್ರಗತಿ ಕಾಣುತ್ತೀರಿ, ಜೊತೆಗೆ ನಿಮ್ಮ ಕೆಲಸದಲ್ಲೂ ಪ್ರಮೋಷನ್ ಸಿಗುವ ಸಾಧ್ಯತೆ ಇರುತ್ತದೆ. ಆದರೆ ಗ್ರಹಗತಿಗಳ ವಕ್ರದೃಷ್ಟಿಯಿಂದ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ ನೀವು ಗ್ರಹ ಶಾಂತಿ ಮಾಡಿಸಬೇಕೆಂದು ಹೇಳಲಾಗುತ್ತದೆ.

ನಿಮ್ಮ ಕೈಯ ಮಧ್ಯದ ಬೆರಳಿನಲ್ಲಿ ಬಿಳಿ ಚುಕ್ಕೆ ಮೂಡುವುದೂ ಸಹ ಶುಭ ಸಂಕೇತವಾಗಿದೆ. ಇದು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸುತ್ತದೆ. ಇಂತಹ ವ್ಯಕ್ತಿಗಳಿಗೆ ಪ್ರಯಾಣದಿಂದ ಲಾಭ ಇರುತ್ತದೆ. ಅವರು ಎಲ್ಲೆಲ್ಲಿ ಓಡಾಡುತ್ತಾರೋ ಅಲ್ಲಿ ಧನ ಪ್ರಾಪ್ತಿಯಾಗುತ್ತದೆ. ಉದ್ಯಮಕ್ಕೆ ಸಂಬಂಧಿಸಿದ ಪ್ರಯಾಣಗಳಲ್ಲಿ ಅಥವಾ ನಿಮ್ಮ ಕಂಪೆನಿ ಯಾವುದಾದರೂ ಊರಿಗೆ ಕಳಿಸಿದ್ದಲ್ಲಿ ಅಲ್ಲಿ ಧನಾತ್ಮಕ ಪರಿಣಾಮಗಳು ಉಂಟಾಗುತ್ತದೆ. ಧನಲಾಭ, ಪ್ರಮೋಶನ್, ಸಂಬಳ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಆದರೂ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಏಕೆಂದರೆ ಮಧ್ಯದ ಬೆರಳಿನ ಮೇಲೆ ಮೂಡುವ ಚುಕ್ಕೆಯು ನಿಮ್ಮ ಶತ್ರುಗಳಿಂದ ಆಗುವ ಸಮಸ್ಯೆಯ ಮುನ್ಸೂಚನೆಯೂ ಹೌದು. ಸ್ವಲ್ಪ ಹೆಚ್ಚು ಕಡಿಮೆಯಾದರೆ ನೀವು ಉದ್ಯಮದಲ್ಲಿ ನಷ್ಟ ಅನುಭವಿಸಬಹುದು ಅಥವಾ ಕೆಲಸ ಕಳೆದುಕೊಳ್ಳಬಹುದು. ಕಿರುಬೆರಳಿನ ಮೂಡುವ ಬಿಳಿ ಚುಕ್ಕೆಯನ್ನು ಉಜ್ವಲ ಭವಿಷ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಉದ್ಯಮದಲ್ಲಿ ಲಾಭವನ್ನು ಕಾಣುತ್ತಾರೆ. ಯಾವುದೇ ಉದ್ಯಮಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ವಿಯಾಗುತ್ತಾರೆ.

ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಸಾಧನೆ ಮಾಡಲಿದ್ದೀರಿ. ನೀವು ಕೆಲವು ಕಾರಣಗಳಿಂದ ಪ್ರಯಾಣ ಮಾಡುವ ಅವಕಾಶಗಳು ಲಭ್ಯವಾಗುತ್ತದೆ. ಈ ಪ್ರಯಾಣದಿಂದ ನಿಮಗೆ ಲಾಭವಾಗಬಹುದು. ಉಂಗುರದ ಬೆರಳಿನ ಉಗುರಿನಲ್ಲಿ ಬಿಳಿ ಚುಕ್ಕೆಗಳು ಮೂಡುವುದೂ ಕೂಡ ಅದೃಷ್ಟದ ಸಂಕೇತ. ಇಂತಹ ಗುರುತುಗಳು ಉಂಗುರದ ಬೆರಳಿನಲ್ಲಿ ಮೂಡಿದರೆ ಸಮಾಜದಲ್ಲಿ ನೀವು ಒಳ್ಳೆಯ ಹೆಸರು ಸಂಪಾದಿಸುತ್ತೀರ. ಸರ್ಕಾರವು ನಿಮ್ಮನ್ನು ಗುರುತಿಸಿ ಗೌರವಿಸುತ್ತದೆ. ನಿಮ್ಮ ಖ್ಯಾತಿ ಹಾಗೂ ಘನತೆಯು ಹೆಚ್ಚುತ್ತದೆ.

ನೀವು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರೆ ಅಥವಾ ಹಣದ ಕೊರತೆ ಎದುರಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆ ಇತ್ಯರ್ಥವಾಗುತ್ತದೆ. ಅನಿರೀಕ್ಷಿತ ಧನ ಲಾಭವಾಗುವ ಸಾಧ್ಯತೆ ಇದೆ. ದೂರದಲ್ಲಿರುವ ನಿಮ್ಮ ಸ್ನೇಹಿತ ನಿಮ್ಮ ಕಷ್ಟಕ್ಕೆ ಕೈ ಜೋಡಿಸಬಹುದು. ಅಥವಾ ಅವರು ನಿಮ್ಮ ಆರ್ಥಿಕ ಸಮಸ್ಯೆಯನ್ನು ನೀಗಿಸಿ ಒಳ್ಳೆಯ ದಿನಗಳು ಬರುವಂತೆ ಮಾಡಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *