ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದರೆ ದಾರಿದ್ರ್ಯ ಇರುವುದಿಲ್ಲ ಎಂದು ವಾಸ್ತು ಪಂಡಿತರು ಹೇಳುತ್ತಾರೆ. ವೈಜ್ಞಾನಿಕವಾಗಿಯೂ ಅದು ಸರಿ. ಯಾಕೆಂದರೆ ಬೆಳಗ್ಗೆ ಬೇಗ ಎದ್ದರೆ ಹಲವು ಆರೋಗ್ಯ ಲಾಭಗಳಿವೆ. ಹಾಗಾಗಿ, ಬೆಳಗ್ಗಿನ ಸಕ್ಕರೆ ನಿದ್ರೆಯನ್ನು ಮರೆತು ಬಿಡಿ. ಸೂರ್ಯಮೂಡುವ ಮೊದಲೇ ನಿಮ್ಮ ದಿನ ಶುರುವಾಗಲಿ. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ಬೆಳಗ್ಗಿನ ಹೊತ್ತಿನಲ್ಲಿ ವಾತಾವರಣದಲ್ಲಿ ಅತ್ಯಂತ ಹೆಚ್ಚು ಆಕ್ಸಿಜನ್ ಇರುತ್ತದೆ. ಜೊತೆಗೆ ಗಾಳಿ ಕೂಡಾ ಶುದ್ಧವಾಗಿರುತ್ತದೆ. ಇದನ್ನು ಉಸಿರಾಡಿದರೆ ನ್ಯಾಚುರಲ್ಲಾಗಿ ನವಚೈತನ್ಯ ಮೂಡುತ್ತದೆ. ಬೇಗ ಎದ್ದರೆ ಬೇಕಾದಷ್ಟು ಟೈಂ ಸಿಗುತ್ತದೆ. ಹಾಗಾಗಿ, ಯಾವುದೇ ಅವಸರ, ಟೆನ್ಶನ್ ಇಲ್ಲದೇ ಡೇ ಪ್ಲಾನ್ ಮಾಡಬಹುದು. ನಿಮ್ಮ ದೇಹಕ್ಕೆ ಶೇ. 50ರಷ್ಟು ಶಕ್ತಿ ಬೆಳಗ್ಗಿನ ಬ್ರೇಕ್ ಫಾಸ್ಟ್‍ನಲ್ಲಿ ಸಿಗುತ್ತದೆ.

ಯಾರು ಬ್ರೇಕ್‍ಫಾಸ್ಟ್ ಮಾಡುವುದಿಲ್ಲವೋ, ಅಥವಾ ಗಬಗಬ ಬ್ರೇಕ್ ಫಾಸ್ಟ್ ತಿನ್ನುತ್ತಾರೆ ಅವರಲ್ಲಿ ಆ ದಿನಕ್ಕೆ ಬೇಕಾದಷ್ಟು ಶಕ್ತಿ ದೇಹದಲ್ಲಿ ಸೃಷ್ಟಿಯಾಗುವುದಿಲ್ಲ. ಬೇಗ ಎದ್ದರೆ ಎಲ್ಲಾ ಕೆಲಸ ಬೇಗ ಮುಗಿಯುತ್ತದೆ. ಆರಾಮದಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಕಚೇರಿ ಸೇರಿಕೊಳ್ಳಬಹುದು. ರಾತ್ರಿ ಬೇಗ ನಿದ್ರೆ ಬರಲ್ಲ, ಹಾಗಾಗಿ ಬೆಳಗ್ಗೆ ಬೇಗ ಏಳಲು ಆಗಲ್ಲ. ಇದು ಸಮಸ್ಯೆ. ಒಮ್ಮೆ ನೀವು ಬೇಗ ಏಳುವ ಅಭ್ಯಾಸ ಮಾಡಿಬಿಟ್ಟರೆ ರಾತ್ರಿ ನಿಮಗೆ ಗೊತ್ತಿಲ್ಲದಂತೆ ಬೇಗ ನಿದ್ರೆ ಬಂದು ಬಿಡುತ್ತದೆ.
ದೇಹಾಯಾಸದ ಕಾರಣ ಬೇಗ ಗಾಢ ನಿದ್ದೆಗೆ ಜಾರಿ ಬಿಡುತ್ತೀರಿ. ಇದು ಆರೋಗ್ಯಕ್ಕೆ ಹಿತಕಾರಿ. ಬೇಗ ಎದ್ದರೆ ಯಾವುದೇ ಅವಸರ ಇಲ್ಲದೇ ವ್ಯಾಯಾಮ ಮಾಡಬಹುದು. ವ್ಯಾಯಾಮ ದೇಹಕ್ಕೆ ಬಹಳ ಮುಖ್ಯ. ವ್ಯಾಯಾಮ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಬೇಗ ಏಳುವವರ ಮನಸ್ಸಿನಲ್ಲಿ ಸಕರಾತ್ಮಕ ಯೋಚನೆ ಇರುತ್ತದೆ. ಒಂದು ಸ್ಟಡಿ ಪ್ರಕಾರ ಬೆಳಗ್ಗೆ ಬೇಗ ಎದ್ದರೆ ನೀವು ದಿನವಿಡೀ ಖುಷಿಯಾಗಿರುತ್ತೀರಿ.