ಜಮೀನು ಕೊಳ್ಳುವ ಹಾಗೂ ಮನೆಕಟ್ಟುವ ಆಸೆಯನ್ನು ಹಿಡೇರಿಸುವ ಭೂವರಾಹ ಸ್ವಾಮಿ ಇದು ಎಲ್ಲಿದೆ ಗೊತ್ತಾ? ಇದರ ಸಂಪೂರ್ಣ ಮಾಹಿತಿ

ಭಕ್ತಿ

ನಾವು ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ದೇವರ ಅನುಗ್ರಹವನ್ನು ಪಡೆಯುವುದು ನಮ್ಮ ಹಿಂದಿನಿಂದಲೂ ನಡೆದು ಬಂದ ಪದ್ಧತಿ ಆ ಪ್ರಕಾರವಾಗಿ ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಿದ್ದು ಅವುಗಳು ತಮ್ಮ ವಿಶೇಷತೆಯಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಾವಿಂದು ನಿಮಗೆ ಅಂತಹ ಒಂದು ದೇವಾಲಯವಾದ ಭೂವರಹನಾಥ ಸ್ವಾಮಿ ದೇವಾಲಯದ ಕುರಿತು ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯಿಂದ ನಿರ್ಮಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಹಿರಿಯರು ಹೇಳುವ ಪ್ರಕಾರ ಹೆಣ್ಣು ಹೊನ್ನು ಮಣ್ಣು ಅಷ್ಟು ಸುಲಭವಾಗಿ ಯಾರಿಗೂ ಸಿಗುವುದಿಲ್ಲ ಅದಕ್ಕೆ ದೈವಬಲ ಇರಬೇಕು. ಹಾಗಾಗಿ ನಿಮ್ಮ ಕನಸನ್ನು ನನಸಾಗಿಸುವುದಕ್ಕೆ ಭುವರಹನಾಥ ಸ್ವಾಮಿಯ ಸನ್ನಿಧಿಗೆ ಹೋಗಿ ಸಂಕಲ್ಪವನ್ನು ಮಾಡಿಕೊಂಡರೆ ನಿಮ್ಮ ಇಷ್ಟಾರ್ಥ ಈಡೇರುತ್ತದೆ.

ಕೆಲವೊಬ್ಬರಿಗೆ ಬೇಗ ಅವರ ಆಸೆಗಳು ಈಡೇರುತ್ತವೆ ಇನ್ನು ಕೆಲವರಿಗೆ ಅವರ ಜಾತಕಗಳ ದೋಷದಿಂದಾಗಿ ಈಡೇರುವುದು ಸ್ವಲ್ಪ ತಡವಾಗುತ್ತದೆ. ಇನ್ನು ಭೂವರಹನಾಥಸ್ವಾಮಿ ದೇವಾಲಯ ಎಲ್ಲಿ ಬರುತ್ತದೆ ಎಂದರೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿ ಕಲ್ಲಹಳ್ಳಿ ಇದೆ ಹೇಮಾವತಿ ನದಿಯ ದಂಡೆಯ ಮೇಲೆ ಈ ದೇವಸ್ಥಾನ ಇದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ಭೂವರಹನಾಥಸ್ವಾಮಿ ಅವತಾರವು ಒಂದಾಗಿದೆ ಅದೇ ರೀತಿಯಾಗಿ ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಅಲ್ಲಿಗೆ ಹೋಗುವುದಕ್ಕೆ ಹೆಚ್ಚಾಗಿ ಯಾವುದೇ ಬಸ್ಸಿನ ಮಾರ್ಗಗಳು ಇಲ್ಲ ಹಾಗಾಗಿ ನೀವು ನಿಮ್ಮದೇ ಆದ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡರೆ ಅಲ್ಲಿಗೆ ಬೇಗ ಹೋಗಿ ತಲುಪಬಹುದು. ದೇವಸ್ಥಾನವು ವಾರದ ಏಳು ದಿನಗಳು ಬಾಗಿಲನ್ನು ತೆರೆದಿರುತ್ತದೆ ಆದರೆ ಬೆಳಿಗ್ಗೆ ಇಂಟು ಗಂಟೆಯಿಂದ ಮದ್ಯಾನ ಒಂದೂವರೆ ಎರಡು ಗಂಟೆಯವರೆಗೆ ತೆರೆದಿರುತ್ತದೆ ನಂತರ ಮೂರೂವರೆಯಿಂದ ಸಾಯಂಕಾಲ ಎಳುವರೆಯವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.

ದೇವಸ್ಥಾನದಲ್ಲಿ ಊಟದ ವ್ಯವಸ್ಥೆಯೂ ಕೂಡ ಇದೆ. ವಿಶೇಷ ಪೂಜೆ ಅಭಿಷೇಕವನ್ನು ಮಾಡುವವರು ಸ್ವಲ್ಪ ಬೇಗನೇ ಬಂದು ಹೇಮಾವತಿ ನದಿಯಲ್ಲಿ ಸ್ನಾನ ಮಾಡಿಕೊಂಡು ಪೂಜೆಯನ್ನು ಒಪ್ಪಿಸಬಹುದಾಗಿದೆ. ಇಲ್ಲಿ ಯಾವ ರೀತಿಯಾಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಎಂದರೆ ಒಂದು ವೇಳೆ ನೀವು ಮನೆಯನ್ನು ಕಟ್ಟಿಸಬೇಕು ಎಂದುಕೊಂಡಿದ್ದರೆ ಎರಡು ಇಟ್ಟಿಗೆಯನ್ನು ತೆಗೆದುಕೊಂಡು ದೇವಸ್ಥಾನವನ್ನು ಹನ್ನೊಂದು ಸುತ್ತು ಪ್ರದಕ್ಷಿಣೆ ಹಾಕಬೇಕು.

ಅದಕ್ಕೂ ಮೊದಲು ದೇವಸ್ಥಾನದ ಒಳಗೆ ಹೋಗಿ ಭೂವರಹನಾಥಸ್ವಾಮಿಗೆ ನಮಸ್ಕಾರವನ್ನು ಮಾಡಿಕೊಂಡು ನಂತರ ಇಟ್ಟಿಗೆಯನ್ನು ಹಿಡಿದು ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಆದನಂತರ ಇಟ್ಟಿಗೆಯನ್ನು ದೇವಸ್ಥಾನದ ಒಳಗೆ ಕೊಟ್ಟರೆ ಅಲ್ಲಿ ಒಂದು ಸಂಕಲ್ಪ ಚೀಟಿಯನ್ನು ಕೊಡುತ್ತಾರೆ ನಂತರ ಪೂಜೆಯನ್ನು ಮಾಡಿ ಒಂದು ಇಟ್ಟಿಗೆಯನ್ನು ನಿಮಗೆ ಕೊಡುತ್ತಾರೆ ಇನ್ನೊಂದನ್ನು ಅವರ ಬಳಿ ಇಟ್ಟುಕೊಳ್ಳುತ್ತಾರೆ.

ಇನ್ನು ನೀವು ಜಮೀನು ಅಥವಾ ಸೈಟನ್ನು ಖರೀದಿಸಬೇಕು ಎಂದರೆ ಒಂದು ಕೊಟ್ಟೆಯಲ್ಲಿ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅರ್ಚಕರ ಬಳಿಕೊಡಬೇಕು ಅವರು ನಿಮ್ಮ ಹೆಸರು ಗೋತ್ರದ ಮೇಲೆ ಪೂಜೆಯನ್ನು ಮಾಡಿಸಿ ಆ ಮಣ್ಣನ್ನು ನಿಮಗೆ ಕೊಡುತ್ತಾರೆ ನೀವು ಅದನ್ನು ಮನೆಗೆ ತೆಗೆದುಕೊಂಡು ಬಂದು ಅದನ್ನು ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ ದೇವರ ಬಳಿ ಇಡಬೇಕು ಅದಕ್ಕೆ ದಿನನಿತ್ಯ ಪೂಜೆಯನ್ನು ಮಾಡಬೇಕು ಅದೇ ರೀತಿಯಲ್ಲಿ ನೀವು ಅಲ್ಲಿ ಭೂವರಹನಾಥಸ್ವಾಮಿ ಫೋಟೋವನ್ನು ಕೇಳಿ ತೆಗೆದುಕೊಂಡು ಬರಬೇಕು

ಈ ರೀತಿ ಮಾಡುವುದರಿಂದ ನಿಮ್ಮ ಮನೆ ಕಟ್ಟುವ ಅಥವಾ ಜಮೀನು ಖರೀದಿಸುವ ಆಸೆಗಳು ನೂರರಷ್ಟು ನಿಜವಾಗುತ್ತವೆ. ನೀವು ಅಲ್ಲಿ ಪೂಜೆ ಮಾಡಿಸಿರುವಂತಹ ಇಟ್ಟಿಗೆಯನ್ನು ಭೂಮಿ ಪೂಜೆಯ ಸಮಯದಲ್ಲಿ ಇಟ್ಟಿಗೆಯನ್ನು ಇಟ್ಟು ಪೂಜೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಇದುವರೆಗೂ ಈ ದೇವಾಲಯಕ್ಕೆ ಬಂದು ಸಂಕಲ್ಪವನ್ನು ಮಾಡಿಕೊಂಡಿರುವ ಯಾರಿಗೂ ನಿರಾಸೆಯಾಗಿಲ್ಲ ಎಲ್ಲರ ಇಷ್ಟಾರ್ಥಗಳು ಈಡೇರಿವೆ. ಕೆಲವರಿಗೆ ಅವರ ಸಂಕಲ್ಪ ಈಡೇರುವುದು ತುಂಬಾ ವಿಳಂಬವಾದರೆ ಇನ್ನೊಮ್ಮೆ ಬಂದು ಸಂಕಲ್ಪವನ್ನು ಮಾಡಿಕೊಳ್ಳುವುದರಿಂದ ಅವರ ಆಸೆ ಪೂರೈಸುತ್ತದೆ.

ನೀವು ದೇವಸ್ಥಾನದ ಸುತ್ತ ಇಟ್ಟಿಗೆ ಮತ್ತು ಮಣ್ಣುಗಳು ಬಿದ್ದಿರುವುದನ್ನು ಕಾಣಬಹುದು ಅವುಗಳನ್ನು ತೆಗೆದುಕೊಂಡು ಪೂಜೆಯನ್ನು ಮಾಡಿಸಬಹುದು. ಇನ್ನು ಭೂಮಿಗೆ ಸಂಬಂಧಿಸಿದಂತೆ ವಿವಾದಗಳಿದ್ದರೆ ಅಥವಾ ನಿಮ್ಮ ಜಮೀನನ್ನು ಇನ್ಯಾರೋ ಆಕ್ರಮಿಸಿಕೊಂಡು ಅದು ವಿವಾದದಲ್ಲಿ ಸಿಲುಕಿಕೊಂಡರೆ ಅದನ್ನು ಕೂಡ ಇಲ್ಲಿ ಬಂದು ಪರಿಹರಿಸಿಕೊಳ್ಳಬಹುದು. ಈ ರೀತಿಯಾಗಿ ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಭೂವರಹನಾಥಸ್ವಾಮಿ ತನ್ನ ಭಕ್ತರು ಕೇಳಿಕೊಳ್ಳುವ ಆಸೆಗಳನ್ನು ಈಡೇರಿಸುತ್ತಾನೆ

ನೀವು ಕೂಡ ಮನೆ ಅಥವಾ ಜಮೀನನ್ನ ಕೊಂಡುಕೊಳ್ಳಬೇಕು ಎನಿಸಿದರೆ ಒಮ್ಮೆ ಭುವರಹನಾಥ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಸಂಕಲ್ಪವನ್ನು ಮಾಡಿಕೊಂಡರೆ ಯಾವುದೇ ಅಡಚಣೆಗಳಿಲ್ಲದೆ ಹಣಕಾಸಿನ ತೊಂದರೆ ಇಲ್ಲದೆ ನಿಮ್ಮ ಆಸೆ ನೆರವೇರುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *