ಯಾವ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದ್ರೆ ಅನ್ಯೋನ್ಯವಾಗಿರತ್ತೆ ನೋಡಿ

ಜ್ಯೋತಿಷ್ಯ

ನಾವಿಂದು ನಿಮಗೆ ಯಾವ ರಾಶಿಯವರು ಯಾವ ರಾಶಿಯನ್ನು ವಿವಾಹವಾದರೆ ಜೀವನವನ್ನು ಅನ್ಯೋನ್ಯವಾಗಿ ನಡೆಸುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಮದುವೆ ಮಾಡುವ ಮೊದಲು ತಂದೆ-ತಾಯಿಯರು ಮೊದಲು ಮಾಡುವ ಕೆಲಸ ಜಾತಕ ನಕ್ಷತ್ರ ಮತ್ತು ರಾಶಿ ನೋಡುವುದು. ಶಾಸ್ತ್ರಗಳಲ್ಲಿ ಯಾವ ರಾಶಿಯವರು ಯಾವ ರಾಶಿಯವರನ್ನು ವಿವಾಹವಾದರೆ ಉತ್ತಮವಾಗಿ ಜೀವನ ನಡೆಸುತ್ತಾರೆ ಎಂದು ತಿಳಿಸಲಾಗಿದೆ ಆ ಪ್ರಕಾರವಾಗಿ ಹಿರಿಯರು ಅನುಸರಿಸುತ್ತಾರೆ ಹಾಗಾದರೆ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಜೀವನ ಅನ್ಯೋನ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮೇಷ ರಾಶಿ ಹಾಗು ಕಟಕ ರಾಶಿ ಮೇಷ ರಾಶಿಯವರು ಅತ್ಯಂತ ಶಕ್ತಿ ಉಳ್ಳವರು ಮತ್ತು ಧೈರ್ಯವಂತರು ಈ ಗುಣವು ಕಟಕ ರಾಶಿಯ ಸಂಗಾತಿಯನ್ನು ಮೆಚ್ಚಿಸುತ್ತದೆ ಮತ್ತು ಅವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಕಟಕರಾಶಿಯವರು ಅತ್ಯಂತ ಯಶಸ್ಸನ್ನು ಪಡೆಯುವುದಕ್ಕೆ ಹವಣಿಸುತ್ತಿರುತ್ತಾರೆ ಅವರ ಪ್ರಯತ್ನವು ಮೇಷ ರಾಶಿಯ ಸಂಗಾತಿಯನ್ನು ಗೌರವಿಸುವಂತೆ ಮಾಡುತ್ತದೆ.

ಎರಡನೆಯದಾಗಿ ಮೇಷ ರಾಶಿ ಮತ್ತು ಕುಂಭ ರಾಶಿ ಜಾತಕದ ಪ್ರಕಾರ ಇದು ಅದ್ಭುತವಾದ ಜೋಡಿ ಇವರ ಜೀವನ ಹಾಲು ಜೇನಿನಂತೆ ಇರುತ್ತದೆ ಎಂದು ಹೇಳಲಾಗುತ್ತದೆ. ಇಬ್ಬರು ಸಾಹಸಪ್ರಿಯರು ಒಟ್ಟೊಟ್ಟಿಗೆ ಎಲ್ಲಾ ಕೆಲಸ ಕಾರ್ಯಗಳಿಗೆ ಕೈಹಾಕುತ್ತಾರೆ. ಇಬ್ಬರು ಕಲಾತ್ಮಕವಾದಂತಹ ಆಲೋಚನೆಗಳನ್ನು ಹೊಂದಿರುತ್ತಾರೆ ಪ್ರೀತಿ ಗೌರವಗಳಿಂದ ಕಾಣುತ್ತಾರೆ ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾತಂತ್ರ್ಯವನ್ನು ನೀಡುತ್ತಾರೆ.

ಮೂರನೆಯದಾಗಿ ಮೇಷ ರಾಶಿ ಮತ್ತು ಮೀನ ರಾಶಿ ಈ ಎರಡು ರಾಶಿಯವರು ಬಹಳ ಅನ್ಯೋನ್ಯವಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ನಡೆಯುತ್ತಾರೆ ಮೀನ ರಾಶಿಯ ಸಂಗಾತಿ ಮೇಷ ರಾಶಿಯ ಸಂಗಾತಿಯ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ. ಮುಂದಿನದಾಗಿ ತುಲಾ ರಾಶಿ ಮತ್ತು ಸಿಂಹ ರಾಶಿ ಎರಡು ರಾಶಿಯವರು ಬಹಳ ಸಮಾಜಮುಖಿ ಜೀವನವನ್ನು ನಡೆಸುತ್ತಿರುತ್ತಾರೆ ಇವರು ಬಹಳ ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊಂದಿರುತ್ತಾರೆ

ಸಿಂಹರಾಶಿಯವರು ಬಹಳ ಕೋಪಿಷ್ಠ ಸ್ವಭಾವದವರಾಗಿದ್ದರೂ ಸಹ ತುಲಾ ರಾಶಿಯ ಸಂಗಾತಿ ಎಲ್ಲವನ್ನೂ ಖುಷಿಯಿಂದ ನಿಭಾಯಿಸಿಕೊಂಡು ಹೋಗುತ್ತಾರೆ. ಮುಂದಿನ ದಾಗೆ ಸಿಂಹರಾಶಿ ಮತ್ತು ಧನು ರಾಶಿ ಸ್ನೇಹಿತರೊಡನೆ ತಿರುಗಾಡಿಕೊಂಡು ಹಾಯಾಗಿರುತ್ತಾರೆ ಸುಖಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ ಸಿಂಹ ರಾಶಿಯ ಸಂಗಾತಿ ಬಹಳ ಮುದ್ದಿನಿಂದ ಸಾಕಲ್ಪಟ್ಟ ಮತ್ತು ಕಾಟ ಕೊಡುವಂತಹ ಸ್ವಭಾವದವರಾಗಿರುತ್ತಾರೆ ಅವರನ್ನ ಧನು ರಾಶಿಯವರು ಅನುಸರಿಸಿಕೊಂಡು ಹೋಗುತ್ತಾರೆ.

ಮುಂದಿನದಾಗಿ ವೃಷಭ ರಾಶಿ ಮತ್ತು ಕಟಕ ರಾಶಿ ಕಟಕ ರಾಶಿಯ ಸಂಗಾತಿ ಬಹಳ ಪ್ರಾಮಾಣಿಕರಾಗಿದ್ದು ವೃಷಭ ರಾಶಿಯ ಸಂಗಾತಿಗೆ ಈ ಗುಣ ಬಹಳ ಇಷ್ಟವಾಗುತ್ತದೆ ವೃಷಭ ರಾಶಿಯವರು ಬಹಳ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಇಬ್ಬರೂ ಸೇರಿ ಮನೆ ಆಸ್ತಿ ಪ್ರೀತಿ ಎಲ್ಲವನ್ನೂ ಗಳಿಸುತ್ತಾರೆ. ಮುಂದಿನ ದಾಗಿ ವೃಷಭ ರಾಶಿ ಮತ್ತು ಮಕರ ರಾಶಿ ಋಷಭ ರಾಶಿಯವರಿಗೆ ಮಕರ ರಾಶಿಯವರ ಕೆಲಸ ಮತ್ತು ತಮಾಷೆಯ ಗುಣಗಳು ಇಷ್ಟವಾಗುತ್ತವೆ.

ಮಕರ ರಾಶಿಯವರಿಗೆ ವೃಷಭ ರಾಶಿಯವರ ಪ್ರಾಮಾಣಿಕತೆ ಮತ್ತು ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ ಇದಿಷ್ಟು ಯಾವ ರಾಶಿಯವರು ಯಾವ ರಾಶಿಯನ್ನು ವಿವಾಹವಾದರೆ ಒಳ್ಳೆಯ ಜೀವನವನ್ನು ನಡೆಸುತ್ತಾರೆ ಎಂಬುದರ ಕುರಿತಾಗಿ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave a Reply

Your email address will not be published. Required fields are marked *