ನಾವಿಂದು ನಿಮಗೆ ಕನ್ನಡ ಸಿನಿಮಾರಂಗದ ಟಾಪ್ ನಾಯಕ ನಟರಲ್ಲಿ ಯಾರು ಹೆಚ್ಚು ಶ್ರೀಮಂತರು ಎನ್ನುವ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ನಮ್ಮ ಉಪೇಂದ್ರ ಅವರು ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟನ್ನು ಹೊಂದಿರುವ ಉಪೇಂದ್ರ ಅವರು ರೂಪಿಸ್ ಹೋಟೆಲ್ ಮತ್ತು ರೆಸ್ಟೋರೆಂಟ್ ಹೊಂದಿದ್ದಾರೆ ಮತ್ತು ಇನ್ನು ಕೆಲವು ಖಾಸಗಿ ವ್ಯವಹಾರಗಳನ್ನು ಹೊಂದಿರುವ ಉಪೇಂದ್ರ ಅವರು ಸುಮಾರು ನೂರಾ ಐವತ್ತರಿಂದ ನೂರಾ ಅರವತ್ತು ಕೋಟಿ ವ್ಯವಹಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಒಂದೂವರೆ ಎಕರೆಯಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಮತ್ತು ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ಶಿವರಾಜ್ ಕುಮಾರ್ ಅವರು ಬೆಂಗಳೂರು ಸೇರಿದಂತೆ ಹಲವಾರು ಕಡೆಗಳಲ್ಲಿ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಇವರು ನೂರಾ ಎಂಬತ್ತರಿಂದ ಎರಡು ನೂರಾ ಇಪ್ಪತ್ತು ಕೋಟಿ ವ್ಯವಹಾರವನ್ನು ಮಾಡುತ್ತಾರೆ.

ಇನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹುಟ್ಟಿನಿಂದಲೇ ಶ್ರೀಮಂತರಾಗಿದ್ದು ಸಿನಿಮಾ ಮತ್ತು ಧಾರಾವಾಹಿ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಕಿಚ್ಚ ಸುದೀಪ್ ಅವರು ಕೋಟಿ ಕೋಟಿ ಬೆಲೆಬಾಳುವ ಷೇರುಗಳನ್ನು ಹೊಂದಿದ್ದಾರೆ ಇಷ್ಟೇ ಅಲ್ಲದೆ ಕಿಚ್ಚ ಕ್ರಿಯೇಷನ್ ಮತ್ತು ಸರೋವರ ಗ್ರೂಪ್ಸ್ ಗೆ ಮಾಲೀಕರಾಗಿದ್ದಾರೆ ಉನ್ನತ ಮೂಲಗಳ ಪ್ರಕಾರ ಹೇಳುವುದಾದರೆ ಸುಮಾರು ಎರಡು ನೂರರಿಂದ ಎರಡು ನೂರಾ ಐವತ್ತು ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಇನ್ನೂ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್. ಲವ್ ಸ್ಟೋರಿ ಸಿನಿಮಾಗಳಿಗೆ ಜೀವ ತುಂಬುವ ನಟ ಗಣೇಶ ಅವರು ಟಾಪ್ ನಟ ಕೂಡ ಹೌದು. ಮೂಲಗಳ ಪ್ರಕಾರ ಹೇಳುವುದಾದರೆ ನೂರರಿಂದ ನೂರೈವತ್ತು ಕೋಟಿ ರೂಪಾಯಿ ವ್ಯವಹಾರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾಡುತ್ತಾರೆ.

ಇನ್ನು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆರ್ ಆರ್ ನಗರದಲ್ಲಿ ದುಬಾರಿ ಮನೆಯನ್ನು ಹೊಂದಿರುವವರು ಮೈಸೂರಿನಲ್ಲಿ ಅತಿ ದೊಡ್ಡ ಫಾರ್ಮ ಹೌಸ್ ಹೊಂದಿದ್ದಾರೆ ಮೂಲಗಳ ಪ್ರಕಾರ ಕೆವಲ ಕರ್ನಾಟಕದಲ್ಲಷ್ಟೇ ಅಲ್ಲದೆ ದುಬೈನಲ್ಲಿಯು ಕೋಟಿ ಕೋಟಿ ಬೆಲೆಬಾಳುವ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಹಾಗೂ ಮಾಹಿತಿಯ ಪ್ರಕಾರ ಡಿ ಬಾಸ್ ಅವರು ನೂರಾ ಐವತ್ತರಿಂದ ಎರಡು ನೂರು ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಇನ್ನು ದೊಡ್ಮನೆ ಹುಡುಗ ಎಂದೇ ಕರೆಸಿಕೊಳ್ಳುವ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದೊಡ್ಡ ದೊಡ್ಡ ಮಾಲ್ಗಳು ಮತ್ತು ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದರು. ಕರ್ನಾಟಕದ ಅತಿ ದೊಡ್ಡ ಆಡಿಯೋ ಲಿಸ್ಟ್ ನಲ್ಲಿ ಬರುವ ಪಿ ಆರ್ ಕೆ ಆಡಿಯೋ ಸಂಸ್ಥೆಗೆ ಮಾಲೀಕರಾಗಿದ್ದರು ಹಲವಾರು ಥಿಯೇಟರ್ ಗಳನ್ನು ಹೊಂದಿರುವ ಇವರು ಸುಮಾರು ಎರಡು ನೂರರಿಂದ ಮುನ್ನೂರು ಕೋಟಿ ರೂಪಾಯಿ ವ್ಯವಹಾರವನ್ನು ಹೊಂದಿದ್ದರು.

ಇನ್ನು ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾವನ್ನು ಮಾಡಿರುವ ಇವರು ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವರ ಕೆಜಿಎಫ್ ಸಿನಿಮಾ ನಾಲ್ಕು ನೂರು ಕೋಟಿಗಿಂತ ಹೆಚ್ಚು ಗಳಿಕೆಯನ್ನು ಹೊಂದಿದ್ದು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಅನೇಕ ವ್ಯವಹಾರಗಳಲ್ಲಿ ಷೇರುಗಳನ್ನು ಹೊಂದಿರುವ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು ನೂರಾ ಎಂಬತ್ತರಿಂದ ಇನ್ನೂರು ಕೋಟಿ ರೂಪಾಯಿ ವ್ಯವಹಾರವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಹೊಂದಿದ್ದಾರೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕನ್ನಡ ಚಿತ್ರರಂಗದ ಟಾಪ್ ನಟರು ಹೊಂದಿರುವ ವ್ಯವಹಾರದ ಮಾಹಿತಿಯಾಗಿದೆ.

Leave a Reply

Your email address will not be published. Required fields are marked *