ಆತ್ಮೀಯ ಓದುಗರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಅವುಗಳಲ್ಲಿ ಮೊದಲ ರಾಶಿಯಾದ ಮೇಷ ರಾಶಿಯವರ ಗುಣ ಸ್ವಭಾವ, ಅವರಿಗೆ ಯಾವ ಗ್ರಹ ಉಚ್ಛನಾಗಿರುತ್ತಾನೆ, ಯಾವ ಗ್ರಹ ನೀಚನಾಗಿರುತ್ತಾನೆ ಹಾಗೂ ಮೇಷ ರಾಶಿಯವರಿಗೆ ಹೊಂದುವ ಬಣ್ಣ, ವಾತಾವರಣ ಮುಂತಾದ ಎಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೇಷ ರಾಶಿಯವರಿಗೆ ಅಶ್ವಿನಿ ನಕ್ಷತ್ರದ 4 ಪಾದಗಳು ,ಭರಣಿ ನಕ್ಷತ್ರದ 4 ಪಾದಗಳು ,ಕೃತ್ತಿಕಾ ನಕ್ಷತ್ರದ 1 ಪಾದ ಸೇರಿ ಒಟ್ಟು 9 ಪಾದಗಳಿವೆ. ಮೇಷ ರಾಶಿ ಗಂಡು ರಾಶಿಯಾಗಿದ್ದು ಮೇಷ ರಾಶಿಗೆ ಅಧಿಪತಿ ಕುಜ ಗ್ರಹ. ಮೇಷ ರಾಶಿಗೆ ಸೂರ್ಯ ಉಚ್ಚ ಸ್ಥಾನನಾಗುತ್ತಾನೆ ಅಂದರೆ ಮೇಷ ರಾಶಿಯಲ್ಲಿ ಸೂರ್ಯನಿದ್ದರೆ ಸೂರ್ಯ ಮೇಷ ರಾಶಿಗೆ ಉಚ್ಚನಾಗುತ್ತಾನೆ. ಮೇಷ ರಾಶಿಗೆ ಶನಿ ನೀಚನಾಗುತ್ತಾನೆ. ಮೇಷ ರಾಶಿಗೆ ಗುರು ಗ್ರಹವು ಮಿತ್ರ ಗ್ರಹವಾಗಿದ್ದಾನೆ. ಮೇಷ ರಾಶಿಗೆ ರಾಹು ಗ್ರಹವು ಶತ್ರು ಗ್ರಹವಾಗಿದೆ. ಈ ರಾಶಿಯವರು 4,13,22,31 ಈ ದಿನಾಂಕದಂದು ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ಮೇಷ ರಾಶಿಯವರು ಬೂದಿ ಬಣ್ಣವನ್ನು ಹೆಚ್ಚು ಬಳಸಬಾರದು. ಮೇಷ ರಾಶಿಯವರು ಕೆಂಪು ಬಣ್ಣವನ್ನು ಬಳಸಬೇಕು. ಮೇಷ ರಾಶಿಯವರಿಗೆ ಪೂರ್ವ ದಿಕ್ಕು ಶ್ರೇಷ್ಠವಾಗಿರುತ್ತದೆ. ಮೇಷ ರಾಶಿಯವರ ಸ್ವಭಾವ ನೋಡುವುದಾದರೆ ಚರ ಸ್ವಭಾವವಾಗಿದೆ, ಮೇಷ ರಾಶಿಯವರಿಗೆ ಧೈರ್ಯ ,ಕೋಪ ಹಾಗೂ ಅಹಂಕಾರ ಜಾಸ್ತಿ ಇರುತ್ತದೆ. ನ್ಯಾಯ, ನೀತಿ, ಧರ್ಮದಲ್ಲಿ ಮುಂದಿರುತ್ತಾರೆ.

ಮೇಷ ರಾಶಿಯವರು ಹವಳವನ್ನು ಧರಿಸುವುದು ಒಳ್ಳೆಯದು. ಮೇಷ ರಾಶಿಯವರ ಆರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ. ಮೇಷ ರಾಶಿಯವರಿಗೆ ಬೆಟ್ಟ ,ಗುಡ್ಡ ಮತ್ತು ಸುರಂಗವೆಂದರೆ ಇಷ್ಟವಾಗುತ್ತದೆ. ಮೇಷ ರಾಶಿಯ ಗ್ರಹ ಸಂಖ್ಯೆ 9 ಆಗಿದೆ. ಮೇಷ ರಾಶಿಯವರ ವಾತಾವರಣ ಉಷ್ಣದಿಂದ ಕೂಡಿರುತ್ತದೆ. ತಲೆ, ಮೆದುಳು, ಮೂಳೆಯ ಬಗ್ಗೆ ಮೇಷ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಮೇಷ ರಾಶಿಯವರು ಹುಳಿ ಮತ್ತು ಖಾರವನ್ನು ಇಷ್ಟಪಡುತ್ತಾರೆ. ಮೇಷ ರಾಶಿ ಅಗ್ನಿ ತತ್ವದ್ದಾಗಿದೆ. ಮೇಷ ರಾಶಿಯವರು ಸೈನಿಕ ಹುದ್ದೆ, ಪೊಲೀಸ್ ಹುದ್ದೆ, ಇಂಡಸ್ಟ್ರಿಯಲ್ ಹುದ್ದೆ, ಕೋರ್ಟು ಕಚೇರಿಯ ಹುದ್ದೆ, ರಾಜಕೀಯ ಕ್ಷೇತ್ರಗಳಿಗೂ ಹೋಗಬಹುದು ಅಲ್ಲದೆ ದೇಶಕ್ಕೆ ಅನ್ನ ಕೊಡುವ ರೈತರು ಆಗಬಹುದಾಗಿದೆ. ಹೀಗೆ ಪ್ರತಿಯೊಂದು ರಾಶಿಯು ತನ್ನದೆ ಆದ ಗುಣ ಸ್ವಭಾವ, ಆರಾಧ್ಯ ದೈವ, ಬಣ್ಣ, ಶ್ರೇಷ್ಠವಾದ ದಿಕ್ಕು ಹೊಂದಿರುತ್ತದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *