ನಿಮ್ಮ ದೇಹದ ಆ ಭಾಗದಲ್ಲಿ ಮಚ್ಚೆ ಇದ್ರೆ ನೀವು ತುಂಬಾನೇ ಭಾಗ್ಯಶಾಲಿಗಳು ಅನ್ನುತ್ತೆ ಜ್ಯೋತಿಷ್ಯಶಾಸ್ತ್ರ

ಜ್ಯೋತಿಷ್ಯ

ಪ್ರತಿಯೊಬ್ಬರ ಶರೀರದ ಮೇಲೂ ಕೆಲವಾದರೂ ಮಚ್ಚೆಗಳಿರುತ್ತವೆ. ಕೆಲವು ಹುಟ್ಟಿನಿಂದಲೇ ಬಂದಿದ್ದರೆ ಇವುಗಳಿಗೆ ಹುಟ್ಟುಮಚ್ಚೆ ಎಂದು ಕರೆಯುತ್ತಾರೆ. ಉಳಿದವು ಹುಟ್ಟಿದಾಗ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿದ್ದು ದೊಡ್ಡವರಾಗುತ್ತಿದ್ದಂತೆ ಗಾತ್ರದಲ್ಲಿ ಬೆಳೆದು ಬಳಿಕ ಕಾಣಿಸಿಕೊಳ್ಳುತ್ತವೆ. ಕೆಲವು ಸೌಂದರ್ಯವನ್ನು ಹೆಚ್ಚಿಸಿದರೆ ಕೆಲವು ಇರಬಾರದ ಸ್ಥಳದಲ್ಲಿದ್ದು ಸೌಂದರ್ಯವನ್ನು ಕುಂದಿಸುತ್ತದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆದರೆ ಹಿರಿಯರು ಮಚ್ಚೆಗಳಿದ್ದರೆ ಒಳ್ಳೆಯದು ಮತ್ತು ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ ಎಂದು ನಂಬಿದ್ದಾರೆ. ಹಲವು ಜ್ಯೋತಿಷಿಗಳೂ ಮಚ್ಚೆಯ ಸ್ಥಾನವನ್ನು ನೋಡಿ ಹಲವು ವಿಷಯಗಳನ್ನು ತಿಳಿಸಬಲ್ಲರು. ಕೆಲವರು ಈ ಮಚ್ಚೆಗಳು ಸಮೃದ್ಧಿ ಮತ್ತು ಐಶ್ವರ್ಯದ ಪ್ರತೀಕವೆಂದೂ ನಂಬುತ್ತಾರೆ. ಮಚ್ಚೆಗಳು ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದೂ ನಂಬಲಾಗಿದೆ. ಒಂದು ವೇಳೆ ಬಲಗೆನ್ನೆಯ ಮೇಲೆ ಸ್ಪಷ್ಟ ವೃತ್ತಾಕಾರದ ಮತ್ತು ಗಾಢವರ್ಣದ ಮಚ್ಚೆ ಇದ್ದರೆ ಈ ವ್ಯಕ್ತಿ ತನ್ನ ವಿವಾಹದ ಬಳಿಕ ಶ್ರೀಮಂತನಾಗುವ ಯೋಗವಿದೆ.

ಒಂದು ವೇಳೆ ಹುಟ್ಟುಮಚ್ಚೆ ತುಟಿಯ ಮೇಲಿದ್ದರೆ ಇವರು ತಮ್ಮ ಜೀವನದಲ್ಲಿ ಸದಾ ಸಮೃದ್ಧಿ ಮತ್ತು ಧನವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಾಹಿತಿಗಳ ಪ್ರಕಾರ ಮೇಲ್ತುಟಿಯಲ್ಲಿ ಮಚ್ಚೆ ಇದ್ದವರು ಸಾಮಾನ್ಯವಾಗಿ ಹಠಮಾರಿಗಳಾಗಿರುತ್ತಾರೆ. ಮೂಗಿನ ಮೇಲೆ ಅದರಲ್ಲೂ ವಿಶೇಷವಾಗಿ ಮೂಗಿನ ಬಲಹೊಳ್ಳೆಯ ಮೇಲೆ ಮಚ್ಚೆ ಇದ್ದವರು ಜೀವನದಲ್ಲಿ ನಿಯಮಿತ ಏಳಿಗೆ ಪಡೆಯುತ್ತಾ ಶ್ರೀಮಂತರಾಗುತ್ತಾರೆ. ಅಲ್ಲದೇ ಇವರು ಜಗತ್ತನ್ನೇ ಸುತ್ತುತ್ತಾರೆ. ವಿವಾಹದ ಬಳಿಕ ಇವರು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಪಾದದಲ್ಲಿ ಮಚ್ಚೆ ಇದ್ದವರು ಸದಾ ಸಂಚರಿಸುತ್ತಿದ್ದು ವಿಶ್ವ ಪರ್ಯಟಕರಾಗಿರುತ್ತಾರೆ. ಈ ಸಂಚಾರ ಕಾರ್ಯನಿಮಿತ್ತವಲ್ಲದೇ ಹವ್ಯಾಸಿ ಮತ್ತು ರಜಾದಿನಗಳ ಸುತ್ತಾಟವೇ ಆಗಿರುತ್ತದೆ. ಹಣೆಯ ಮಧ್ಯೆ ಅಂದರೆ ಶಿವನ ಮೂರನೆಯ ಕಣ್ಣು ಇರುವಲ್ಲಿ ಮಚ್ಚೆ ಇದ್ದರೆ ಇವರು ಜೀವನದಲ್ಲಿ ಬೇಗನೇ ಸ್ಥಿತವಂತರಾಗಿ ಹೆಚ್ಚಿನ ಪ್ರಯಾಣದ ಭಾಗ್ಯವನ್ನು ಪಡೆದಿರುತ್ತಾರೆ. ಇವರಿಗೆ ಸದಾ ಅಗತ್ಯಕ್ಕೂ ಹೆಚ್ಚಿನ ಆದಾಯವಿರುತ್ತದೆ. ಹಾಗೆಯೇ ಇವೆಲ್ಲ ಕೆಲವರ ನಂಬಿಕೆ ಮತ್ತು ಅಪನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *