ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಗು ಆರ್ಥಿಕ ಅಭಿವೃದ್ದಿಗಾಗಿ ಪ್ರತಿಯೊಬ್ಬರು ದೇವರ ಮೊರೆ ಹೋಗುತ್ತಾರೆ, ಮಾಡುವಂತ ಪೂಜೆಯಲ್ಲಿ ತಮ್ಮ ಕೋರಿಕೆಗಳನ್ನು ದೇವರ ಮುಂದೆ ಇಡುತ್ತಾರೆ. ಆದ್ರೆ ಪೂಜೆಯನ್ನು ಹೇಗೆ ಬೇಕು ಹಾಗೆ ಮಾಡಿದರೆ ಪೂಜೆಗೆ ತಕ್ಕ ಪ್ರತಿಫಲ ಸಿಗುವುದಿಲ್ಲ, ಅದಕ್ಕೆ ತನ್ನದೆಯಾದ ವಿಶಿಷ್ಟತೆ ಇರುತ್ತದೆ.

ಸತಿ ಪತಿ ಇಬ್ಬರ ಪೂಜೆ ಮಾಡುವಾಗ ಪತಿಯ ಯಾವ ಭಾಗದಲ್ಲಿ ಸತಿ ಪೂಜೆಗೆ ಕುಳಿತುಕೊಳ್ಳಬೇಕು.? ಹೀಗೆ ಕೂತುಕೊಂಡರೆ ಏನು ಉಪಯೋಗ ಅನ್ನೋದನ್ನ ತಿಳಿಯೋಣ ಬನ್ನಿ..

ಗಂಡ ಹೆಂಡತಿಯನ್ನು ಶಿವ ಪಾರ್ವತಿಯ ರೂಪದಲ್ಲಿ ಕಾಣಲು ಅದೆಷ್ಟೋ ಜನ ಇಷ್ಟ ಪಡುತ್ತಾರೆ, ಹಾಗು ರಾಮ ಸೀತೆಯ ರೀತಿಯಲ್ಲಿ ಇರಲು ಇಷ್ಟ ಪಡುತ್ತಾರೆ. ಗಂಡನಿಗೆ ಹೆಂಡತಿಯೇ ಅರ್ಧಂಗಿಣಿ ಹಾಗಾಗಿ ಪೂಜೆ ಮಾಡುವಾಗ ಪತಿಯ ಬಲಭಾಗದಲ್ಲಿ ಸತಿಯು ಇದ್ದರೆ ಒಳ್ಳೆಯದು ಎಂಬುದಾಗಿ ಪಂಡಿತರು ಹೇಳುತ್ತಾರೆ.

ಶಾಸ್ತ್ರ ಹೇಳುವ ಪ್ರಕಾರ ಪತಿಯ ಬಲಗಡೆಯಲ್ಲಿ ಪತ್ನಿ ಕೂತುಕೊಂಡು ಪೂಜೆಗೆ ಸಹಕರಿಸಬೇಕು, ಪ್ರತಿಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳು ಗಳನ್ನು ಸ್ಪರ್ಶಿಸಿ ಸಹಕರಿಸುವುದರಿಂದ ದೇವಾನುದೇವತೆಗಳ ಅನುಗ್ರಹ ಸಿಗುತ್ತದೆ.

ಸತಿಪತಿಗಳು ಮಾಡಿರುವಂತ ಕರ್ಮದ ಕೆಲಸಕ್ಕೆ ಶಿವ-ಶಕ್ತಿಯ ಸಹಾಯ ದೊರೆತು, ಬೇಗನೆ ಫಲ ಪ್ರಾಪ್ತಿಯಾಗುವುದು ಎಂಬುದಾಗಿ ಪಂಡಿತರು ಹೇಳುತ್ತಾರೆ. ಕರ್ಮದ ಕೆಲಸಕ್ಕೆ ಬೇಗನೆ ಪ್ರಾಪ್ತಿ ಫಲ ಸಿಗಲು ಹೆಂಡತಿ ಗಂಡನ ಬಲಗಡೆಯಲ್ಲಿ ಕುಳಿತು ಪೂಜೆ ಮಾಡುವುದು ಒಳ್ಳೆಯದು ಎಂಬುದಾಗಿ ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here