ಮನೆಯಲ್ಲಿಯೇ ಹಲವು ಸಮಸ್ಯೆಗಳ ನಿವಾರಣೆಗೆ ಮನೆಮದ್ದುಗಳಿವೆ ಆದ್ರೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು, ಹಾಗೂ ಸಮಯಕ್ಕೆ ತಕ್ಕಂತೆ ಅವುಗಳು ನಿವಾರಣೆಗೆ ಸಹಕಾರಿಯಾಗಿರುತ್ತವೆ. ದೇಹದ ಉಷ್ಣತೆ ನಿಯಂತ್ರಣಕ್ಕೆ ಏನು ಮಾಡಬೇಕು ಅನ್ನೋದರ ಜತೆಗೆ ಇನ್ನು ಕೆಲವಷ್ಟು ಮನೆಮದ್ದುಗಳನ್ನು ಈ ಮೂಲಕ ತಿಳಿಯೋಣ ಬನ್ನಿ.

ಮೂಲಂಗಿಯ ಕಷಾಯವನ್ನು ಮಾಡಿ ಸೇವಿಸುತ್ತಾ ಬಂದರೆ ಶರೀರದಲ್ಲಿ ಚುರುಕುತನ ಮೂಡುತ್ತದೆ, ದೇಹದ ಉಷ್ಣತೆ ತಗ್ಗುತ್ತದೆ ಹೊತ್ತು ಹೊತ್ತಿಗೆ ಹಸಿವೆ ಹೆಚ್ಚಾಗುತ್ತದೆ. ಮೂಲಂಗಿಯನ್ನು ಅಡುಗೆಯಲ್ಲಿ ಬಳಸಿ ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಹಲ್ಲು ಹುಳುಕು ಸಮಸ್ಯೆ: ಹುಳುಕುಹಳ್ಳಿಗೆ ದಿನಕ್ಕೆ ಎರಡು, ಮೂರೂ ಬಾರಿ ಎಮ್ಮೆ ಹಾಲನ್ನು ಒಂದು ಹನಿಯಷ್ಟು ಹಾಕುತ್ತ ಬಂದರೆ ಹಲ್ಲಿನ ಹುಳುಕು ಕಡಿಮೆಯಾಗುವುದು.

ಮೂತ್ರ ಉರಿ ಸಮಸ್ಯೆ: ಬೇಲದ ಹಣ್ಣಿನಲ್ಲಿರುವ ಬೀಜರಹಿತ ತಿರುಳನ್ನು ನೀರಿನಲ್ಲಿ ಕಲಸಿ ಆ ನೀರನ್ನು ಕುಡಿದರೆ ವಿಸರ್ಜನೆಯ ಸಮಯದಲ್ಲಿ ಉಂಟಾಗುವ ಉರಿ ಮತ್ತು ನೋವು ನೀಗುತ್ತದೆ.

ಜ್ಞಾಪಕ ಶಕ್ತಿ ವೃದ್ಧಿಯಾಗಲು: ಪ್ರತಿ ದಿನವೂ ಬೆಳಗಿನ ಹೊತ್ತು ಜೇನುತುಪ್ಪವನ್ನು ಬಿಸಿನೀರಿಗೆ ಹಾಕಿಕೊಂಡು ಸೇವಿಸುತ್ತಾ ಬಂದರೆ ಜ್ಞಾಪಕ ಶಕ್ತಿ ವೃದ್ಧಿಯಾಗುವುದು. ಹೀಗೆ ಸೇವಿಸುವಾಗ ಹೊಟ್ಟೆ ಖಾಲಿಯಿರಬೇಕು.

LEAVE A REPLY

Please enter your comment!
Please enter your name here