ಬಹಳಷ್ಟು ಜನಕ್ಕೆ ಗೊಂದಲ ಇರುತ್ತದೆ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಅನ್ನೋದನ್ನ ತಿಳಿಯಲು, ಚಿಂತಿಸುವ ಅಗತ್ಯವಿಲ್ಲ ಈಗ ಕ್ಷಣದಲ್ಲೇ ನಿಮ್ಮ ಮೊಬೈಲ್ ಫೋನ್ ಮೂಲಕ ಖಚಿತ ಪಡಿಸಿಕೊಳ್ಳಬಹುದು. ಹೇಗೆ ಅನ್ನೋ ಸುಲಭ ವಿಧಾನವನ್ನು ಮುಂದೆ ತಿಳಿಸಲಾಗಿದೆ ನೋಡಿ.

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ ಇದಕ್ಕೆ ಮತದಾನ ಮಾಡಲು ವೋಟರ್ ಐಡಿ ಕಡ್ಡಾಯವಾಗಿರುತ್ತದೆ ಹಾಗಾಗಿ ಯಾವುದಕ್ಕೂ ಒಮ್ಮೆ ನಿಮ್ಮ ಮೊಬೈಲ್ ನಲ್ಲೆ ಖಚಿತ ಪಡಿಸಿಕೊಳ್ಳಿ.

ವೋಟರ್​ ಹೆಲ್ಪ್​ಲೈನ್​: ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಎಂಬುದನ್ನು ಖಾತರಿ ಪಡಿಸಲು ವೋಟರ್​​ ಹೆಲ್ಪ್​​ಲೈನ್ ಸಹಾಯಕ. ಗೂಗಲ್​ ಪ್ಲೆ ಸ್ಟೋರ್​ನಲ್ಲಿ ಲಭ್ಯವಿರುವ ಈ ಆ್ಯಪ್​​ ಅನ್ನು ಡೌನ್​ ಲೋಡ್​ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಮತ್ತು ಕೆಲ ಮಾಹಿತಿಯನ್ನು ಒದಗಿಸಿದರೆ ಸಾಕು. ಕ್ಷಣಾರ್ಧದಲ್ಲೇ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ಮೊಬೈಲ್​ ಸ್ಕ್ರೀನ್​ನಲ್ಲಿ ಕಾಣಬಹುದು.

ಅಷ್ಟೇ ಅಲ್ಲದೆ 1950 ಸಂಖ್ಯೆಗೆ ಉಚಿತ ಸಂದೇಶವನ್ನು ಕಳುಹಿಸುವ ಮೂಲಕ ಹೆಸರನ್ನು ಖಾತರಿಪಡಿಸಿಕೊಳ್ಳಬಹುದು.ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಹೋದಲ್ಲಿ ಅಥವಾ ಡಿಲೀಟ್​ ಆಗಿದ್ದಲ್ಲಿ ಅರ್ಹ ಮತದಾರರು ಫಾರಂ ನಂ. 6 ಅನ್ನು ಭರ್ತಿ ಮಾಡಿ ಭೂತ್​ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಮಾರ್ಚ್​ 19ರ ವರೆಗೆ ಹೊಸ ಮತದಾರರು ಅರ್ಜಿ ಸಲ್ಲಿಸಬಹುದು.

LEAVE A REPLY

Please enter your comment!
Please enter your name here