ಸೌತ್ ಇಂಡಿಯನ್ ಸ್ಟಾರ್ ನಟ ವಿಜಯ್ ದೇವರೊಂಡ ಅವರು ತಮ್ಮ ೩೦ ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಆ ಸಂದರಾಬಾದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಹ ನಟ ವಿಜಯ್ ದೇವರ ಕೊಂಡ ಅವರಿಗೆ ವಿಶ್ ಮಾಡುವುದರ ಜತೆಗೆ ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ. ಈ ಗಿಫ್ಟ್ ಕಂಡು ಸಹ ನಟ ವಿಜಯ್ ದೇವರಕೊಂಡ ಖುಷಿ ಪಟ್ಟಿದ್ದಾರೆ.

ಅಷ್ಟಕ್ಕೂ ಅವರು ಕೊಟ್ಟಂತ ಗಿಫ್ಟ್ ಏನು ಗೊತ್ತಾ?
ನಟಿ ರಶ್ಮಿಕಾ ಮಂದಣ್ಣ ಅವರು ‘ಡಿಯರ್ ಬಾಬಿ’ ಎಂದು ವಿಜಯ್ ಮುಂಬರುವ ‘ಡಿಯರ್ ಕಾಮ್ರೆಡ್’ ಚಿತ್ರದ ಪಾತ್ರದ ಹೆಸರಿಟ್ಟು ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನೂ ಸಹ ‘ಲಿಲ್ಲಿ’ ಎಂದು ಆ ಚಿತ್ರದ ಪಾತ್ರದ ಹೆಸರು ನಮೂದಿಸಿ ಪೋಸ್ಟ್ ಮಾಡಿದ್ದಾರೆ. ನಟಿ ರಶ್ಮಿಕಾ ಕೇವಲ ವಿಶ್ ಮಾಡಿ ಸುಮ್ಮನಾಗಿಲ್ಲ. ಜೊತೆಗೆ, ‘ಬ್ರೇಸ್‌ಲೆಟ್’ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟನ್ನು ರಶ್ಮಿಕಾ ಕೊಟ್ಟ ತಕ್ಷಣವೇ ವಿಜಯ್ ಪ್ಯಾಕ್ ಬಿಚ್ಚಿ ನೋಡಿ ಖುಷಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ನಟಿಸಿದ ಗೀತಾ ಗೋವಿಂದಂ ಚಿತ್ರ ಹೆಚ್ಚು ಕಿಲ್ಕ್ ಎಡಿಎ ಬಳಿಕ ಈ ಜೋಡಿ ಹಲವು ಸಿನಿಮಾ ಮಾಡಲು ಮುಂದಾಗಿದೆ. ಮುಂದೆ ಬರಲಿರುವ ತೆಲುಗಿನ ‘ಡಿಯರ್ ಕಾಮ್ರೆಡ್ ‘ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿ ತೆರೆ ಮೇಲೆ ಬರಲಿದ್ದಾರೆ.

LEAVE A REPLY

Please enter your comment!
Please enter your name here