ದನ ಕರುಗಳು ವಿವಿಧ ರೀತಿಯ ಸೊಪ್ಪು ಸೇವೆಗಳನ್ನು ತಿಂದು ಜೀರ್ಣ ಮಾಡಿಕೊಳ್ಳುತ್ತವೆ, ಆದ್ರೆ ಈ ರೀತಿಯ ಸೊಪ್ಪನ್ನು ಸೇವನೆ ಮಾಡುವುದರಿಂದ ನಿಮ್ಮ ರಾಸುಗಳು ಅನಾರೋಗ್ಯಕ್ಕೆ ಹಿಡಾಗುತ್ತವೆ . ಒಂದುವೇಳೆ ಈ ರೀತಿಯ ಸೊಪ್ಪನ್ನು ತಿಂದ್ರೆ ರಾಸುಗಳು ಸಾವನ್ನಪ್ಪುವ ಪರಿಸ್ಥಿತಿ ಎದುರಾಗುವುದು.

ಅಷ್ಟಕ್ಕೂ ಇದು ಯಾವ ಸೊಪ್ಪು ಇದರಿಂದ ದನ ಕರುಗಳು ಯಾವೆಲ್ಲ ತೊಂದರೆ ಅನುಭವಿಸುತ್ತವೆ ಅನ್ನೋದನ್ನ ಇಲ್ಲಿ ಗಮನಿಸಿ. ವಾಯುವಿಳಂಗ ಗಿಡದ ಸೊಪ್ಪು ಸೇವಿಸಿದರೆ ಜಾನುವಾರುಗಳು ಸಾವನ್ನಪ್ಪುತ್ತವೆ. ಈ ವಾಯುವಿಳಂಗ ಮರಗಳ ನಡುವೆ ಹಾಗೂ ಸ್ವಲ್ಪ ತೇವಾಂಶ ಇರುವ ಜಾಗದಲ್ಲಿ ಹುಲುಸಾಗಿ ಬೆಳೆಯುತ್ತದೆ.

ರಾಸುಗಳು ಈ ಸೊಪ್ಪನ್ನು ತಿಂದ್ರೆ ಸಾವನ್ನಪುತ್ತವೆ ಅದಕ್ಕಿಂತ ಮುಂಚೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಮತ್ತು ಶರೀರದ ತಾಪಮಾನ ಕಡಿಮೆಯಾಗುತ್ತದೆ. ಈ ಹಂತದಲ್ಲಿ ಜಾನುವಾರುಗಳು ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸುತ್ತವೆ. ಆದ್ದರಿಂದ ನಿಮ್ಮ ರಾಸುಗಳನ್ನು ಈ ಗಿಡದ ಸೊಪ್ಪನ್ನು ತಿನ್ನದೇ ಇರುವಂತೆ ರಕ್ಷಿಸುವುದು ಒಳ್ಳೆಯದು. ಪ್ರತಿ ರೈತ ಬಾಂಧವರಿಗೆ ಇದನ್ನು ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here