ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ, ಮನೆಯಲ್ಲಿ ಯಾವುದೇ ತೊದರೆಗಳು ಆಗುತ್ತಿದ್ದರೆ ಅದಕ್ಕೆ ಕೆಲವೊಮ್ಮೆ ಮನೆಯ ವಾಸ್ತು ಕೂಡ ಒಂದು ಕಾರಣವಾಗಿರಬಹುದು, ಆಗಾಗಿ ಮನುಷ್ಯ ಎಷ್ಟೇ ದುಡಿದರು ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಂತಾಗುವುದು ಹಾಗು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಹೀಗೆಲ್ಲ ಸಮಸ್ಯೆಯನ್ನು ಎದುರಿಸುತ್ತಾನೆ ಹಾಗಾಗಿ ಇವುಗಳಿಂದ ದೂರವಿರಲು ಮನೆಯಲ್ಲಿ ಇಂಥ ವಸ್ತುಗಳಿದ್ದರೆ ಮನೆಮಂದಿಗೆಲ್ಲ ಒಳಿತಾಗುವುದು ಎಂಬುದಾಗಿ ವೇಧ ಶಾಸ್ತ್ರಗಳು ಹಾಗು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಮನೆಯಲ್ಲಿ ಯಾವ ವಸ್ತುಗಳು ಎಲ್ಲಿದ್ದರೆ ಹೇಗೆ? ಶುಭವಾಗುವುದು ಅನ್ನೋದರ ಬಗ್ಗೆ ತಿಳಿಯಲು ಮುಂದೆ ನೋಡಿ,
ಕುದುರೆ ಲಾಳ: ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ ಹಾಗಾಗಿ ಇದನ್ನು ಮನೆಯ ಒಳಗೆ ಅಥವಾ ಮನೆಯ ಮುಖ್ಯ ದ್ವಾರದಲ್ಲಿ ನೇತು ಹಾಕುವುದರಿಂದ ಮನೆಗೆ ಪಾಸಿಟಿವ್ ಎನರ್ಜಿ ದೊರೆಯುತ್ತದೆ. ಮನೆಯಲ್ಲಿರುವ ನೆಗೆಟಿವ್ ಎನರ್ಜಿ ನಿವಾರಣೆಯಾಗಿ ಪಾಸಿಟಿವ್ ಎನರ್ಜಿ ಮನೆಯಲಿ ಪಸರಿಸುತ್ತದೆ.

ಆಮೆ ಮೂರ್ತಿ: ಮನೆಯಲ್ಲಿ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುವುದು ಹಾಗು ಯಾವುದೇ ಕೆಲಸ ಸರಿಯಾಗಿ ಆಗದೆ ವಿಳಂಬ ಆಗುತ್ತಿದ್ದರೆ ಇದಕ್ಕೆ ಮನೆಯಲ್ಲಿನ ವಾಸ್ತು ಕಾರಣ ಅನ್ನೋದು ಪಂಡಿತರ ಮಾತು ಹಾಗಾಗಿ ಮನೆಯಲ್ಲಿ ಆಮೆ ಮೂರ್ತಿಯನ್ನು ತಂದು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗುತ್ತದೆ ಮಾಡುವಂತ ಕೆಲಸದಲ್ಲಿ ಉತ್ಸಕರಾಗಿರಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಇರಲು ಆಮೆ ಮೂರ್ತಿ ಸಹಕಾರಿಯಾಗಿದೆ.

ಕಂಚಿನ ಸಿಂಹ: ಮನೆಯಲ್ಲಿ ಸಕಾರಾತ್ಮಕ ಭಾವನೆ ಮನೆಮಂದಿಯಲ್ಲಿದ್ದರೆ ಮಾಡುವಂತ ಕೆಲಸವೆಲ್ಲ ಯಶಸ್ಸಿನ ಹಾದಿಗೆ ಕೊಂಡೊಯ್ಯುತ್ತದೆ ಹಾಗಾಗಿ ಮನೆಯಲ್ಲಿ ಕಂಚಿನ ಸಿಂಹ ಇರುವುದು ಒಳಿತು ಅನ್ನುತ್ತದೆ ವಾಸ್ತು ಶಾಸ್ತ್ರ. ಕಂಚಿನ ಸಿಂಹವನ್ನು ಮನೆಯ ಉತ್ತರ ಪೂರ್ವ ಅಂದರೆ ಈಶಾನ್ಯ ದಿಕ್ಕಿನಲ್ಲಿಡಬೇಕು. ಇವುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಮಂದಿಗೆಲ್ಲ ಪಾಸಿಟಿವ್ ಎನರ್ಜಿ ದೊರೆಯಲು ಸಹಕಾರಿಯಾಗಿರುತ್ತದೆ.

LEAVE A REPLY

Please enter your comment!
Please enter your name here